Friday, 13th December 2024

ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಬಿಡುಗಡೆಗಿಲ್ಲ ತಡೆ

ನವದೆಹಲಿ: ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಥಿಯಾವಾಡಿ ಸಿನಿಮಾವನ್ನು ಬಿಡುಗಡೆ ಮಾಡದಂತೆ ತಡೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಗಂಗೂಬಾಯಿ ದತ್ತು ಪುತ್ರ ಬಾಬುಜೀ ರಾವ್ ಜಿ ಶಾ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ ಮಹೇಶ್ವರಿ ಅವರಿದ್ದ ಪೀಠ ನಡೆಸಿದೆ.

ಭನ್ಸಾಲಿ ಪ್ರೊಡಕ್ಷನ್ಸ್ ಗೆ ಸಿನಿಮಾ ಬಿಡುಗಡೆ ಮಾಡದಂತೆ ತಡೆ ನೀಡಬೇಕೆಂದು ಅರ್ಜಿಯಲ್ಲಿ ಗಂಗೂ ಬಾಯಿ ಅವರ ದತ್ತುಪುತ್ರ ಮನವಿ ಮಾಡಿದ್ದರು.

ಬುಧವಾರ (ಫೆ.23) ರಂದು ಸಿನಿಮಾದ ಶೀರ್ಷಿಕೆ ಬದಲಾವಣೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿ ಸಿತ್ತು. ಆದರೆ ಅರ್ಜಿದಾರರ ಪರ ವಕೀಲರು ಸಿನಿಮಾಗೆ ಮಧ್ಯಂತರ ತಡೆ ನೀಡಬೇಕೆಂದು ಮನವಿ ಮಾಡಿದ್ದರು. ಸಿನಿಮಾ ಪರವಾಗಿ ವಾದ ಮಂಡಿಸಿದ್ದ ವಕೀಲರು, ಕೆಲವೇ ದಿನಗಳಿರುವಾಗ ಸಿನಿಮಾ ಬಿಡುಗಡೆಗೆ ಶೀರ್ಷಿಕೆ ಬದಲಾವಣೆ ಮಾಡುವುದಕ್ಕೆ ಅಸಾಧ್ಯ ಎಂದು ಹೇಳಿದ್ದರು.