Friday, 13th December 2024

ಮಾರ್ಟಿನ್‌ ಚಿತ್ರದ ಟೀಸರ್‌ ಫೆ.23ರಂದು ಬಿಡುಗಡೆ

ಬೆಂಗಳೂರು: ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ  ʻಪೊಗರುʼ ಸಿನಿಮಾ ಬಳಿಕ ಪ್ರೇಮ್‌ ಜತೆ ಕೆ.ಡಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಯಾಗಿದ್ದಾರೆ. ಇದೀಗ ಮಾರ್ಟಿನ್‌ ಚಿತ್ರದ ಟೀಸರ್‌ ಫೆ.23 ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ಸೋಷಿಯಲ್ ಮೀಡಿಯಾ ಮತ್ತು ವಾಟ್ಸ್ ಆಪ್​ ಗ್ರೂಪ್​ಗಳಲ್ಲಿ ಟೀಸರ್ ರಿಲೀಸ್ ಮಾಹಿತಿ ಹರಿದಾಡುತ್ತಿವೆ. ಧ್ರುವ ಸರ್ಜಾ ಎಡಿಟಿಂಗ್ ರೂಮ್​​ನಲ್ಲಿ ಕುಳಿತ ಒಂದು ಫೋಟೋ ಕೂಡ ಈ ವಿಷಯದೊಂದಿಗೆ ಹರಿದಾಡುತ್ತಿದೆ. ಇನ್ನು ಚಿತ್ರದ ನಿರ್ದೇಶಕ ರಾಗಲಿ, ಚಿತ್ರದ ನಾಯಕ ನಟರಾಗಲಿ, ಅಧಿಕೃತವಾಗಿ ಟೀಸರ್ ರಿಲೀಸ್ ಬಗ್ಗೆ ಹೇಳಿಕೊಂಡಿಲ್ಲ. ಎ.ಪಿ ಅರ್ಜುನ್‌ ಮಾರ್ಟಿನ್‌ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.