Thursday, 12th December 2024

BBK 11: ಹೆಣ್ಣುಮಕ್ಕಳಿಗೂ ಪ್ರೈವೇಟ್ ಪಾರ್ಟ್ ಇರುತ್ತೆ: ಗೋಲ್ಡ್ ಸುರೇಶ್​​ರ ಮೈಚಳಿ ಬಿಡಿಸಿದ ಗೌತಮಿ

Gowthami and Gold Suresh

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಕುತೂಹಲ ಘಟ್ಟದತ್ತ ಸಾಗುತ್ತಿದೆ. ಮನೆಯೊಳಗಿರುವ ಎಲ್ಲ ಸ್ಪರ್ಧಿಗಳು ಬಲಿಷ್ಠರಾಗಿದ್ದಾರೆ. ಇದರಲ್ಲಿ ಕೆಲವರು ನಾಮಿನೇಟ್ ಆಗಿದ್ದು, ಈ ವಾರ ಉಳಿದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಟಾಸ್ಕ್ ಮಧ್ಯೆ ಕೆಲ ನಾಮಿನೇಟ್ ಆದ ಸ್ಪರ್ಧಿಗಳು ತುಂಬಾ ಅಗ್ರೆಸಿವ್ ಆಗಿ ಆಡುತ್ತಿದ್ದಾರೆ. ಹೆಣ್ಣುಮಕ್ಕಳು ಎಂದುಕೂಡ ನೋಡದೆ ಮನಬಂದಂತೆ ಎದುರಾಳಿ ಸದಸ್ಯರಿಗೆ ಹಾನಿ ಮಾಡುತ್ತಿದ್ದಾರೆ. ಇದು ಸ್ಟ್ಯಾಚ್ಯೂ ಟಾಸ್ಕ್​ನಲ್ಲಿ ಕೂಡ ಮುಂದುವರೆದಿದೆ.

ಟಾಸ್ಕ್ ಏನು?:

ಬಿಗ್ ಬಾಸ್ ಮನೆಯ ಜೋಡಿ ಸದಸ್ಯರಿಗೆ ಒಂದು ಟಾಸ್ಕ್ ನೀಡಿದ್ದರು. ಇದರ ಪ್ರಕಾರ ಪ್ರತಿ ಮೂರು ಜೋಡಿಗಳು ಸ್ಟ್ಯಾಚ್ಯೂ ಮಾದರಿಯಲ್ಲಿ ಒಂದು ಹಲಗೆಯ ಮೇಲೆ ನಿಲ್ಲಬೇಕು. ನಿಂತ ಜಾಗದಿಂದ ಅವರನ್ನು ಕದಲುವಂತೆ ಉಳಿದ ಜೋಡಿಗಳು ನೀರನ್ನು ಎರಚಬೇಕು. ಈ ಮೂರು ಜೋಡಿಗಳ ಪೈಕಿ ಅತಿ ಕಡಿಮೆ ಫೌಲ್ ಮಾಡಿದವರಿಗೆ 100 ಅಂಕ, ಎರಡನೇ ಸ್ಥಾನದಲ್ಲಿ ಇರುವವರಿಗೆ 50 ಅಂಕ ಹಾಗೂ ಅತೀ ಹೆಚ್ಚು ಫೌಲ್ ಮಾಡಿದವರಿಗೆ ಯಾವುದೇ ಅಂಕ ಇರುವುದಿಲ್ಲ.

ಈ ಟಾಸ್ಕ್​ನಲ್ಲಿ ಭವ್ಯಾ ಗೌಡ ಹಾಗೂ ಮಂಜು ಜೋಡಿ ಸ್ಟ್ಯಾಚ್ಯೂ ಆಗಿ ನಿಂತಿದ್ದರು. ಈ ವೇಳೆ ಸುರೇಶ್ ಹಾಗೂ ಅನುಷಾ ಜೋಡಿ ಅವರು ಬಕೆಟ್​ನಲ್ಲಿ ನೀರು ಹಾಗೂ ಸಗಣಿ ನೀರು ತಂದು ಎರಚಿದ್ದಾರೆ. ಇದು ಭವ್ಯಾ ಅವರ ಕಾಲಿಗೆ ಬಲವಾಗಿ ಹೊಡೆದಿದೆ. ಆಗ ಭವ್ಯಾ ಅವರು ಅಳು ಬಂದರೂ ತಡೆದುಕೊಂಡಿದ್ದಾರೆ. ಟಾಸ್ಕ್ ಮುಗಿದ ಬಳಿಕ ಭವ್ಯಾ ಅವರಿಗೆ ನಡೆಯಲೂ ಸಾಧ್ಯವಾಗಲಿಲ್ಲ.

ಇದನ್ನು ಕಂಡು ಗೌತಮಿ ಅವರು ಸುರೇಶ್ ಮೇಲೆ ಕೆಂಡಾಮಂಡಲರಾಗಿದ್ದಾರೆ. ‘ಸುರೇಶ್ ನೀವು ಮಾಡಿದ್ದು ತಪ್ಪು. ಗಂಡು ಮಕ್ಕಳಿಗೆ ಮಾತ್ರ ಪ್ರೈವೇಟ್ ಪಾರ್ಟ್ ಇರೋದಾ? ಹೆಣ್ಣುಮಕ್ಕಳಿಗೂ ಇರುತ್ತೆ. ನೀರನ್ನು ಹಾಕುವಾಗ ಸ್ವಲ್ಪ ಎಚ್ಚರಿಕೆಯಿಂದ ಹಾಕಬೇಕು ಎಂದು ಗೌತಮಿ ಸುರೇಶ್​ಗೆ ಎಚ್ಚರಿಕೆ ನೀಡಿದ್ದಾರೆ. ಇಷ್ಟೇ ಅಲ್ಲದೆ ಮುಖಕ್ಕೆ ನೀರು ಹಾಕುವಂತಿಲ್ಲ ಎಂದು ಹೇಳಿದ್ದರೂ ಸುರೇಶ್ ಎರಚಿದ ಸಗಣಿ ನೀರು ಮಂಜು ಮುಖಕ್ಕೆ ತಾಗಿದೆ. ಈ ಕಾರಣಕ್ಕೆ ಕೂಡ ಮಾತಿನ ಸಮರ ನಡೆಯಿತು.

BBK 11: ಬಿಗ್ ಬಾಸ್ ಮನೆ ಅಲ್ಲೋಲ ಕಲ್ಲೋಲ: ಯಾರೂ ಉಳಿಯಲ್ಲ ಎಂದು ತೊಡೆ ತಟ್ಟಿ ನಿಂತ ಉಗ್ರಂ ಮಂಜು