Saturday, 14th December 2024

ಕೋವಿಡ್ ಮಾರ್ಗಸೂಚಿಯಂತೆ ನಿರ್ಮಾಪಕ ರಾಮು ಅಂತ್ಯಕ್ರಿಯೆ

ತುಮಕೂರುಕುಣಿಗಲ್​​ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಕೋವಿಡ್ ಮಾರ್ಗಸೂಚಿ ಅನ್ವಯದಂತೆ ಮಂಗಳವಾರ ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಅಂತ್ಯ ಸಂಸ್ಕಾರ ನಡೆಸಲಾಯಿತು.

ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಅವರು ಸೋಮವಾರ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು.

ಕೋವಿಡ್ ಸೋಂಕು ತಗುಲಿದ್ದ ರಾಮು ಅವರು, ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲ ಕಾರಿಯಾಗದೆ ಕೊನೆಯುಸಿರೆಳೆದಿದ್ದರು. ರಾಮು ಅವರ ಪಾರ್ಥೀವ ಶರೀರವನ್ನ ಹುಟ್ಟೂರಿಗೆ ಕೊಂಡೊಯ್ಯಲಾಗಿ ದ್ದು, ಅಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಈ ವೇಳೆ ರಾಮು ಪತ್ನಿ ಮಾಲಾಶ್ರೀ ಹಾಗೂ ಕುಟುಂಬದ ಕೆಲವರು ಮಾತ್ರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ ದ್ದರು. ನಿರ್ಮಾಪಕ ಕೋಟಿ ರಾಮು ಅವರು ಕಳೆದ ಒಂದು ವಾರದ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಿಗೆ ಕೋವಿಡ್ ಪಾಸಿಟಿವ್​ ದೃಢಪಟ್ಟಿತ್ತು.