Thursday, 12th September 2024

ಹೆಣ್ಣು ಮಗುವಿಗೆ ಜನ್ಮ ನೀಡಿದ ಧ್ರುವ ಪತ್ನಿ ಪ್ರೇರಣಾ

ಬೆಂಗಳೂರು: ನಟ ಧ್ರುವ ಸರ್ಜಾರ ಪತ್ನಿ ಪ್ರೇರಣಾ ಭಾನುವಾರ (ಅ.2) ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಶನಿವಾರ ಸಂಜೆಯೇ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರು ಬನಶಂಖರಿಯ ಕೆ.ಆರ್.ರಸ್ತೆ ಯಲ್ಲಿರುವ ಅಕ್ಷ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದರು. ಪತಿ ಧ್ರುವ ಸರ್ಜಾ ಕೂಡ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರು. ಇದೀಗ ಹೆಣ್ಣು ಮಗು ಜನಿಸಿರುವ ಬಗ್ಗೆ ಧ್ರುವ ಸರ್ಜಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಂದರವಾದ ಹೆಣ್ಣು ಮಗುವಿನೊಂದಿಗೆ ಆಶೀರ್ವಾದ ಪಡೆದಿದ್ದೇವೆ. ಪ್ರೇರಣಾಗೆ ನಾರ್ಮಲ್ ಡೆಲಿವರಿ ಆಗಿದೆ. ವೈದ್ಯರಿಗೆ ಧನ್ಯ ವಾದಗಳು ಎಂದು ಧ್ರುವ ಅವರು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವು ಕಳೆದ ಸೆ.7ರಂದು ರಾಜಧಾನಿ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಅದ್ಧೂರಿಯಾಗಿ ನೆರವೇರಿತು. ಧ್ರುವ ಅವರ ಸೋದರ ಮಾವ, ನಟ ಅರ್ಜುನ್​ ಸರ್ಜಾ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಸರ್ಜಾ ಕುಟುಂಬ ಸ್ಥರು ಮತ್ತು ಅತ್ಯಾಪ್ತರ ವರ್ಗದವರು ಪಾಲ್ಗೊಂಡಿದ್ದರು.