Tuesday, 10th December 2024

BBK 11: ಧನರಾಜ್ ಸೇಫ್: ಈ ವಾರ ಮನೆಯಿಂದ ಹೊರ ಹೋಗಲು 9 ಮಂದಿ ನಾಮಿನೇಟ್

BBK 11 Week Nomination

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಕುತೂಹಲ ಮೂಡಿಸುತ್ತಿದೆ. ಲಾಯರ್ ಜಗದೀಶ್ ಹಾಗೂ ರಂಜಿತ್ ನಿರ್ಗಮನದ ಬಳಿಕ ಶೋ ಕಳೆ ಕಳೆದುಕೊಳ್ಳುತ್ತೆ ಎಂಬ ಮಾತಿತ್ತು. ಆದರೆ, ಇದರ ಮಧ್ಯೆ ಹನುಮಂತ ಅವರನ್ನು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಕಳಿಹಿಸಿ ಹಾಡು, ನಗುವಿನ ಬಾಡೂಟ ಬಿಗ್ ಬಾಸ್ ನೀಡುತ್ತಿದೆ. ಇದರ ಜೊತೆಗೆ ನಾಮಿನೇಷನ್ ತೂಗುಗತ್ತಿ ಕೂಡ ಸ್ಪರ್ಧಿಗಳ ಮೇಲಿದೆ.

ನಾಲ್ಕನೇ ವಾರ ದೊಡ್ಮನೆಯಿಂದ ಹೊರಹೋಗಲು ಒಟ್ಟು ಒಂಬತ್ತು ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಉಗ್ರಂ ಮಂಜು ಹಾಗೂ ಮಾನಸ ನೇರ ನಾಮಿನೇಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ಆದ ತ್ರಿವಿಕ್ರಮ್ ಹಾಗೂ ಐಶ್ವರ್ಯ ಇವರನ್ನು ಡೈರೆಕ್ಟ್ ನಾಮಿನೇಟ್ ಮಾಡಿದ್ದಾರೆ. ಇವರ ಜೊತೆಗೆ ಗೋಲ್ಡ್ ಸುರೇಶ್, ಶಿಶಿರ್ ಶಾಸ್ತ್ರೀ, ಗೌತಮಿ, ಹಂಸ, ಮೋಕ್ಷಿತಾ, ಚೈತ್ರಾ ಕುಂದಾಪುರ ಹಾಗೂ ಭವ್ಯಾ ನಾಮಿನೇಟ್ ಆಗಿದ್ದಾರೆ.

ನಾಮಿನೇಟ್ ಮಾಡಲು ಐಶ್ವರ್ಯ ನೀಡಿದ ಕಾರಣ ಕೇಳಿ ಕೆರಳಿದ ಮಾನಸ ಅವರು ಮಾತಿ ಭರದಲ್ಲಿ ಏಕವಚನದಲ್ಲಿಯೇ ಮಾನಸ ಅವರು ಇಮೆಚ್ಯೂರ್‌ ಆಗಿದ್ದಾರೆ ಅಂತ ನಮಗೆ ಅನ್ನಿಸಿತು ಎಂದು ಐಶ್ವರ್ಯ ಹೇಳಿದ್ದಾರೆ. ಇದಕ್ಕೆ ಮಾನಸ ಅವರು ರೊಚ್ಚಿಗೆದ್ದು, ನನ್ನ ಗುಣ ಡಿಸೈಡ್‌ ಮಾಡೋಕೆ ನೀನ್ಯಾವಳೆ? ಎಂದು ಏಕವಚನದಲ್ಲೇ ಕೂಗಿದ್ದಾರೆ. ಮಾತ್ರವಲ್ಲ ಐಶ್ವರ್ಯಾ ಅವರು ಯಾವಳೂ ಅಂತ ಆ ತರ ಎಲ್ಲ ಮಾತನಾಡಬೇಡಿ ಎಂದಿದ್ದಾರೆ.

ಗೋಲ್ಡ್ ಸುರೇಶ್ ಅವರು ಅವಶ್ಯಕತೆಗೆ ಇಲ್ಲದ್ದನ್ನು ಮಾತನಾಡುತ್ತಾರೆ. ಹಾಗೆಯೆ ಭವ್ಯಾ ಗೌಡ ಅವರು ಹೇಳಿದ, ಇನ್ನೊಬ್ಬರನ್ನು ತುಳಿದು ಮೇಲೆ ಹೋಗ್ತಿನಿ ಅನ್ನೋ ಅವರ ಮಾತು ನನಗೆ ಇಷ್ಟ ಆಗಲಿಲ್ಲ ಎಂದು ಗೌತಮಿ ಜಾಧವ್ ಕಾರಣ ನೀಡಿ ನಾಮಿನೇಟ್ ಮಾಡಿದ್ದಾರೆ. ಮಂಜು ಅವರು ಹಂಸ ಹೆಸರು ತೆಗೆದುಕೊಂಡಿದ್ದು, ಅವರು ಯಾವುದೇ ಟಾಸ್ಕ್‌ ಅನ್ನು ವೈಯಕ್ತಿಕವಾಗಿ ಆಡಿಲ್ಲ. ಅವರ ವೈಯಕ್ತಿಕ ಪರ್ಫಾಮೆನ್ಸ್ ಏನೂ ಇಲ್ಲ ಎಂದಿದ್ದಾರೆ. ಭವ್ಯಾ ಗೌಡ ಟಾಸ್ಕ್‌ನಲ್ಲೂ ಅಷ್ಟಕ್ಕಷ್ಟೇ. ಅವರಲ್ಲಿ ನಾನು ಅನ್ನೋದು ಜಾಸ್ತಿ ಇದೆ ಎಂದು ಕಾರಣ ನೀಡಿದ್ದಾರೆ.

ಹನುಮಂತ ಕನ್ಫ್ಯೂಷನ್:

ಹನುಮಂತ ಅವರು ನಾಮಿನೇಷನ್ ವಿಚಾರದಲ್ಲಿ ಕನ್ಫ್ಯೂಷನ್ ಆಗಿದ್ದಾರೆ. ಇಬ್ಬರು ಸದಸ್ಯರನ್ನು ನಾಮಿನೇಟ್ ಮಾಡುವಂತೆ ಬಿಗ್ ಬಾಸ್ ಆದೇಶ ನೀಡಿದ್ದಾರೆ. ಆದರೆ, ಹನುಮಂತ ನಾಮಿನೇಟ್ ಮಾಡುವುದಕ್ಕೆ ಕಷ್ಟಪಟ್ಟಿದ್ದಾರೆ. “ಎಲ್ಲರೂ ನನ್ನ ಜೊತೆಗೆ ಚೆನ್ನಾಗಿ ಇದ್ದಾರೆ. ಎಲ್ಲರೂ ಉತ್ತಮವಾಗಿ ಆಟ ಆಡುತ್ತಿದ್ದಾರೆ. ನಾನು ಯಾರನ್ನೂ ನಾಮಿನೇಟ್ ಮಾಡಲಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊನೆಗೆ ಹನುಮಂತ ಅವರು ಹಂಸ ಹೆಸರು ಹೇಳಿದ್ದಾರೆ. ಆದರೆ, ಇನ್ನೊಂದು ಆಯ್ಕೆಯಲ್ಲಿ ತಮ್ಮ ಹೆಸರನ್ನೇ ಹೇಳಿಕೊಂಡಿದ್ದಾರೆ. ಆದರೆ, ಬಿಗ್ ಬಾಸ್ ಮನೆಯ ನಿಯಮದ ಪ್ರಕಾರ ತಮ್ಮ ಹೆಸರನ್ನು ತಾವೇ ನಾಮಿನೇಟ್ ಮಾಡುವಂತಿಲ್ಲ. ಹೀಗಾಗಿ ಗೋಲ್ಡ್ ಸುರೇಶ್ ಹೆಚ್ಚು ನಿದ್ದೆ ಮಾಡುತ್ತಾರೆ ಎಂಬ ಕಾರಣ ನೀಡಿ ಅವರನ್ನು ನಾಮಿನೇಟ್ ಮಾಡಿದ್ದಾರೆ.

BBK 11: ಬಿಗ್ ಬಾಸ್ ಮನೆ ಎರಡು ಬಣ: ರಾಜಕೀಯದ ಆಟದಲ್ಲಿ ಸ್ಪರ್ಧಿಗಳ ನಡುವೆ ಗಲಾಟೆ