Wednesday, 11th December 2024

BBK 11: ಧರ್ಮನಿಗಾಗಿ ಐಶ್ವರ್ಯ-ಅನುಷಾ ನಡುವೆ ವಾರ್?: ಸೂಪರ್ ಸಂಡೇ ಎಪಿಸೋಡ್​ನಲ್ಲಿ ತ್ರಿಕೋನ ಪ್ರೇಮಕಥೆಯ ಚರ್ಚೆ

Anusha Aishwarya and Dharma

ಬಿಗ್ ಬಾಸ್​​ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಒಂದು ಲವ್​ ಸ್ಟೋರಿ ನಡೆಯುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ, ಇದು ಯಾರ ಯಾರ ಮಧ್ಯೆದಲ್ಲಿ ಎಂಬುದು ಎಲ್ಲ ವೀಕ್ಷಕರ ಪ್ರೆಶ್ನೆಯಾಗಿದೆ. ಯಾಕೆಂದರೆ ಧರ್ಮ ಕೀರ್ತಿರಾಜ್​ಗಾಗಿ ಐಶ್ವರ್ಯ ಮತ್ತು ಅನುಷಾ ನಡುವೆ ವಾರ್ ನಡೆಯುತ್ತಿದೆ ಎಂಬ ಗುಟ್ಟು ಮನೆಮಂದಿಯೇ ರಿವೀಲ್ ಮಾಡಿದ್ದಾರೆ. ಅತ್ತ ಧರ್ಮ ಇದರ ಬಗ್ಗೆ ಯಾವುದೇ ಮಾತನಾಡುತ್ತಿಲ್ಲ. ಹೀಗಿರುವಾಗ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್​ನಲ್ಲಿ ಈ ತ್ರಿಕೋನ ಪ್ರೇಮಕಥೆಯ ಕುರಿತು ಚರ್ಚೆ ನಡೆದಿದೆ.

ಯೆಸ್ ಆರ್-ನೋ ರೌಂಡ್​ನಲ್ಲಿ ಸುದೀಪ್ ಅವರು, ‘ಧರ್ಮ ಅವರು ಅನುಷಾ ಬಳಿ ಮಾತನಾಡಿದ್ರೆ ಐಶ್ವರ್ಯ ಅವರ ಮುಖ ಸಣ್ಣದಾಗುತ್ತೆ’ ಎಂದು ಕೇಳಿದ್ದಾರೆ. ಇದಕ್ಕೆ ಉಗ್ರಂ ಮಂಜು ಮಾತಾಡಿ, ಏನ್ ಮಾಡುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಅವರನ್ನೇ ನೋಡುತ್ತಿರುತ್ತಾರೆ ಎಂದಿದ್ದಾರೆ. ಆದರೆ ಇದಕ್ಕೆ ಧರ್ಮ ಪ್ರತಿಕ್ರಿಯಿಸಿ, ಅನುಷಾ ಅವರ ಜೊತೆ 4-5 ವರ್ಷದ ಫ್ರೆಂಡ್​ಶಿಪ್ ಇದೆ ಎಂದು ಹೇಳಿದ್ದಾರೆ. ಐಶ್ವರ್ಯ ಮಾತ್ರ ಅವರು ಚೇಂಜ್ ಆಗುತ್ತಿದ್ದಾರೆ ಎಂದು ಹೇಳಿದ್ದಕ್ಕೆ ಅನುಷಾ ನಮ್ಮನ್ನು ಅಬ್ಜರ್ವ್​ ಮಾಡುತ್ತಿರುತ್ತಾರೆ ಎಂದು ನೇರವಾಗಿ ಹೇಳಿದ್ದಾರೆ.

ಇದಕ್ಕೆ ಧರ್ಮ ಮುಖ ಮುಚ್ಚಿಕೊಂಡಿದ್ದಾರೆ. ಅತ್ತ ಐಶ್ವರ್ಯ ಅವರು ಅನುಷಾ ಮುಖ ಚಿಕ್ಕದಾಗಬಹುದು, ನನ್ನದಲ್ಲ ಎಂದಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ಟ್ವಿಸ್ಟ್ ನೀಡಿದ ಗೋಲ್ಡ್​ ಸುರೇಶ್, ಅನುಷಾ-ಧರ್ಮಾ ನಡುವೆ ಹಳೆದೊಂದು ಲವ್​ ಸ್ಟೋರಿ ಇದೆ ಸರ್.. ಎಂದು ಹೇಳಿದ್ದು ಇಡೀ ಮನೆ ಸ್ತಬ್ಧವಾಗಿದೆ.

ಅನುಷಾ ರೈ ಬ್ರೇಕ್ ಅಪ್‌ ಲವ್ ಸ್ಟೋರಿ:

ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್​ನಲ್ಲಿ ಈ ವಿಚಾರ ಮುನ್ನಲೆಗೆ ಬರಲು ಕಾರಣವಿದೆ. ಶುಕ್ರವಾರ ಉಗ್ರಂ ಮಂಜು ಕೆಲವರನ್ನು ಒಟ್ಟುಗೂಡಿಸಿಕೊಂಡು ಟ್ರುಥ್ ಆರ್ ಡೇರ್ ಗೇಮ್ ಆಡಿಸಿದ್ದರು. ಈ ಸಂದರ್ಭ ಅನುಷಾ ಅವರಿಗೆ ನಿಮ್ ಲವ್ ಸ್ಟೋರಿ ಹೇಳಿ ಎಂದು ಮಂಜು ಕೇಳಿದ್ದಾರೆ. ಆಗ ಅನುಷಾ ನನ್ನದು ಒಂದು ಲವ್ ಸ್ಟೋರಿ ಇತ್ತು. ಆದರೆ, ಅದು ಬ್ರೇಕ್ ಆಯಿತು ಅಂತ ಹೇಳಿದ್ದಾರೆ. ಆದರೆ, ಉಗ್ರಂ ಮಂಜು ಅದು ಯಾರು ಎಂದು ಒತ್ತಾಯ ಮಾಡಿದಾಗ, ಪಕ್ಕದಲ್ಲಿಯೇ ಇದ್ದ ಧರ್ಮ ಕೀರ್ತಿರಾಜ್‌ ಹೆಸರು ಹೇಳಿದ್ದಾರೆ. ಇವನೇ ನನ್ನ ಲವರ್ ಅನ್ನುವ ಅರ್ಥದಲ್ಲಿಯೇ ಅನುಷಾ ರೈ ಹೇಳಿದರು. ಆದರೆ, ಧರ್ಮ ಕೀರ್ತಿರಾಜ್ ಅದು ಸಿನಿಮಾ ಲವ್ ಸ್ಟೋರಿಯಮ್ಮ ಅಂತ ಹೇಳಿ ಅಲ್ಲಿಂದ ದಿಢೀರ್ ಎದ್ದು ಹೋಗಿದ್ದರು.

BBK 11: ಕಿಚ್ಚನ ಪಂಚಾಯಿತಿಯಲ್ಲಿ ಸೌಂಡ್ ಮಾಡಿದ ಜಗ್ಗು-ಹಂಸ ಡ್ಯುಯೆಟ್ ಸಾಂಗ್