Tuesday, 10th December 2024

BBK 11: ಬಿಗ್ ಬಾಸ್ ಮನೆಗೆ ಬಂದ ಅಪರಿಚಿತರು: ಬಿಕ್ಕಿಬಿಕ್ಕಿ ಅತ್ತ ಧನರಾಜ್ ಆಚಾರ್

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಐದನೇ ವಾರ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಈ ವಾರ ಮನೆಯ ಕ್ಯಾಪ್ಟನ್ ಆಗಿ ಹನುಮಂತ ಅವರು ಆಯ್ಕೆ ಆದರು. ಬಳಿಕ ನಡೆದ ನಾಮಿನೇಷನ್ ಪ್ರಕ್ರಿಯೆ ಕೂಡ ವಿಭಿನ್ನವಾಗಿತ್ತು. ಕ್ಯಾಪ್ಟನ್ ಸಹಿತ ಒಟ್ಟು 12 ಮಂದಿ ನಾಮಿನೇಟ್ ಆಗಿದ್ದಾರೆ. ಈ ಬಾರಿ ಬಿಗ್ ಬಾಸ್ ಹೊಸ ಹೊಸ ವಿಶೇಷ ಟಾಸ್ಕ್​ಗಳನ್ನು ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಇದು ನೋಡುಗರಿಗೆ ಕೂಡ ಕುತೂಹಲ ಹೆಚ್ಚಿಸಿದೆ. ಅದರಂತೆ ಬಿಗ್ ಬಾಸ್ ಮನೆಯಿಂದ ಬಂದ ಲೆಟರ್ ಓದಲು ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿದ್ದರು.

ಟಾಸ್ಕ್ ಏನೆಂದರೆ ಬಿಗ್ ಬಾಸ್ ಮನೆಯೊಳಗೆ ಮುಸುಕು ಹಾಕಿಕೊಂಡು ಕೆಲ ಅಪರಿಚಿತರು ಬರುತ್ತಾರೆ. ಅವರು ಸ್ಪರ್ಧಿಗಳ ಏಕಾಗ್ರತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಸ್ಪರ್ಧಿಗಳು ಮನೆಗೆ ಸಂಬಂಧಿಸಿದ ಏನೇ ಹೊಸದನ್ನು ಕಂಡರೂ, ಯಾವುದಕ್ಕೂ ಪ್ರತಿಕ್ರಿಯೆ ನೀಡಬಾರದು. ಈ ಗೇಮ್‌ನಲ್ಲಿ ಫೌಲ್ ಆಗದೇ ಇದ್ದರೆ, ಸ್ಪರ್ಧಿಗಳು ತಮ್ಮ ಮನೆಯವರಿಂದ ಬಂದ ಲೆಟರ್ ಕೊಡುಲಾಗುತ್ತದೆ. ಫೌಲ್ ಆದ ಸ್ಪರ್ಧಿಗೆ ಆ ಲೆಟರ್ ಸಿಗುವುದಿಲ್ಲ.

ಈ ಗೇಮ್​ನಲ್ಲಿ ಧನರಾಜ್ ಆಚಾರ್ ಫೌಲ್ ಆಗಿದ್ದಾರೆ. ಅವರಿಗೆ ಮನೆಯಿಂದ ಬಂದ ಪತ್ರ ಓದಲು ಸಾಧ್ಯವಾಗಿಲಿಲ್ಲ. ಧನರಾಜ್ ಕೆಲವೇ ತಿಂಗಳ ಹಿಂದೆ ಹೆಣ್ಣು ಮಗುವಿನ ತಂದೆಯಾಗಿದ್ದರು. ತನ್ನ ಮುದ್ದು ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿದ್ದರು. ಇದನ್ನೇ ಉಪಾಯವನ್ನಾಗಿ ಇಟ್ಟುಕೊಂಡ ಅಪರಿಚಿತರು ಅವರ ಏಕಾಗ್ರತೆಗೆ ಭಂಗ ತರಬೇಕು ಎಂದು ಮಗುವಿನ ಗೊಂಬೆಯನ್ನೆಲ್ಲಾ ತೋರಿಸಿದ್ದಾರೆ. ಆಗ ಧನರಾಜ್ ಭಾವುಕರಾದಂತೆ ಕಂಡಿದೆ. ಇದರಿಂದ ತಪ್ಪಿಸಿಕೊಳ್ಳಬೇಕೆಂದು ಬಾತ್‌ರೂಮ್‌ಗೆ ಹೋಗಿ ಬಚ್ಚಿಟ್ಟುಕೊಂಡಿದ್ದಾರೆ.

ಆದರೆ, ನಿಯಮದ ಪ್ರಕಾರ ಆ ರೀತಿ ಮಾಡುವಂತಿಲ್ಲ ಹೀಗಾಗಿ ಬಿಗ್ ಬಾಸ್ ಅವರನ್ನು ಫೌಲ್ ಎಂದು ಘೋಷಣೆ ಮಾಡಿದರು. ಇದು ಗೊತ್ತಾಗುತ್ತಿದ್ದಂತೆಯೇ, ಧನರಾಜ್‌ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನನಗೆ ಯಾವುದೇ ಸಂದೇಶ ಬರುವುದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಮನೆಯವರು ಅವರನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ. ಧನರಾಜ್ ಆಚಾರ್ ಅವರಂತೆಯೇ ಚೈತ್ರಾ ಕುಂದಾಪುರ, ಭವ್ಯಾ ಗೌಡ ಕೂಡ ಕಣ್ಣೀರಿಟ್ಟಿದ್ದಾರೆ. ಅನುಷಾ ರೈ ಅವರು ಗೆದ್ದು ಪತ್ರ ಪಡೆದುಕೊಂಡಿದ್ದಾರೆ. “ಮಗಳೇ, ನಿನ್ನನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ” ಎಂಬ ಸಂದೇಶ ಅನುಷಾ ರೈಗೆ ಬಂದಿದೆ. ಅದನ್ನು ಓದಿದ ಕೂಡಲೇ ಅನುಷಾ ಕೂಡ ಕಣ್ಣೀರಿಟ್ಟಿದ್ದಾರೆ.

BBK 11: ನನ್ನ ಗುಣದ ಬಗ್ಗೆ ಮಾತಾಡ್ಬೇಡ: ಬಿಗ್ ಬಾಸ್ ಮನೆಯಲ್ಲಿ ಮಂಜು-ಭವ್ಯಾ ನಡುವೆ ಮಾತಿನ ವಾರ್