Friday, 13th December 2024

ಫೆಬ್ರವರಿ 24ರಂದು ಚೀನಾದ 6 ಸಾವಿರ ಥಿಯೇಟರ್​ನಲ್ಲಿ ಇಂಗ್ಲಿಷ್ ವಿಂಗ್ಲಿಷ್ ರಿಲೀಸ್

ನವದೆಹಲಿ: ನಟಿ ಶ್ರಿದೇವಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು.
ಶ್ರೀದೇವಿ ಅವರನ್ನು ವಿಶೇಷ ರೀತಿಯಲ್ಲಿ ನೆನಪಿಸಿಕೊಳ್ಳುವ ಸಲುವಾಗಿ ಫೆ.24ರಂದು ಅವರ ಪುಣ್ಯತಿಥಿ ಕಾರಣಕ್ಕೆ ಅವರ ನಟನೆಯ ‘ಇಂಗ್ಲಿಷ್ ವಿಂಗ್ಲಿಷ್​’ ಸಿನಿಮಾ ಚೀನಾದಲ್ಲಿ 6 ಸಾವಿರ ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ.

2018ರಲ್ಲಿ ಫೆಬ್ರವರಿ 20ರಂದು ಶ್ರೀದೇವಿ ಅವರು ಕುಟುಂಬ ಸಮೇತ ದುಬೈಗೆ ತೆರಳಿದ್ದರು. ಮದುವೆಯಲ್ಲಿ ಪಾಲ್ಗೊಳ್ಳೋ ಕಾರಣಕ್ಕೆ ವಿದೇಶಕ್ಕೆ ತೆರಳಿದ್ದರು. ಆದರೆ, ಅಲ್ಲಿ ನಡೆದಿದ್ದೇ ಬೇರೆ. ಹೋಟೆಲ್​ ಬಾತ್​ ಟಬ್​ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು.

ಶ್ರೀದೇವಿಗೆ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಹೆಸರಿನ ಮಕ್ಕಳಿದ್ದಾರೆ. ಜಾನ್ವಿ ಕಪೂರ್ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಈಗ ಶ್ರೀದೇವಿ ಅವರ ಐದನೇ ಪುಣ್ಯತಿಥಿ ಹಿನ್ನೆಲೆ ಯಲ್ಲಿ ಚೀನಾದಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ರಿಲೀಸ್ ಮಾಡಲಾಗುತ್ತಿದೆ.

ಆಮಿರ್ ಖಾನ್ ಅಭಿನಯದ ಸಿನಿಮಾಗಳು ಚೀನಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದ್ದವು. ಈಗ ‘ಇಂಗ್ಲಿಷ್ ವಿಂಗ್ಲಿಷ್​’ ಚೀನಾ ಭಾಷೆಗೆ ಡಬ್ ಆಗಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಶ್ರೀದೇವಿ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು.