Thursday, 3rd October 2024

Bigg Boss Kannada 11: ಚೈತ್ರಾ ಆರ್ಭಟಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ ಗೋಲ್ಡ್ ಸುರೇಶ್

Bigg Boss Kannada 11

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಎರಡನೇ ದಿನಕ್ಕೆ ಕಾಲಿಟ್ಟಿದ್ದು ಕುತೂಹಲ ಮೂಡಿಸುತ್ತಿದೆ. ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಶುರುಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಮನಸ್ತಾಪ, ಜಗಳಗಳು ಕೂಡ ಜೋರಾಗಿ ನಡೆಯುತ್ತಿದೆ. ಮೊದಲ ವಾರ ಮನೆಯಿಂದ ಹೊರಹಾಕಲು ಸ್ವರ್ಗ ನಿವಾಸಿಗಳು ಚೈತ್ರಾ ಕುಂದಾಪುರ (Chaithra Kundapura) ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಶೋ ಪ್ರಾರಂಭವಾದ ಎರಡು ದಿನ ಕೂಡ ಚೈತ್ರಾ ಅವರು ಫುಲ್ ಆ್ಯಕ್ಟಿವ್​ನಲ್ಲಿದ್ದಾರೆ. ತಮ್ಮ ಮಾತಿನ ಮೂಲಕವೇ ಚಾಟಿ ಬೀಸುತ್ತಿದ್ದಾರೆ. ಇವರ ಜೊತೆ ಈ ಮನೆಯಲ್ಲಿ ಇರುವುದು ಹೇಗಪ್ಪ ಇರೋದು ಎಂದು ಕೆಲ ಸ್ಪರ್ಧಿಗಳು ತಲೆಕೆಡೆಸಿಕೊಂಡಿದ್ದಾರೆ. ಹೀಗಿರುವಾಗ ಗೋಲ್ಡ್ ಸುರೇಶ್ ಅವರು ಚೈತ್ರಾ ಆರ್ಭಟಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ನರಕದಲ್ಲಿರುವ ಗೋಲ್ಡ್ ಸುರೇಶ್ ಮತ್ತು ಮಾನಸ ಅವರು ಚೈತ್ರಾ ಕುಂದಾಪುರ ಬಗ್ಗೆ ಗುಟ್ಟಾಗಿ ಮಾತನಾಡಿಕೊಂಡಿದ್ದಾರೆ. ಚೈತ್ರ ಅವರನ್ನು ಕಂಟ್ರೋಲ್ ಮಾಡಲು ಆಗಲ್ಲ. ನಿಮಗೆ ಅವರೆಲ್ಲಾ ಸೇರಿ ಬತ್ತಿ ಇಡ್ತಾರೆ ಅಂತ ಸ್ವರ್ಗ ವಾಸಿಗಳ ಬಳಿ ಹೇಳಿ ಬರ್ತಾರೆ ಇವ್ರು ಎಂದು ಸುರೇಶ್ ಹೇಳುತ್ತಿದ್ದಂತೆ ಇದಕ್ಕೆ ಧ್ವನಿಗೂಡಿಸಿದ ಮಾನಸ ಅವರು ಸ್ವರ್ಗವಾಸಿಗಳ ಜೊತೆ ಎಲ್ಲಾ ಹಂಚಿಕೊಳ್ತಾರೆ, 10 ನಿಮಿಷ ಅವರ ಜೊತೆ ಬಿಟ್ರೇ ಎಲ್ಲಾ ಹೇಳಿ ಬರ್ತಾರೆ ಎಂದು ಮಾನಸ ಹೇಳಿದ್ದಾರೆ.

Chaithra Kundapura: ಹಣದ ಸುರಿಮಳೆ: ಒಂದು ದಿನಕ್ಕೆ ಚೈತ್ರಾ ಕುಂದಾಪುರಗೆ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

ಇದೇ ವೇಳೆ ಚೈತ್ರಾ ಅವರ ವೀಕ್ ನೆಸ್ ಪಾಯಿಂಟ್ ಬಗ್ಗೆಯೂ ಬಿಸಿ ಬಿಸಿ ಚರ್ಚೆ ನಡೆದಿದೆ. ‘ಚೈತ್ರ ಅವರ ಟ್ಯಾಲೆಂಟ್​ ಅರ್ಥ ಮಾಡಿಕೊಳ್ಳಿ. ಅವರನ್ನ ಮೇಲಕ್ಕೆ ಹತ್ತಿಸಬೇಕು. ಮಾತಲ್ಲೇ ಮನೆ ಕಟ್ಟಿದ್ರೆ ಹೌದೋ ಓಹ್ ಅಂತಾರೆ. ಅವಳನ್ನು ಹೊಗಳಬೇಕು ನೀನು ರನ್ನ, ಚಿನ್ನ, ಚಂದ್ರ, ಚಂದಮಾಮ ಎಂದರೆ ಮುಗಿಯಿತು’ ಎಂದು ಸುರೇಶ್ ಅವರು ಮಾನಸ ಬಳಿ ಚೈತ್ರಾ ಅವರನ್ನು ಪಳಗಿಸುವ ಟ್ರಿಕ್ ಹೇಳಿದ್ದಾರೆ.

ಇನ್ನು ಮಾನಸ ಹಾಗೂ ಚೈತ್ರಾ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಚೈತ್ರಾ ಧ್ಯಾನ ಮಾಡುತ್ತಿರುವುದನ್ನು ಕಂಡು ಮಾನಸ ಅವರು ‘ಈ ಧ್ಯಾನ ಮಾಡುವವರ ಮೇಲೆ ನನಗೆ ಡೌಟ್ ಇದೆ, ಅವರು ನಿದ್ದೆ ಮಾಡುತ್ತಿದ್ದಾರ ಅಂತ’ ಎಂದು ಹೇಳಿದ್ದಾರೆ. ಇಲ್ಲಿಂದ ಚೈತ್ರಾ-ಮಾನಸ ನಡುವೆ ಗಲಾಟೆ ಶುರುವಾಗಿದೆ. ‘ನಿಮ್ದು ಎಷ್ಟಿದೆ ಅಷ್ಟು ನೋಡಿಕೊಳ್ಳಿ. ಮಾತಾಡೋಕೆ ಅದರ ಬಗ್ಗೆ ಒಂದು ಲೆವೆಲ್ ಬೇಕು’ ಎಂದು ಚೈತ್ರಾ ನೇರವಾಗಿ ಹೇಳಿದ್ದಾರೆ.