Friday, 13th December 2024

ಡಿಸೆಂಬರ್‌ಗೆ ಒಡೆಯನ ದರ್ಶನ

ಚಾಲೆಂಜಿಂಗ್ ಸ್ಟಾಾರ್ ದರ್ಶನ್ ಎಂದರೆ ಅವರ ಅಭಿಮಾನಿಗಳಿಗೆ ಸಂತಸವೋ ಸಂತಸ. ಇನ್ನು ದಾಸನ ಹೊಸ ಚಿತ್ರ ಸೆಟ್ಟೇರಿದೆ ಎಂದು ಗೊತ್ತಾಾದರೆ ಸಾಕು ಆ ಚಿತ್ರದ ಚಿತ್ರೀಕರಣ ಯಾವಾಗ ಮುಗಿಯುತ್ತೋೋ, ನಮ್ಮ ನೆಚ್ಚಿಿನ ನಟನನ್ನು ತೆರೆಯ ಮೇಲೆ ಯಾವಾಗ ಕಣ್ತುಂಬಕೊಳ್ಳುತ್ತೇವೋ ಎಂಬ ಕಾತುರ, ಪ್ರೇಕ್ಷಕರಲ್ಲಿ ಇರುತ್ತದೆ. ಈಗ ಅಂತಹದ್ದೇ ಕುತೂಹಲ, ಕಾತುರು ದರ್ಶನ್ ಅಭಿಮಾನಿಗಳಿಗಿದೆ ದರ್ಶನ್ ಅಭಿನಯದ ಬಹು ನಿರೀಕ್ಷೆಯ ‘ಒಡೆಯ’ ಚಿತ್ರದ ಬಿಡುಗಡೆ ದಿನಾಂಕ ನಿಗಧಿಯಾಗಿದೆ. ಟೀಸರ್ ಮತ್ತು ಹಾಡುಗಳ ಮೂಲಕವೇ ಸದ್ದು ಮಾಡಿದ್ದ ‘ಒಡೆಯ’ ಬೆಳ್ಳಿಿತೆರೆಯಲ್ಲಿ ರಾರಾಜಿಸಲು ಸಿದ್ಧವಾಗಿದ್ದಾಾನೆ. ಆ ಮೂಲಕ ‘ಒಡೆಯ’ನ ಅಬ್ಬರ ನೋಡಲು ಕುತೂಹಲದಿಂದ ಕಾಯುತ್ತಿಿರುವ ಡಿ ಬಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಸದ್ಯ ‘ಒಡೆಯ’ ಅಡ್ಡಾಾದಿಂದ ಕೇಳಿ ಬರುತ್ತಿಿರುವ ಸುದ್ದಿಯ ಪ್ರಕಾರ ’ಒಡೆಯ ’ ಡಿಸೆಂಬರ್12’ಕ್ಕೆೆ ತೆರೆಗೆ ಬರಲು ರೆಡಿಯಾಗಿದೆಯಂತೆ.

ಈ ಮೊದಲು ಒಡೆಯ ಡಿಸೆಂಬರ್ 20ಕ್ಕೆೆ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಸಲ್ಮಾಾನ್ ಖಾನ್ ಮತ್ತು ಸುದೀಪ್ ಅಭಿನಯದ ’ದಬಾಂಗ್-3’ ಚಿತ್ರ ರಿಲೀಸ್ ದಿನದಂದೇ ‘ಡೆಯ’ ಕೂಡ ದರ್ಶನ ನೀಡಲಿದ್ದಾನೆ ಎನ್ನುವ ಸುದ್ದಿ ಹರಿದಾಡಿತ್ತು.
ಆದರೆ ಈ ಹಿಂದೆ ಘೋಷಿಸಿದ್ದ ದಿನಕ್ಕೂ ಮೊದಲೇ ಚಿತ್ರ ತೆರೆಗೆ ತರಲು ಚಿತ್ರ ತಂಡ ಸಜ್ಜಾಾಗಿದೆ. ಇನ್ನು ವಿಶೇಷ ಎಂದರೆ ಚಿತ್ರದ ಟ್ರೈಲರ್ ರಿಲೀಸ್ ಗೂ ಡೇಟ್ ಫ್ಸಿೃ್‌ ಆಗಿದೆ. ಒಡೆಯನ ಟ್ರೇಲರ್ ಡಿಸೆಂಬರ್ 1ರಂದು ಬಿಡುಗಡೆಯಾಗಲಿದೆ.

ಡಿಸೆಂಬರ್ 1ಕ್ಕೆೆ ಟ್ರೇಲರ್ ರಿಲೀಸ್ ಮಾಡಿ ಡಿಸೆಂಬರ್ 12ಕ್ಕೆೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿಿದೆ. ಆದರೆ ಈ ಬಗ್ಗೆೆ ಚಿತ್ರತಂಡ ಎಲ್ಲೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಚಿತ್ರಕ್ಕೆೆ ಸೆನ್ಸಾಾರ್ ಸರ್ಟಿಫಿಕೇಟ್ ಸಿಕ್ಕಿಿದ ಬಳಿಕ ಬಿಡುಗಡೆಯ ಅಧಿಕೃತ ದಿನಾಂಕ ಗೊತ್ತಾಾಗಲಿದೆ. ಸಂದೇಶ್ ನಾಗರಾಜ್ ನಿರ್ಮಾಣದ ಜವಾಬ್ದಾಾರಿ ಹೊತ್ತಿಿರುವ ಈ ಚಿತ್ರಕ್ಕೆೆ ಎಂ.ಡಿ ಶ್ರೀಧರ್ ಆ್ಯಕ್ಷನ್ ಕಟ್ ಹೇಳಿದ್ದಾಾರೆ.
ದಚ್ಚುಗೆ ಜತೆಯಾಗಿ ನಟಿ ಸನಾ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ. ‘ಒಡೆಯ’ ತಮಿಳಿನ ‘ವೀರಂ’ ಸಿನಿಮಾದ ರಿಮೇಕ್‌ಆಗಿದೆ. ’ವೀರಂ’ ಚಿತ್ರದಲ್ಲಿ ಅಜಿತ್ ನಾಯಕನಾಗಿ ಅಬ್ಬರಿಸಿದ್ದರು. ಅದೇ ಪಾತ್ರದಲ್ಲಿ ಈಗ ದರ್ಶನ್ ಹವಾ ಎಬ್ಬಿಿಸಲಿದ್ದಾಾರೆ.