Friday, 13th December 2024

BBK 11: ತುತ್ತು ಅನ್ನಕ್ಕೆ ರಣರಂಗವಾದ ಬಿಗ್ ಬಾಸ್ ಮನೆ: ಸುರೇಶ್-ಐಶ್ವರ್ಯ ನಡುವೆ ಜಗಳ

Aishwarya and Gold Suresh

ಹೊರ ಜಗತ್ತಿನಲ್ಲಿ ಎಷ್ಟೇ ಹಣ, ಶ್ರೀಮಂತನಾಗಿದ್ದರೂ ಬಿಗ್ ಬಾಸ್ (Bigg Boss) ಮನೆಯೊಳಗೆ ಬಂದ ಮೇಲೆ ಒಂದು ಹೊತ್ತಿನ ಊಟಕ್ಕೆ ಅಲ್ಲಿ ಕಷ್ಟ ಪಡಬೇಕು. ಬದುಕಿನ ಪಾಠವನ್ನು ಕಲಿಸುವ ಈ ಶೋನಲ್ಲಿ ಊಟಕ್ಕಾಗಿ ಪ್ರತಿ ಸೀಸನ್​ನಲ್ಲಿ ಜಗಳಗಳು ನಡೆದಿವೆ. ಕೆಲವರಿಗೆ ಹೆಚ್ಚು ಊಟ ಬೇಕಾಗುತ್ತದೆ. ಆದರೆ, ರೇಷನ್ ಕಮ್ಮಿ ಇದ್ದ ಕಾರಣ ಸ್ವಲ್ಪ ಊಟ ಮಾಡಿರುತ್ತಾರೆ. ಇದಕ್ಕೆ ಜಗಳಗಳು ನಡೆದಿರುವುದುಂಟು. ಅದರಂತೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲೂ ಇದು ಮುಂದುವರೆದಿದೆ.

ಬಿಗ್ ಬಾಸ್ ಮನೆಯಲ್ಲಿ ಒಂದು ತುತ್ತು ಅನ್ನಕ್ಕಾಗಿ ಗೋಲ್ಡ್ ಸುರೇಶ್ ಹಾಗೂ ಐಶ್ವರ್ಯಾ ಸಿಂಧೋಗಿ ನಡುವೆ ಜಗಳ ಆಗಿದೆ. ರೇಷನ್ ಕಡಿಮೆ ಇದ್ದ ಕಾರಣ ಬಿಗ್​ ಬಾಸ್​ ಮನೆಯಲ್ಲಿ ಇಷ್ಟೇ ಊಟ ಮಾಡಬೇಕಾಗಿ ಬಂದಿದೆ. ಆದರೆ ಕೆಲವೊಂದು ಬಾರಿ ಸ್ಪರ್ಧಿಗಳು ತಟ್ಟೆಗೆ ಜಾಸ್ತಿ ರೈಸ್ ಹಾಕಿಕೊಂಡು ಫಜಿತಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಇಲ್ಲೂ ಕೂಡ ಐಶ್ವರ್ಯ ತಮ್ಮ ತಟ್ಟೆಗೆ ಜಾಸ್ತಿ ಅನ್ನವನ್ನು ಹಾಕಿಕೊಂಡಿದ್ದಾರೆ ಎಂಬ ಕಾರಣಕ್ಕೆ ಸುರೇಶ್ ಜೋರಾಗಿ ಸೌಂಡ್ ಮಾಡಿದ್ದಾರೆ.

ಐಶ್ವರ್ಯ ಒಂಚೂರು ಅನ್ನವನ್ನ ಹೆಚ್ಚಿಗೆ ಹಾಕಿಕೊಂಡರು. ಇದಕ್ಕೆ ಗೋಲ್ಡ್ ಸುರೇಶ್ ಅವರು, ಮನೆಯಲ್ಲಿ ನೀವು ಒಬ್ಬರೇ ಇಲ್ಲ. ಬೇರೆಯವರೂ ಇದ್ದಾರೆ. ನೀವು ಹೀಗೆ ಅನ್ನ ಹಾಕಿಕೊಂಡ್ರೆ ಹೇಗೆ? ಬೇರೆಯವರಿಗೆ ಅನ್ನ ಬೇಡ್ವಾ ಎಂದು ಜಗಳದ ರೀತಿಯಲ್ಲಿಯೇ ಮಾತನಾಡಿದ್ದಾರೆ. ಸ್ವಲ್ಪ ರೈಸ್ ಹಾಕಿಕೊಂಡಿದ್ದೇನೆ. ಅಷ್ಟಕ್ಕೇನೆ ಇಷ್ಟು ಮಾತ್ ಆಡೋದಾ? ಯಾಕೆ ಇಷ್ಟು ಮಾತಾಡ್ಬೇಕು. ನನ್ನ ಪಾಲಿನ ರೈಸ್ ನಾನು ಹಾಕಿಕೊಂಡಿದ್ದೇನೆ. ಅದು ಬಿಟ್ರೆ, ಸ್ವಲ್ಪ ಅನ್ನ ಹಾಕಿಕೊಂಡಿದ್ದೇನೆ ಹೊರತು ಮತ್ತೇನೂ ಮಾಡಿಲ್ಲ ಅಂತಲೇ ಐಶ್ವರ್ಯ ಹೇಳಿದ್ದಾರೆ.

ಜೋಡಿ ಟಾಸ್ಕ್:

ಈ ವಾರದ ಮೊದಲ ದಿನ ದೊಡ್ಮನೆಯಲ್ಲಿ ಜೋಡಿ ಟಾಸ್ಕ್ ನೀಡಿದ್ದಾರೆ. ಇದು ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಜೋಡಿ ಟಾಸ್ಕ್ ಎಂದರೆ ಇಬ್ಬರು ಸ್ಪರ್ಧಿಗಳು ಸದಾ ಅಂಟಿಕೊಂಡೇ ಇರುವ ಟಾಸ್ಕ್ ಇದಾಗಿದೆ. ಹನುಮಂತ ಅವರಿಗೆ ಗೌತಮಿ ಜಾಧವ್ ಜೋಡಿ ಆಗಿದ್ದಾರೆ. ಇವರ ಆಟ ಮತ್ತು ಮಾತು ಎರಡೂ ನೋಡುಗರಿಗೆ ಸಖತ್ ಮಜಾ ಕೊಡುವಂತೆ ಇವೆ. ಅತ್ತ ಭವ್ಯಾ ಗೌಡ ಮತ್ತು ಉಗ್ರಂ ಮಂಜು ಒಂದು ಜೋಡಿಯಾದರೆ, ಧರ್ಮ ಮತ್ತು ಐಶ್ವರ್ಯಾ ಮತ್ತೊಂದು ಜೋಡಿಯಾಗಿದ್ದಾರೆ. ಗೋಲ್ಡ್ ಸುರೇಶ್‌ಗೆ ಜೋಡಿಯಾಗಿ ಅನುಷಾ ರೈ, ಚೈತ್ರಾ ಕುಂದಾಪುರ-ಶಿಶಿರ್ ಹಾಗೂ ಧನರಾಜ್-ಮೋಕ್ಷಿತಾ ಜೋಡಿಯಾಗಿದ್ದಾರೆ. ತ್ರಿವಿಕ್ರಮ್ ಈ ವಾರದ ಮನೆಯ ಕ್ಯಾಪ್ಟನ್ ಆಗಿದ್ದಾರೆ.

BBK 11: ಬಿಗ್ ಬಾಸ್​ನಲ್ಲಿ ಜೋಡಿ ಟಾಸ್ಕ್: ಹನುಮಂತುಗೆ ಜೋಡಿಯಾಗಿ ಸಿಕ್ಕಿದ್ದು ಗೌತಮಿ