Tuesday, 10th December 2024

BBK 11: ಬಿಗ್ ಬಾಸ್ ಮನೆಯಲ್ಲಿ ಶತ್ರುಗಳಾದ ಮಿತ್ರರು: ಉಗ್ರಂ ಮಂಜು-ತ್ರಿವಿಕ್ರಮ್ ನಡುವೆ ದೊಡ್ಡ ಜಗಳ

Trivikram vs Manju

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ, ಜೊತೆಗೆ ವೈಮನಸ್ಸು ಕೂಡ ಶುರುವಾಗಿದೆ. ಇಷ್ಟುದಿನ ಮಿತ್ರರಾಗಿದ್ದವರು ಈಗ ಶತ್ರುಗಳಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ನೇರ ನಾಮಿನೇಷನ್ ಪ್ರಕ್ರಿಯೆ. ಬಿಗ್ ಬಾಸ್ ಆರಂಭದಿಂದಲೂ ಮಂಜು, ರಂಜಿತ್ ಹಾಗೂ ತ್ರಿವಿಕ್ರಮ್ ಜೊತೆಯಾಗೇ ಇದ್ದರು. ಆದರೆ, ಕಳೆದ ವಾರ ಇವರ ನಡುವೆ ಸಣ್ಣದಾಗಿ ಕಿಡಿ ಹತ್ತಿಕೊಂಡಿತ್ತು. ಇದು ಈಗ ಹೊತ್ತಿ ಉರಿದಿದೆ.

ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ನಡುವೆ ನಾಮಿನೇಷನ್ ಪ್ರಕ್ರಿಯೆ ವೇಳೆ ಜೋರು ಗಲಾಟೆಯಾಗಿದೆ. ತ್ರಿವಿಕ್ರಮ್ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಮಂಜು ಅವರ ಬಗ್ಗೆ ಮಾತಾಡಿದ್ದಾರೆ. ನನ್ನ ಪ್ರಕಾರ ಮಂಜಣ್ಣ ಒಂದು ಕಡೆ ಸೈಲೆಂಡ್ ಆಗಿದ್ದಾರೆ ಅಂತ ಅನಿಸಿತ್ತು. ಆರಂಭದಲ್ಲಿ ಖುಷಿಯಾಗಿ ಎಂಟರ್ಟೈನ್ ಮಾಡ್ತಾ ಇದ್ರಿ, ಈಗ ಸೈಲೆಂಟ್‌ ಆಗಿರೋ ತರ ಇದ್ದೀರಾ ಎಂದು ಹೇಳಿದರು. ಇದಕ್ಕೆ ಕೋಪಗೊಂಡ ಮಂಜಣ್ಣ, ನಾನು ಯಾರ ಜೊತೆಗೆ ಕುಳಿತುಕೊಂಡು ಮಾತಾಡಬೇಕು ಅನ್ನೋದು ಬಿಗ್​ಬಾಸ್​ ರೂಲ್​ ಬುಕ್​ನಲ್ಲಿ ಇಲ್ಲ. ನಿಮ್ಮ ಹತ್ರ ಬಂದು ಬಕೆಟ್‌ ಹಿಡಿಯೋರು ಒಳ್ಳೆಯವರು ಅಂತ ಸನ್ನೆ ಮೂಲಕ ಪರೋಕ್ಷವಾಗಿ ಹೇಳಿದರು.

ಈ ಮಾತಿಗೆ ಸಿಟ್ಟಾದ ತ್ರಿವಿಕ್ರಮ್, ​ ನೀವು ಮೊದಲು ಹುಲಿ ಅಂತ ತೋರಿಸಿ ಆಮೇಲೆ ಬದಲಾಗಿ ಬಿಟ್ಟರೆ ನಾವೇನು ಮಾಡಬೇಕು ಅಂತ ತಿರುಗೇಟು ಕೊಟ್ಟಿದ್ದಾರೆ. ಇವರಿಬ್ಬರ ನಡುವಣ ಜಗಳ ಅತಿರೇಕಕ್ಕೆ ಹೋಗಿದೆ. ಮಂಜು ಅವರು ತ್ರಿವಿಕ್ರಮ್ ಕೊಟ್ಟ ಕಾರಣಕ್ಕೆ ಕೋಪಗೊಂಡಿದ್ದಾರೆ.

ಹಾಗೆಯೆ ತ್ರಿವಿಕ್ರಮ್‌ ಮತ್ತು ಐಶ್ವರ್ಯಾ ಜೋಡಿ ಮಾನಸ ಅವರನ್ನು ನೇರವಾಗಿ ನಾಮಿನೇಟ್‌ ಮಾಡುತ್ತಾರೆ. ಮಾನಸ ಅವರು ಇಮೆಚ್ಯೂರ್‌ ಆಗಿದ್ದಾರೆ ಅಂತ ನಮಗೆ ಅನ್ನಿಸಿತು ಎಂದು ಐಶ್ವರ್ಯ ಕಾರಣ ನೀಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಮಾನಸ, ನನ್ನ ಗುಣ ಡಿಸೈಡ್‌ ಮಾಡೋಕೆ ನೀನ್ಯಾವಳೆ? ಎಂದು ಏಕವಚನದಲ್ಲೇ ಕೂಗಿದ್ದಾರೆ. ಆಗ ಐಶ್ವರ್ಯ ಅವರು ಯಾವಳೂ ಅಂತ ಆ ತರ ಎಲ್ಲ ಮಾತನಾಡಬೇಡಿ ಎಂದು ಇವರಿಬ್ಬರ ನಡುವೆ ಕೂಡ ಜಗಳ ನಡೆದಿದೆ.

BBK 11: ಬಿಗ್ ಬಾಸ್​ನಲ್ಲಿ ಗೆಲುವಿಗೆ ಭಾರೀ ಫೈಟ್: ಟಾಸ್ಕ್‌ ನಡುವೆ ಮತ್ತೆ ರಣರಂಗವಾದ ಮನೆ