Friday, 13th December 2024

ದೃಶ್ಯಂ2ರ ಜಾರ್ಜ್‌ಕುಟ್ಟಿ ಫ್ಯಾಮಿಲಿ ಫೋಟೋ ರಿಲೀಸ್‌

ಕೊಚ್ಚಿ: ಸಾಮಾಜಿಕ ಜಾಲತಾಣದಲ್ಲಿ ದೃಶ್ಯಂ 2ರ ಫ್ಯಾಮಿಲಿ ಫೋಟೊವನ್ನು ಪೋಸ್ಟ್ ಮಾಡುವ ಮೂಲಕ, ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಮತ್ತೊಮ್ಮೆ ತೆರೆಗೆ ಬರಲು ಸಿದ್ದತೆ ನಡೆಸಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟ ಮೋಹನ್‌ಲಾಲ್‌, ಈ ಮೊದಲಿನ ಚಿತ್ರ ಕಲಾವಿದ ರನ್ನೇ ಮರುಪರಿಚಯಿಸುತ್ತಿದ್ದಾರೆ. ಜಾರ್ಜ್‌ ಕುಟ್ಟಿ (ಮೋಹನ್‌ಲಾಲ್‌), ರಾಣಿ (ಮೀನಾ), ಅಂಜು (ಅನ್ಸಿಬಾ)ಮತ್ತು ಅನುಮೋಲ್‌ (ಈಸ್ಟರ್‌) ಅದೇ ಪಾತ್ರಕ್ಕೆ ಮಗದೊಮ್ಮೆ ಜೀವ ತುಂಬಲಿದ್ದಾರೆ.

ಮೊದಲ ಚಿತ್ರ ದೃಶ್ಯಂಗೆ ನಿರ್ದೇಶಕ ಜೀತು ಜೋಸೆಫ್‌ ನಿರ್ದೇಶನ ನೀಡಿದ್ದರು. ಅದು 2013ರಲ್ಲಿ ತೆರೆ ಕಂಡಿತ್ತು. ಎರಡನೇ ಭಾಗದ ಶೂಟಿಂಗ್‌ ಕಳೆದ ಸೆಪ್ಟೆಂಬರಿನಲ್ಲಿ ಆರಂಭಗೊಂಡಿದೆ.

ಫ್ಯಾಮಿಲಿ ಚಿತ್ರವನ್ನು ಫೋಸ್ಟ್ ಮಾಡಿ, ಅದಕ್ಕೆ ಜಾರ್ಜ್‌ ಕುಟ್ಟಿ ಮತ್ತು ಫ್ಯಾಮಿಲಿ, #ದೃಶ್ಯಂ2 #ದೃಶ್ಯಂ ಎಂದು ಕ್ಯಾಪ್ಶನ್ ನೀಡಿದ್ದಾರೆ.