Sunday, 13th October 2024

‘ಗುಜಾರಾತ್ ಫೈಲ್ಸ್’ ಸಿನಿಮಾ ನಿರ್ಮಿಸಲಿದ್ದಾರೆ ವಿನೋದ್ ಕಾಪ್ರಿ

ನವದೆಹಲಿ: ‘ದಿ ಕಾಶ್ಮೀರ್ ಫುಲ್ಸ್’ ಸಿನಿಮಾ ಕುರಿತು ಒಂದಲ್ಲ ಒಂದು ರೀತಿಯಲ್ಲಿ ಚರ್ಚೆ ಆಗುತ್ತಲೇ ಇದೆ. ಹಲವು ಕಡೆಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಲಾ ಗಿದ್ದು, ಚಿತ್ರವನ್ನು ಎಲ್ಲರೂ ನೋಡಬೇಕು ಎಂದು ರಾಜಕೀಯ ಮುಖಂಡರು ಹೇಳುತ್ತಿದ್ದಾರೆ.

ಸ್ವತಃ ಪಿ.ಎಂ ನರೇಂದ್ರ ಮೋದಿ ಕೂಡ ಈ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಈ ಸಿನಿಮಾ ಗೆ ಸಿಕ್ತಿರೋ ರೆಸ್ಪಾನ್ಸ್ ಬೆನ್ನಲ್ಲೇ ಇದೀಗ ಮತ್ತೊಂದು ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕರು ಮುಂದೆ ಬಂದಿದ್ದಾರೆ. ‘ಗುಜಾರಾತ್ ಫೈಲ್ಸ್’ ಸಿನಿಮಾವನ್ನು ಹೊರ ತರುವುದಾಗಿ ಘೋಷಿಸಿದ್ದಾರೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಬಂದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಬೆನ್ನಲ್ಲೇ ಈಗ ಬಾಲಿವುಡ್ ನಿರ್ದೇಶಕ ವಿನೋದ್ ಕಾಪ್ರಿ ‘ಗುಜಾರಾತ್ ಫೈಲ್ಸ್’ ಸಿನಿಮಾವನ್ನು ಹೊರತರುವುದಾಗಿ ಘೋಷಿಸಿದ್ದಾರೆ. ಸಿನಿಮಾ ತೆರೆಗೆ ತರುವ ಎಲ್ಲಾ ಸಿದ್ಧತೆಗಳನ್ನು ವಿನೋದ್ ಕಾಪ್ರಿ ಈಗಾಗಲೇ ಮಾಡಿಕೊಂಡಿದ್ದು, ಪ್ರಧಾನಿ ಮೋದಿಗೆ ವಿನೋದ್ ಕಾಪ್ರಿ ಸವಾಲು ಕೂಡ ಹಾಕಿದ್ದಾರೆ.

‘ಗುಜರಾತ್ ಫೈಲ್ಸ್‌’ ಸಂಬಂಧಿಸಿದಂತೆ ಎರಡು ಟ್ವೀಟ್‌ ಅನ್ನು ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ವಿನೋದ್ ಕಾಪ್ರಿ ತಮ್ಮ ಮೊದಲ ಟ್ವೀಟ್‌ನಲ್ಲಿ ಪ್ರಧಾನಿ ಮೋದಿಯನ್ನು ಟ್ಯಾಗ್ ಮಾಡಿದ್ದು, ನಿಮ್ಮ ಪಾತ್ರವನ್ನು ಸಹ ವಿವರವಾಗಿ ತೋರಿಸ ಲಾಗುತ್ತಿದೆ.’ ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ನರೇಂದ್ರ ಮೋದಿ ಜಿ ಚಿತ್ರದ ಬಿಡುಗಡೆಯನ್ನು ನಿಲ್ಲಿಸುವುದಿಲ್ಲ ಎಂದು ನೀವು ಇಂದು ದೇಶದ ಮುಂದೆ ನನಗೆ ಭರವಸೆ ನೀಡುತ್ತೀರಾ?’ ಎಂದು ಕೇಳಿ ಪ್ರಧಾನಿ ಮೋದಿಯನ್ನು ಟ್ಯಾಗ್ ಮಾಡಿದ್ದಾರೆ. ವಿನೋದ್ ಕಾಪ್ರಿಯ ಈ ಎರಡೂ ಟ್ವೀಟ್‌ಗಳು ಹೆಚ್ಚು ವೈರಲ್ ಆಗುತ್ತಿವೆ.

ಅದರಲ್ಲೂ ‘ ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಂದ ನಂತರ ‘ದಲಿತ್ ಫೈಲ್ಸ್’, ‘ಗುಜರಾತ್ ಫೈಲ್ಸ್’ ಸಿನಿಮಾಗಳನ್ನು ಮಾಡಬೇಕು. ಜನರಿಗೆ ಸತ್ಯ ದರ್ಶನ ಮಾಡಬೇಕು ಎಂಬ ಕೂಗುಗಳು ಕೇಳಿಬರುತ್ತಲೇ ಇತ್ತು.