Tuesday, 10th December 2024

BBK 11: ಭಯ ಪಡುವ ಧನರಾಜ್ ಈಗ ಇಲ್ಲ: ಮೋಕ್ಷಿತಾ-ಅನುಷಾ ಚುಚ್ಚು ಮಾತಿಗೆ ರೊಚ್ಚಿಗೆದ್ದ ಧನರಾಜ್

Mokshitha and Dhanraj

ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ಇಷ್ಟು ದಿನ ಸೈಲೆಂಟ್ ಆಗಿದ್ದ ಧನರಾಜ್ ಆಚಾರ್ ಇದೀಗ ವೈಲೆಂಟ್ ಆಗಿದ್ದಾರೆ. ಮೋಕ್ಷಿತಾ ಪೈ ಹಾಗೂ ಅನುಷಾ ರೈ ಅವರ ಜೊತೆ ಜಗಳ ಆಡುವಾಗ ಧನರಾಜ್ ರೊಚ್ಚಿಗೆದ್ದಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡುವ ಚಟುವಟಿಕೆ ನಡುವೆ ಮನೆಯೊಳಗೆ ದೊಡ್ಡ ಗಲಾಟೆ ನಡೆದಿದೆ. ಎದುರಾಳಿ ಜೋರು ಮಾತನಾಡಿದರೆ ಇಷ್ಟು ದಿನ ಸೈಲೆಂಟ್ ಆಗುತ್ತಿದ್ದ ಧನರಾಜ್ ಈಗ ನಾನು ಭಯ ಪಡುವ ಧನರಾಜ್ ಅಲ್ಲ ಎಂದು ಹೇಳಿದ್ದಾರೆ.

ಬಿಗ್ ಬಾಸ್​ನಿಂದ ಕ್ಯಾಪ್ಟನ್ಸಿ ಟಾಸ್ಕ್:

ಬಿಗ್ ಬಾಸ್ ಮನೆ ಮಂದಿಗೆ ಈ ವಾರ ಗ್ರೂಪ್ ಟಾಸ್ಕ್ ನೀಡಲಾಗಿತ್ತು. ಇದಕ್ಕೆ ಮೂರು ಜನರಿರುವಂತಹ ನಾಲ್ಕು ಗುಂಪುಗಳನ್ನು ರಚಿಸಲಾಗಿತ್ತು. ಶಿಶಿರ್‌‌ ಟೀಂನಲ್ಲಿ ಧನರಾಜ್‌, ಐಶ್ವರ್ಯಾ ಇದ್ದರೆ, ಗೌತಮಿ ಟೀಂನಲ್ಲಿ ತ್ರಿವಿಕ್ರಮ್‌ ಅನುಷಾ ಹಾಗೆಯೆ ಚೈತ್ರಾ ಟೀಂನಲ್ಲಿ ಮೋಕ್ಷಿತಾ, ಧರ್ಮ, ಮಂಜಣ್ಣ ಟೀಂನಲ್ಲಿ ಭವ್ಯಾ, ಸುರೇಶ್‌ ಇದ್ದರು. ಇವರ ಮಧ್ಯೆ ನಡೆದ ಟಾಸ್ಕ್​ನಲ್ಲಿ ಗೆದ್ದ ತಂಡಕ್ಕೆ ವಿಶೇಷ ಪವರ್ ಕೂಡ ನೀಡಲಾಗುತ್ತಿತ್ತು.

ಬಿಗ್ ಬಾಸ್ ನಿಲ್ಲೇ ನಿಲ್ಲೇ ಕಾವೇರಿ ಎನ್ನುವ ಟಾಸ್ಕ್‌ ನೀಡಿದ್ದರು. ಈ ಗೇಮ್​ನಲ್ಲಿ ಉಗ್ರಂ ಮಂಜು ಅವರು ತಂಡ ಗೆದ್ದು ಬೀಗಿದೆ. ಇವರು ಕ್ಯಾಪ್ಟನ್ಸಿ ಕಾರ್ಡ್ ಪಡೆದುಕೊಂಡಿದ್ದಾರೆ. ಈ ಮೂಲಕ ಮಂಜು, ಭವ್ಯಾ, ಸುರೇಶ್ ಅವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭಾಗಿಯಾಗಲಿದ್ದಾರೆ. ಇದಾ ಬಳಿಕ ಕ್ಯಾಪ್ಟನ್ ಹನುಮಂತ ಅವರು ಐಶ್ವರ್ಯಾ, ಗೌತಮಿ ಜಾಧವ್ ಮತ್ತು ಚೈತ್ರಾ ಕುಂದಾಪುರ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಟ್ಟರು.

ಇದೀಗ ಉಳಿದ ಸ್ಪರ್ಧಿಗಳ ಪೈಕಿ ಇಬ್ಬರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡುವ ಚಟುವಟಿಕೆ ನೀಡಲಾಗಿದೆ. ಇದರ ಅನುಸಾರ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನ ಹೊರಹಾಕಬೇಕಿದೆ. ಈ ವೇಳೆ ಸ್ಪರ್ಧಿಗಳಿಂದ ಹೆಚ್ಚು ಟಾರ್ಗೆಟ್ ಆದವರು ಧನರಾಜ್ ಆಚಾರ್‌. ಕ್ಯಾಪ್ಟನ್‌ ಆಗೋಕೆ ಅರ್ಹತೆ ಇಲ್ಲ ಎಂದು ಮೋಕ್ಷಿತಾ ಪೈ ಹಾಗೂ ಅನುಷಾ ರೈ ಅವರ ಫೋಟೋಗಳನ್ನ ಧನರಾಜ್ ಹಾಕುತ್ತಾರೆ. ಈ ವೇಳೆ ಧನರಾಜ್ ವಿರುದ್ಧ ಮೋಕ್ಷಿತಾ ಪೈ ಹಾಗೂ ಅನುಷಾ ರೈ ಸಿಡಿದೆದ್ದಿದ್ದಾರೆ.

ನಿಮಗಿಂತ ನನಗೆ ಅರ್ಹತೆ ಇದೆ. ಹೇಗೆ ನೀವು ನನ್ನನ್ನು ಕ್ಯಾಪ್ಟನ್ಸಿಯಿಂದ ಹೊರಗೆ ಇಡುತ್ತೀರಿ ಎಂದು ಅನುಷಾ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಇದೇ ವೇಳೆ ಉಗ್ರಂ ಮಂಜು ಕೂಡ, ಧನರಾಜ್ ಅವರು ಮೆಚುರಿಟಿಯಿಂದ ಆಟವನ್ನು ಆಡಬೇಕು ಎಂದಿದ್ದಾರೆ. ಅತ್ತ ಮೋಕ್ಷಿತಾ ಅವರು, ನೆಟ್ಟುಗೆ ಡಿಸಿಷನ್ ತೆಗೆದುಕೊಳ್ಳಲು ಬರಲ್ಲ. ತಲೆಯಲ್ಲಿ ಸೆನ್ಸ್ ಇದೆಯಾ. ಮತ್ತೆ ನೀನು ಕ್ಯಾಪ್ಟನ್, ನಿನ್ನಂತವರು ಕ್ಯಾಪ್ಟನ್​ ಧನರಾಜ್​ಗೆ ಹೇಳಿದ್ದಾರೆ.

ಈ ಎಲ್ಲ ವಿಚಾರದಿಂದ ಕೆರಳಿದ ಧನರಾಜ್, ಭಯ ಪಡುವ ಧನರಾಜ್ ಈಗ ಇಲ್ಲವೇ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಆದರೆ, ಕೊನೆಯಲ್ಲಿ ಈ ಎಲ್ಲ ವಿಚಾರ ಮುಗಿದ ಬಳಿಕ, ನಾನಿನ್ನೂ ಸ್ಟ್ರಾಂಗ್ ಆಗಬೇಕು ಎಂದು ಹನುಮಂತ ಹಾಗೂ ಭವ್ಯಾ ಗೌಡ ಮುಂದೆ ಕಣ್ಣೀರು ಸುರಿಸಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ವಿಚಿತ್ರ ವರ್ತನೆ: ಗಂಟೆ ಬಾರಿಸಿ, ಊದುಬತ್ತಿ ಹಿಡಿದು ತನಗೆ ತಾನೇ ಪೂಜೆ ಮಾಡಿಕೊಂಡ್ರು