Friday, 13th December 2024

BBK 11: ಧರ್ಮಾ Loves ಐಶ್ವರ್ಯ: ಜಗಳಗಳ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಅರಳಿತು ಪ್ರೀತಿಯ ಹೂವು

Dharma Keerthi Raj and Aishwarya Love

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಶುರುವಾಗಿ ನಾಲ್ಕು ದಿನವಾಗುತ್ತಾ ಬಂತು. ಪ್ರತಿ ದಿನ ಜಗಳಗಳಿಂದಲೇ ಮನೆ ಹೆಚ್ಚು ಕಾಣಿಸಿಕೊಂಡಿದೆ. ಚೈತ್ರಾ ಕುಂದಾಪುರ ಮೊದಲ ದಿನ ಗಲಾಟೆ ಮೂಲಕ ಹೈಲೇಟ್ ಆದರೆ, ಎರಡನೇ ಮತ್ತು ಮೂರನೇ ದಿನ ಲಾಯರ್ ಜಗದೀಶ್ (Lawyer Jagadish) ಇಡೀ ಮನೆಯ ನೆಮ್ಮದಿ ಕಿತ್ತುಕೊಂಡರು. ಆದರೀಗ ನಾಲ್ಕನೇ ದಿನ ಮನೆ ಕೊಂಚ ಶಾಂತವಾದಂತೆ ಕಾಣುತ್ತಿದೆ. ಸದಸ್ಯರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಶುರುಮಾಡಿಕೊಂಡಂತಿದೆ. ಇದರ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿಯ ಹೂವು ಅರಳಿದೆ.

ಕಲರ್ಸ್ ಕನ್ನಡ ಇಂದಿನ ನಾಲ್ಕನೇ ದಿನದ ಪ್ರೊಮೋ ಬಿಡುಗಡೆ ಮಾಡಿದ್ದು ಇದರಲ್ಲಿ ಬಿಗ್ ಬಾಸ್ ಮನೆ ನಗುವಿನ ಅಲೆಯಲ್ಲಿ ತೇಲಿದೆ. ಜೊತೆಗೆ ಐಶ್ವರ್ಯ ಮತ್ತು ಧರ್ಮ ಕೀರ್ತಿರಾಜ್ ನಡುವೆ ಪ್ರೀತಿ ಹುಟ್ಟಿದಂತಿದೆ. ನರಕದಲ್ಲಿರುವ ಅನುಷಾ ರೈ ಕೂಡ ಧರ್ಮನ ಸೆಳೆತಕ್ಕೆ ಒಳಗಾಗಿದ್ದಾರೆ.

‘ಧರ್ಮಾ ನರಕದ ಸೈಡ್​ಗೆ ಹೋದರೆ ಬಹಳ ಕೋಪ ಮಾಡಿಕೊಳ್ಳುತ್ತಾರೆ ಇಲ್ಲಿ’ ಎಂದು ಯಮುನಾ ಅವರು ಐಶ್ವರ್ಯ ಅವರನ್ನು ನೋಡಿ ಹೇಳಿದ್ದಾರೆ. ಧರ್ಮಾ ಇಷ್ಟವಾಗಲು ಕಾರಣ ತಿಳಿಸಿರುವ ಐಶ್ವರ್ಯ, ‘ತುಂಬಾ ಸಾಫ್ಟ್ ಆಗಿ ಮಾತಾಡ್ತೀರ, ಫ್ರೂಟ್ಸ್ ಕಟ್ ಮಾಡುವಾಗ ಮುದ್ದಾಗಿ ಮಾಡ್ತೀರ, ಯಾವಾಗ ಫುಲ್ ಬಿದ್ದೋದೆ ಅಂದ್ರೆ.. ಐ ಮೀನ್ ಬಿದ್ದೋಗಿಲ್ಲ’ ಎಂದು ಹೇಳಿ ನಾಚಿ ನೀರಾಗಿದ್ದಾರೆ. ಆಗ ಯಮುನಾ ಅವರು ಈಗ ಅನುಷಾ ಬಂದ್ರೆ ಏನು ಮಾಡೋಣ ಎಂದು ಕೇಳಿದ್ದಾರೆ. ಅದಕ್ಕೆ ಧರ್ಮಾ ಅವರು ‘ಜೊತೆ ಜೊತೆಯಾಗಿ ಚೆನ್ನಾಗಿರೋಣ’ ಎಂದು ತಮಾಷೆಯಾಗಿ ಹೇಳಿದ್ದಾರೆ.

ಇದರ ನಡುವೆ ಧನರಾಜ್ ಆಚಾರ್ ‘ನಿಮ್ಮಿಬ್ಬರನ್ನು ನಾನು ಪ್ರೊಟೆಕ್ಷನ್ ಮಾಡ್ತೇನೆ, ನೀವಿಬ್ರು ಮಾತಾಡಿ’ ಎಂದು ಧರ್ಮಾ ಮತ್ತು ಅನುಷಾ ಅವರಿಗೆ ಹೇಳಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮಕಥೆ ಶುರುವಾದಂತಿದೆ. ಮೊದಲ ಮೂರು ದಿನ ಹೆಚ್ಚು ಜಗಳಗಳನ್ನೇ ನೋಡಿ ಸುಸ್ತಾಗಿದ್ದ ಬಿಗ್ ಬಾಸ್ ಅಭಿಮಾನಿಗಳಿಗೆ ಈಗ ಹೊಸ ಲವ್ ಸ್ಟೋರಿ ನೋಡುವ ಭಾಗ್ಯ ದೊರಕಿದೆ.

ಲಾಯರ್ ಜಗದೀಶ್ ಬಗ್ಗೆ ಫೇಸ್​ಬುಕ್​ನಲ್ಲಿ ಬಾಂಬ್ ಸಿಡಿಸಿದ ಪ್ರಶಾಂತ್ ಸಂಬರ್ಗಿ