Sunday, 6th October 2024

ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾರ್ಲಿಂಗ್​ ಕೃಷ್ಣ

ಬೆಂಗಳೂರು: ಸ್ಯಾಂಡಲ್​ವುಡ್​ನ ಹೆಸರಾಂತ ನಟ ಡಾರ್ಲಿಂಗ್​ ಕೃಷ್ಣ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ದ್ದಾರೆ. ಇವರು 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜೊತೆಗೆ ಸಿನಿ ರಂಗದಲ್ಲಿ ಹತ್ತು ವರ್ಷ ಪೂರೈಸಿದ್ದಾರೆ.

ಕೃಷ್ಣ ನಟನಾಗಿ ಸ್ಯಾಂಡಲ್​ವುಡ್​ಗೆ ಕಾಲಿರಿಸಿ ದಶಕವಾಗಿದೆ. ಈ ಶುಭ ಸಂದರ್ಭದಲ್ಲಿ ಪತ್ನಿ ಮಿಲನಾ ನಾಗರಾಜ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ಸ್ನೇಹಿತರು, ಕುಟುಂಬಸ್ಥರು, ಅಭಿಮಾನಿಗಳು ನಟನಿಗೆ ಬರ್ತ್​ಡೇ ಶುಭಾಶಯದ ಜೊತೆಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕೃಷ್ಣ ನಂತರದಲ್ಲಿ ‘ಮದರಂಗಿ’ ಸಿನಿಮಾ ಮೂಲಕ ನಾಯಕನಾಗಿ ಚಲನಚಿತ್ರ ಗಳಲ್ಲಿ ನಟಿಸಲು ಪ್ರಾರಂಭಿಸಿದರು.

2013 ರಲ್ಲಿ ಬಿಡುಗಡೆಯಾದ ಈ ಚಿತ್ರ ಒಬ್ಬ ಅದ್ಭುತ ನಟನನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸಿತು. ಆದರೆ ಅವರಿಗೆ ಹಿಟ್​ ತಂದು ಕೊಟ್ಟಿದ್ದು ಮಾತ್ರ ‘ಲವ್​ ಮಾಕ್ಟೇಲ್’​. ಈ ಸಿನಿಮಾವನ್ನು ಜನರು ಕೊಂಚ ಹೆಚ್ಚೇ ಮೆಚ್ಚಿ ಕೊಂಡಿದ್ದರು. ಅದರ ನಂತರ ಬಂದ ‘ಲವ್​ ಮಾಕ್ಟೇಲ್​ 2’ ಕೂಡ ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸಿತು.

ಕೃಷ್ಣನ ಮುಂದಿನ ಸಿನಿಮಾ ‘ಶುಗರ್​ ಫ್ಯಾಕ್ಟರಿ’ ಚಿತ್ರತಂಡ ಹೊಸ ಪೋಸ್ಟರ್​ ರಿಲೀಸ್​ ಮಾಡಿ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಪೋಸ್ಟರ್​ ಕಲರ್​ಫುಲ್​ ಆಗಿದ್ದು, ಕೃಷ್ಣನ ಲುಕ್​ ಕೂಡ ಸೂಪರ್​ ಆಗಿದೆ. ಸಿನಿಮಾಗೆ ದೀಪಕ್​ ಅರಸ್​ ನಿರ್ದೇಶನದ ಜೊತೆಗೆ ಕಥೆಯನ್ನು ಕೂಡ ಬರೆದಿದ್ದಾರೆ. ಅದ್ವಿತಿ ಶೆಟ್ಟಿ, ಸೊನಾಲ್​ ಮೊಂಥೆರೋ ಮತ್ತು ಶಿಲ್ಪಾ ಶೆಟ್ಟಿ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣಗೆ ನಾಯಕಿಯಾಗಿದ್ದಾರೆ. ಇನ್ನೂ ಕೃಷ್ಣ ಅವರ ಬಹುನಿರೀಕ್ಷಿತ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದ ಟೈಟಲ್​ ಟ್ರ್ಯಾಕ್​ ಕೂಡ ಬಿಡುಗಡೆಯಾಗಲಿದೆ.