Monday, 9th December 2024

BBK 11: ಬಿಗ್ ಬಾಸ್​ನಿಂದ ಹೊರ ಹೋಗಲು ನಿರ್ಧಾರ ಮಾಡಿದ್ರಾ ಧರ್ಮಾ ಕೀರ್ತಿರಾಜ್?

Dharma KeerthiRaj

ಬಿಗ್ ಬಾಸ್ ಮನೆಯಲ್ಲಿ ಧರ್ಮಾ ಕೀರ್ತಿರಾಜ್ (Dharma KeerthiRaj) ಮೂಲೆಗುಂಪಾಗುತ್ತಿದ್ದಾರೆ ಎಂಬ ಮಾತು ಕಳೆದ ಕೆಲವು ವಾರಗಳಿಂದ ಕೇಳಿ ಬರುತ್ತಲೇ ಇದೆ. ಇದು ಸುಳ್ಳು ಎಂದು ಧರ್ಮಾ ಅನೇಕ ಬಾರಿ ಹೇಳಿದ್ದರೂ ಮೇಲ್ನೋಟಕ್ಕೆ ನಿಜದಂತೆ ಕಾಣುತ್ತಿದೆ. ಇವರಿಗೆ ಅವಕಾಶ ಸಿಕ್ಕಿದ್ದು ಕಮ್ಮಿ, ಆದರೆ, ಸಿಕ್ಕ ಅವಕಾಶವನ್ನು ದೊಡ್ಟ ಮಟ್ಟದಲ್ಲಿ ಉಳಿಸಿಕೊಂಡಿಲ್ಲ ಎಂಬುದು ಕೂಡ ನಿಜ. ಇದರಿಂದಲೇ ಧರ್ಮಾ ಅವರಿಗೆ ಮನೆಮಂದಿ ಕಳೆದ ವೀಕೆಂಡ್​ನಲ್ಲಿ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್​ನಲ್ಲಿ ನಾಲಾಯಕ್ ಎಂಬ ಪಟ್ಟ ಕಟ್ಟಿದ್ದರು.

ಇದರಿಂದ ಬೇಸರಗೊಂಡ ಧರ್ಮಾ ಕಣ್ಣೀರು ಕೂಡ ಇಟ್ಟಿದ್ದರು. ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್​ನಲ್ಲಿ ಕಿಚ್ಚ ಮನೆಮಂದಿಗೆ ಮನೆ ಮೆಚ್ಚಿದ ನಾಲಾಯಕ್ ಯಾರು ಎಂಬುದಾಗಿದೆ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಬಿಗ್ ಬಾಸ್ ಸ್ಪರ್ಧಿಗಳು ಧರ್ಮಾ ಕೀರ್ತಿರಾಜ್ ಹೆಸರು ತೆಗೆದುಕೊಂಡಿದ್ದಾರೆ. ಬಹುತೇಕರು ಧರ್ಮಾ ಕೀರ್ತಿರಾಜ್ ಹೆಸರನ್ನೇ ಹೇಳಿದ್ದಾರೆ. ಇದರಿಂದ ಧರ್ಮನಿಗೆ ನೋವಾಗಿ ಕಣ್ಣೀರಿಟ್ಟಿದ್ದರು.

ಅದೇನೋ ಮಹಾನ್ ತಪ್ಪು ನಾನು ಮಾಡಿಲ್ಲ. ಅದೇ ಒಂದು ರೀಸನ್ ಇಟ್ಕೊಂಡು ಪ್ರತಿ ಬಾರಿ ಹೇಳಿದ್ರೆ ನನಗೂ ಬೇಸರವಿದೆ ಎಂದು ಧರ್ಮಾ ಹೇಳಿದ್ದಾರೆ. ಬಳಿಕ ರಾತ್ರಿ ಮನೆಯವರ ಮುಂದೆ ಇದೇ ವಿಚಾರ ನೆನೆದು, ಎಲ್ಲರೂ ಅವರ ಫೀಲ್ಡ್ ನಲ್ಲಿ ಕಷ್ಟಪಟ್ಟು ಮುಂದೆ ಬಂದಿರ್ತಾರೆ. ಆ ವರ್ಡ್ ನನಗೆ ತುಂಬಾ ನಾಟಿಗೆ, ಮನಸ್ಸಿಗೆ ಚುಚ್ಚಿದೆ ಎಂದು ಹೇಳಿ ಕಣ್ಣೀರು ಹಾಕಿದ್ದರು. ಮರುದಿನ ಕೂಡ ಧರ್ಮಾ ಅವರು ಈ ನೋವಿನಿಂದ ಹೊರಬಂದಿಲ್ಲ.

ಸೋಮವಾರದ ಸಂಚಿಕೆಯಲ್ಲಿ ಕೂಡ ಧರ್ಮಾ ಅವರು, ‘‘ಇಲ್ಲಿಗೆ ಬಂದು ಈ ರೀತಿಯೆಲ್ಲ (ನಾಲಾಯಕ್) ಹೇಳಿಸಿಕೊಳ್ಳಬಾರದು. ಇನ್ಮೇಲೆ ಬದಲಾಗಬೇಕು. ಇಲ್ಲವಾದರೆ ಈ ಭಾನುವಾರ ಹೊರಗೆ ಹೋಗಿಬಿಡಬೇಕು’’ ಎಂದು ಹೇಳಿದ್ದಾರೆ. ಅಲ್ಲದೆ ಈ ವಾರ ಮತ್ತೆ ನಾಮಿನೇಷನ್ ಬಂದಾಗಿ ಹೆಚ್ಚಿನವರು ಧರ್ಮಾ ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಇವರು, ‘‘ನಾನು ನಾಲಾಯಕ್ ಅಂತಲೇ ಮೊನ್ನೆ ಅವಾರ್ಡ್ ಕೊಟ್ರಲ್ವೇ? ನಾನೂ ಮನೆಯಲ್ಲಿ ಏನೂ ಮಾಡ್ತಾನೇ ಇಲ್ಲ. ಇದು ಗೊತ್ತಿಲ್ವೇ’’ ಎಂದು ಕೋಪಗೊಂಡಿದ್ದಾರೆ.

BBK 11: ಶಿಶಿರ್​ಗೆ ಮಂಡಿಯೂರಿ ಕೆಂಪು ಗುಲಾಬಿ ಕೊಟ್ಟ ಐಶ್ವರ್ಯಾ: ಏನೆಲ್ಲ ಮಾತನಾಡಿದ್ರು ಗೊತ್ತೇ?