Friday, 13th December 2024

BBK 11: ಗೋಲ್ಡ್ ಸುರೇಶ್​ಗೆ ಫುಲ್ ಕಾಟ ಕೊಟ್ಟ ಧನರಾಜ್ ಆಚಾರ್: ವಿಡಿಯೋ ನೋಡಿ

Gold Suresh and Dhanraj Achar

ಜಗಳಗಳಿಂದಲೇ ಕೂಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ನಗುವಿನ ಭರಾಟೆ ಶುರುವಾಗಿದೆ. ಹನುಮಂತ ಬಂದ ಮೇಲಂತು ಮನೆಯ ಕಳೆ ಸಂಪೂರ್ಣ ಬದಲಾಗಿದೆ. ಹನುಮಂತ ಹಾಗು ಧನರಾಜ್ ಆಚಾರ್ ಜೋಡಿ ಇಡಿ ಮನೆಯನ್ನು ನಗಿಸುತ್ತಿದೆ. ಇದೀಗ ಬಿಗ್ ಬಾಸ್ ನೀಡಿರುವ ಒಂದು ಟಾಸ್ಕ್ ಕೂಡ ಮನೆಯನ್ನು ನಗುವಿನ ಅಲೆಯಲ್ಲಿ ತೇಲಿಸಿದೆ. ಇದರಲ್ಲಿ ಧನರಾಜ್ ಆಚಾರ್ ಅವರು ಗೋಲ್ಡ್ ಸುರೇಶ್ ಅವರನ್ನು ಸಖತ್ ಆಗಿ ಗೋಳು ಹೊಯ್ಯಿಕೊಂಡಿದ್ದಾರೆ.

ಬಿಗ್ ಬಾಸ್ ನೀಡಿರುವ ಟಾಸ್ಕ್ ಏನು?:

ಈ ವಾರ ಬಿಗ್ ಬಾಸ್ ಮನೆ ಮಂದಿಗೆ ಗ್ರೂಪ್ ಟಾಸ್ಕ್ ನೀಡಿದ್ದಾರೆ. ಇದಕ್ಕೆ ಮೂರು ಜನರಿರುವಂತಹ ನಾಲ್ಕು ಗುಂಪುಗಳನ್ನು ರಚಿಸಲಾಗಿದೆ. ಶಿಶಿರ್‌‌ ಟೀಂನಲ್ಲಿ ಧನರಾಜ್‌, ಐಶ್ವರ್ಯಾ ಇದ್ದರೆ, ಗೌತಮಿ ಟೀಂನಲ್ಲಿ ತ್ರಿವಿಕ್ರಮ್‌ ಅನುಷಾ ಇದ್ದಾರೆ. ಹಾಘೆಯೆ ಚೈತ್ರಾ ಟೀಂನಲ್ಲಿ ಮೋಕ್ಷಿತಾ, ಧರ್ಮ, ಮಂಜಣ್ಣ ಟೀಂನಲ್ಲಿ ಭವ್ಯಾ, ಸುರೇಶ್‌ ಇದ್ದಾರೆ.

ಕಾಲಕಾಲಕ್ಕೆ ಇವರುಗಳ ಮಧ್ಯೆ ಟಾಸ್ಕ್ ನೀಡಲಾಗುತ್ತದೆ. ಜೊತೆಗೆ ಗೆದ್ದ ತಂಡಕ್ಕೆ ವಿಶೇಷ ಪವರ್ ಕೂಡ ನೀಡಲಾಗುತ್ತದೆ. ಇದರಲ್ಲಿ ಒಂದು ಪವರ್ ಟಾಸ್ಕ್‌ನಲ್ಲಿ ಸೋತ ತಂಡದಿಂದ ಸೇವೆ ಮಾಡಿಸಿಕೊಳ್ಳುವ ಅಧಿಕಾರ ಗೆದ್ದ ತಂಡಕ್ಕಿದೆ. ಅದರಂತೆ ಇದೀಗ ಸೋತ ಉಗ್ರಂ ಮಂಜು ತಂಡದಿಂದ ಸೇವೆ ಮಾಡಿಸಿಕೊಳ್ಳಲು ಗೆದ್ದ ತಂಡ ನಿರ್ಧಾರ ಮಾಡಿದೆ.

ಗೆದ್ದ ತಂಡ ಮನರಂಜನೆಯ ಬೇಡಿಕೆ ಇಟ್ಟಿದೆ. ಅದಕ್ಕೆ, ಉಗ್ರಂ ಮಂಜು ಹಾಗೂ ಗೋಲ್ಡ್ ಸುರೇಶ್‌ ಸೀರೆಯುಟ್ಟು ಬಂದಿದ್ದಾರೆ, ಭವ್ಯಾ ಗೌಡ ಗಂಡಿನ ಅವತಾರ ತಾಳಿ.. ಪುಟ್ಟ ಸ್ಕಿಟ್ ಮಾಡಿ ಮನರಂಜನೆ ನೀಡಿದ್ದಾರೆ. ಇವುಗಳ ಮಧ್ಯೆ ಗೋಲ್ಡ್ ಸುರೇಶ್‌ಗೆ ಧನರಾಜ್ ಆಚಾರ್ ಫುಲ್ ಕಾಟ ಕೊಡುತ್ತಿದ್ದಾರೆ. ಬೇಡದ ಕೆಲಸಗಳನ್ನೆಲ್ಲಾ ಗೋಲ್ಡ್ ಸುರೇಶ್ ಕೈಯಲ್ಲಿ ಮಾಡಿಸುತ್ತಿದ್ದಾರೆ.

ಧನರಾಜ್ ಕೊಟ್ಟ ಕಾಟದಿಂದ ಸುರೇಶ್ ಅವರು ನಾನು ಅದನ್ನ ಮಾಡೋದಿಲ್ಲ, ಇದನ್ನ ಮಾಡೋದಿಲ್ಲ ಅಂತ ಹೇಳ್ತಾನೇ ಇದ್ದಾರೆ. ಆದರೆ ಧನರಾಜ್ ಸುಮ್ನೆ ಬಿಡುತ್ತಿಲ್ಲ. ಗೋಡೆ ಮೇಲಿನ ಗೊಂಬೆ ಹಲ್ಲು ಕಪ್ಪಾಗಿದೆ. ಅದನ್ನ ಕ್ಲೀನ್ ಮಾಡಿ ಅಂತಲೇ ಗೋಲ್ಡ್ ಸುರೇಶ್‌ಗೆ ಕೆಲಸ ಕೊಟ್ಟಿದ್ದಾರೆ. ಹಾಗೆಯೆ ಭವ್ಯಾ ಅವರಿಗೆ ನನಗೆ ಊಟ ಮಾಡಿಸು ಎಂದು ಹೇಳಿದ್ದಾರೆ. ಇದನ್ನೆಲ್ಲ ಕಂಡು ಮಿಕ್ಕಿದ ಮನೆಮಂದಿ ಫುಲ್ ಎಂಜಾಯ್ ಮಾಡಿದ್ದಾರೆ.

BBK 11: ಗೌತಮಿ-ಮೋಕ್ಷಿತಾ ಬಳಿ ಕ್ಷಮೆ ಕೇಳಿದ ಮಂಜಣ್ಣ: ಮತ್ತೆ ಒಂದಾದ್ರು ಬೆಸ್ಟ್ ಫ್ರೆಂಡ್ಸ್