Friday, 13th December 2024

BBK 11: ಧರ್ಮ-ಐಶ್ವರ್ಯ ಲವ್ ​ಸ್ಟೋರಿಗೆ ಸಿಕ್ತು ಪುಷ್ಟಿ: ಇವರು ಬಿಗ್ ಬಾಸ್ ಮನೆಯ ಮುದ್ದು ಜೋಡಿ ಎಂದ ನೆಟ್ಟಿಗರು

Dharma Aishwarya love story

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಒಂದು ವಾರ ಕಳೆದಿದೆ. ಮೊದಲ ವಾರವೇ ಜನರನ್ನು ಸೆಳೆಯುವಲ್ಲಿ ಈ ಬಾರಿಯ ಸೀಸನ್ ಯಶಸ್ವಿ ಆಗಿದೆ ಎನ್ನಬಹುದು. ಮೊದಲ ವಾರ ಮನೆ ಹೆಚ್ಚು ಜಗಳಗಳಿಂದಲೇ ಕೂಡಿತ್ತು. ಇವುಗಳ ಮಧ್ಯೆ ಇಬ್ಬರು ಸರ್ಧಿಗಳ ಮಧ್ಯೆ ಪ್ರೀತಿಯ ಮಾತುಕತೆ ಕೂಡ ನಡೆದಿತ್ತು. ಅವರೇ ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯ. ಮನೆ ಮಂದಿ ಇವರನ್ನು ಸಖತ್ ಆಗಿ ರೇಗಿಸಿಕೊಂಡಿದ್ದರು. ಇದರ ಚರ್ಚೆ ಸೂಪರ್ ಸಂಡೆ ವಿಥ್ ಸುದೀಪ್ ಎಪಿಸೋಡ್​ನಲ್ಲಿ ಕೂಡ ನಡೆದಿದೆ.

ಮೊದಲ ವಾರ ಯಮುನಾ ಅವರು ಐಶ್ವರ್ಯಾರನ್ನು ನೋಡಿ ‘ಧರ್ಮಾ ನರಕದ ಸೈಡ್​ಗೆ ಹೋದರೆ ಬಹಳ ಕೋಪ ಮಾಡಿಕೊಳ್ಳುತ್ತಾರೆ ಇಲ್ಲಿ’ ಎಂದು ಹೇಳಿದ್ದಾರೆ. ಆಗ ಧರ್ಮಾ ಇಷ್ಟವಾಗಲು ಕಾರಣ ತಿಳಿಸಿರುವ ಐಶ್ವರ್ಯ, ‘ತುಂಬಾ ಸಾಫ್ಟ್ ಆಗಿ ಮಾತಾಡ್ತೀರ, ಫ್ರೂಟ್ಸ್ ಕಟ್ ಮಾಡುವಾಗ ಮುದ್ದಾಗಿ ಮಾಡ್ತೀರ, ಯಾವಾಗ ಫುಲ್ ಬಿದ್ದೋದೆ ಅಂದ್ರೆ.. ಐ ಮೀನ್ ಬಿದ್ದೋಗಿಲ್ಲ’ ಎಂದು ಹೇಳಿ ನಾಚಿ ನೀರಾಗಿದ್ದರು. ಇದನ್ನು ಕಂಡ ನೆಟ್ಟಿಗರು ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಶುರುವಾಗಿದೆ ಎಂದಿದ್ದರು.

ಇದೇ ವಿಚಾರದ ಕುರಿತು ಸುದೀಪ್ ಅವರು ಯೆಸ್ or ನೋ ರೌಂಡ್​ನಲ್ಲಿ ಒಂದು ಪ್ರಶ್ನೆಕೇಳಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಥೆ ಹುಟ್ಟಿಕೊಳ್ಳುತ್ತಿದೆ ನಿಜವೇ’ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಮನೆಯ ಬಹುತೇಕ ಮಂದಿ ಯೆಸ್ ತೋರಿಸಿದ್ದರು. ಆದರೆ, ಐಶ್ವರ್ಯಾ ಸಿಂಧೋಗಿ ಹಾಗೂ ಧರ್ಮ ನೋ ಎಂದು ಬೋರ್ಡ್ ತೋರಿಸಿದರು.

ಆಗ ಸುದೀಪ್ ಅವರು ನೇರವಾಗಿ ಐಶ್ವರ್ಯಾ ಬಳಿಯೇ ಯಾಕೆ ನೋ ಎಂದು ಕೇಳಿದ್ದಾರೆ. ಆಗ ಐಶ್ವರ್ಯ ನಮ್ಮಿಬ್ಬರ ನಡುವೆ ಅಂಥದ್ದೇನು ಇಲ್ಲ ಎಂದಿದ್ದಾರೆ. ಇದಕ್ಕೆ ಸುದೀಪ್ ಅವರು ನಾನಿಲ್ಲಿ ಯಾರ ಬಗ್ಗೆನೂ ಕೇಳಿಲ್ಲ, ಕುಂಬಳಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದೀರಾ ಎಂದು ಇಬ್ಬರ ಕಾಲು ಎಳೆದಿದ್ದಾರೆ.

ಅಲ್ಲದೆ ಮನೆ ಮಂದಿ ಕೂಡ, ಇವರು ತುಂಬಾ ಕ್ಲೋಸ್ ಆಗಿದ್ದಾರೆ. ಐಶ್ವರ್ಯ ಚಪಾತಿಯನ್ನು ಹಾರ್ಟ್ ಶೇಪ್​ನಲ್ಲಿ ಮಾಡುತ್ತಾರೆ. ಧರ್ಮ ಹತ್ತಿರ ಇದ್ದರೆ ಐಶ್ವರ್ಯ ಮುಖದಲ್ಲಿ ಒಂದು ಕಳೆ ಇರುತ್ತದೆ ಎಂದು ಹೇಳಿದ್ದಾರೆ. ಇದನ್ನೆಲ್ಲ ಕೇಳಿದ ಪ್ರೇಕ್ಷಕರು ಇವರಿಬ್ಬರ ಮಧ್ಯೆ ಲವ್ ಕನ್​ಫರ್ಮ್, ಈ ಜೋಡಿ ಮುದ್ದಾಗಿದೆ ಎಂದು ಹೇಳುತ್ತಿದ್ದಾರೆ.

ಈ ವಾರದ ಕಂಟೆಂಟ್ ಇನ್ನೂ ಖರಾಬ್ ಆಗಿರುತ್ತೆ: 2ನೇ ವಾರದ ಮೊದಲ ದಿನ ದೊಡ್ಡ ಸುಳಿವು ಕೊಟ್ಟ ಜಗದೀಶ್