Wednesday, 11th December 2024

BBK 11: ಸುರೇಶ್ ವಿರುದ್ಧ ತಿರುಗಿಬಿದ್ದ ಸ್ತ್ರೀಯರು: ನೇರವಾಗಿ ಜೈಲಿಗೆ ಹೋದ ಗೋಲ್ಡ್

Mokshitha Gowthami and Gold Suresh

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಪುರುಷರಿಗಿಂತ ಸ್ತ್ರೀಯರೇ ಜಾಸ್ತಿ ಸೌಂಡ್ ಮಾಡುತ್ತಿದ್ದಾರೆ. ಕೌಂಟರ್ ಕೊಡುವುದರಲ್ಲಿ ಪುರುಷರಿಗಿಂತ ಸ್ತ್ರೀಯರೇ ವಾಯ್ಸ್ ಜೋರಾಗಿದೆ. ಈವರೆಗೆ ಸೈಲೆಂಟ್ ಆಗಿದ್ದ ಮೋಕ್ಷಿತಾ ಪೈ ಮತ್ತು ಗೌತಮಿ ಜಾಧವ್ ಕೂಡ ಈಗ ವಾಯ್ಸ್ ರೈಸ್ ಮಾಡುತ್ತಿದ್ದಾರೆ. ಚೈತ್ರಾ ಕುಂದಾಪುರ, ಭವ್ಯಾ ಗೌಡ ಹಾಗೂ ಅನುಷಾ ರೈ ಸದ್ದು ಪ್ರತಿ ದಿನ ಮನೆಯಲ್ಲಿ ಕೇಳಿಸುತ್ತಲೇ ಇರುತ್ತದೆ. ಇದೀಗ ಕಳಪೆ ವಿಚಾರದಲ್ಲೂ ಬಿಗ್ ಬಾಸ್ ಮನೆಯಲ್ಲಿ ಮಹಿಳೆರು ಮಾತು ಜೋರಾಗಿದೆ.

ಬಿಗ್ ​ಬಾಸ್​ ಸೀಸನ್​ 11ರ ಈ ವಾರದ ಕಳಪೆ ಪಟ್ಟವನ್ನು ಮನೆಮಂದಿ ಗೋಲ್ಡ್ ಸುರೇಶ್ ಅವರಿಗೆ ಕೊಟ್ಟಿದ್ದಾರೆ. ಸುರೇಶ್ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಟಾಸ್ಕ್​ ವೇಳೆ ಅವರು ನಡೆದುಕೊಂಡ ರೀತಿಯನ್ನು ಅನೇಕರು ಖಂಡಿಸಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ಹಾಗಾಗಿ ಅವರು ಜೈಲು ಸೇರಿದ್ದಾರೆ.

ಮುಖ್ಯವಾಗಿ ಮಹಿಳಾ ಸ್ಪರ್ಧಿಗಳೇ ಗೋಲ್ಡ್​ ಸುರೇಶ್​ಗೆ ಕಳಪೆ ಪಟ್ಟ ಕೊಟ್ಟಿದ್ದಾರೆ. ಟಾಸ್ಕ್ ಅನ್ನು ಟಾಸ್ಕ್ ರೀತಿ ಆಡಬೇಕು. ಅನವಶ್ಯಕವಾದ ಅಗ್ರೆಷನ್ ತೋರಿಸುತ್ತಾರೆ. ಹರ್ಟ್ ಮಾಡಿ ಅದ್ರಲ್ಲಿ ನೀನು ಗೆಲ್ಲುತ್ತೀಯಾ ಅಂದರೆ ಅದು.. ಎದುರುಗಡೆ ಒಂದು ಹುಡುಗಿ ಇದ್ದಾಳೆ ಆದ್ರೂ ನಾನು ಒದ್ದು ಬಿಡ್ತೀನಿ.. ಯಾರನ್ನ ಯಾರೂ ಒದಿಯೋದಕ್ಕೆ ಆಗಲ್ಲ, ಹೊಡಿಯೋದಕ್ಕೆ ಆಗಲ್ಲ.. ಈ ರೀತಿಯ ಮಾತುಗಳು ಬರ್ಬೇಕು ಎಂಬ ಅಗತ್ಯ ಇರಲಿಲ್ಲ ಅಲ್ಲಿ.. ಎಂದು ಬಿಗ್ ಬಾಸ್ ಮನೆಯ ಮಹಿಳೆಯರು ಒಬ್ಬೊಬ್ಬರೇ ಕಾರಣ ಕೊಟ್ಟಿದ್ದಾರೆ.

ಇನ್ನೂ, ಮನೆಯ ಎಲ್ಲ ಸ್ಪರ್ಧಿಗಳು ಅವರ​ ಹೆಸರನ್ನು ಎತ್ತಿದ ಕೂಡಲೇ ಗೋಲ್ಡ್​ ಸುರೇಶ್ ಕೆಂಡಾಮಂಡಲ ಆಗಿದ್ದಾರೆ. ನನ್ನ ಕೈಗೆ ನೋವಾಗಿದ್ದರು, ಹೆಣ್ಣು ಮಗಳು ಅಂತ ಬಂದಾಗ ಫಸ್ಟ್ ನಾನು ವಾಯ್ಸ್ ರೈಸ್ ಮಾಡಿದ್ದೇನೆ, ಅದೇ ನನಗೆ ಏನಾದ್ರು ಆದಾಗ ಒಬ್ರು ಕೂಡ ವಾಯ್ಸ್ ರೈಸ್ ಮಾಡಿಲ್ಲ ಎಂದು ಸಿಟ್ಟಾಗಿದ್ದಾರೆ. ಆದರೂ ಕೂಡ ಈ ವಾರ ಬಿಗ್ ​ಬಾಸ್​ನ ಕಳಪೆ ಪಟ್ಟ ಗೋಲ್ಡ್ ಸುರೇಶ್ ಅವರಿಗೆ ಹೋಗಿದೆ.

BBK 11: ಇವಳತ್ರ ಎಂಥ ಪಾಸಿಟಿವಿಟಿ ಇದೆ?: ಗೌತಮಿ ಹೇಳಿಕೆಗೆ ರೊಚ್ಚಿಗೆದ್ದ ಭವ್ಯಾ