Tuesday, 10th December 2024

BBK 11 Captain: ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ಕ್ಯಾಪ್ಟನ್ ಆಗಿ ಈ ಮಹಿಳಾ ಸ್ಪರ್ಧಿ ಆಯ್ಕೆ

Hamsa BBBK 11

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ಒಂದು ವಾರ ಆಗುತ್ತಾ ಬಂದಿದೆ. 17 ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದು, ಟಾಸ್ಕ್​ನ ಕಾವು ಏರುತ್ತಿದೆ. ನರಕ ವಾಸಿಗಳು ಸ್ವರ್ಗಕ್ಕೆ ಬರಲು ಪಣತೊಡುತ್ತಿದ್ದಾರೆ. ಇದರ ಮಧ್ಯೆ ಮನೆಯ ಕ್ಯಾಪ್ಟನ್ ಆಯ್ಕೆ ಮಾಡಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ಕ್ಯಾಪ್ಟನ್ ಆಗಿ ಸ್ವರ್ಗದಲ್ಲಿರುವ ಹಂಸ (Hamsa) ಆಯ್ಕೆ ಆಗಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್ ಆಡಲು ಬಿಗ್ ಬಾಸ್ 6 ಸ್ವರ್ಗ ವಾಸಿಗಳಿಗೆ ಮಾತ್ರ ಅವಕಾಶ ನೀಡಿದ್ದರು. ನಿಮ್ಮೊಳಗೆ ಚರ್ಚಿಸಿ ಆಯ್ಕೆ ಮಾಡಿ ಎಂದಿದ್ದರು. ಅದರಂತೆ ವೋಟಿಂಗ್ ಬಳಿಕ ಹಂಸಾ, ಭವ್ಯ, ತ್ರಿವಿಕ್ರಮ್, ಉಗ್ರಂ ಮಂಜು, ಐಶ್ವರ್ಯಾ, ಯಮುನಾ ಶ್ರೀನಿಧಿ ಅವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆಯಾದರು.​ ಆದರೆ, ಇದರಲ್ಲೊಂದು ಟ್ವಿಸ್ಟ್ ಇತ್ತು. ಅದೇನೆಂದರೆ ಕ್ಯಾಪ್ಟನ್ಸಿ ಟಾಸ್ಕ್‌ ಅನ್ನು 6 ಸ್ವರ್ಗನಿವಾಸಿಗಳ ಪರವಾಗಿ 6 ನರಕನಿವಾಸಿಗಳು ಆಡಬೇಕಿತ್ತು.

ಅದರಂತೆ ಉಗ್ರಂ ಮಂಜು ಪರವಾಗಿ ಮೋಕ್ಷಿತಾ ಪೈ, ಐಶ್ವರ್ಯಾ ಸಿಂಧೋಗಿ ಪರವಾಗಿ ಚೈತ್ರಾ ಕುಂದಾಪುರ, ಯಮುನಾ ಪರವಾಗಿ ಅನುಷಾ ರೈ, ಹಂಸ ಪರವಾಗಿ ರಂಜಿತ್, ತ್ರಿವಿಕ್ರಮ್ ಪರವಾಗಿ ಗೋಲ್ಡ್ ಸುರೇಶ್, ಭವ್ಯಾ ಗೌಡ ಪರವಾಗಿ ಶಿಶಿರ್ ಶಾಸ್ತ್ರಿ ಟಾಸ್ಕ್‌ ಆಡಲು ನಿರ್ಧರಿಸಿದರು.

ಟಾಸ್ಕ್ ಏನೆಂದರೆ, ಗೋಡೆಯಲ್ಲಿರುವ ಕಬ್ಬಿಣದ ಗೂಟದ ಮೇಲೆ ಸ್ಪರ್ಧಿಗಳು ಹತ್ತಿ ನಿಲ್ಲಬೇಕು. ಕೊನೆಯವರೆಗೂ ಗೋಡೆ ಮೇಲೆ ನಿಂತಿರುವ ನರಕವಾಸಿ ಗೆಲ್ಲುತ್ತಾರೆ. ಅತ್ತ ನರಕವಾಸಿ ಬೆಂಬಲಿಸಿದ ಸ್ವರ್ಗ ನಿವಾಸಿ ಕ್ಯಾಪ್ಟನ್ ಆಗುತ್ತಾರೆ. ಕ್ಯಾಪ್ಟನ್ ಟಾಸ್ಕ್​ ವೇಳೆ ಹಂಸ ಪರ ಆಡಿದ ರಂಜಿತ್​ ಗೆದ್ದರು. ಹೀಗಾಗಿ ಸೀಸನ್ 11ರ ಮೊದಲ ಕ್ಯಾಪ್ಟನ್ ಆಗಿ ಹಂಸ ಆಯ್ಕೆಯಾಗಿದ್ದಾರೆ. ಹಂಸ ನಾಯಕತ್ವದಲ್ಲಿ ಒಂದು ವಾರ ಬಿಗ್ ಬಾಸ್ ಆಟ ನಡೆಯಲಿದೆ.

ಈ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆದ ಹಂಸ ಅವರು ಮುಂದಿನ ವಾರದ ನಾಮಿನೇಷನ್‌ನಿಂದ ಇಮ್ಯೂನಿಟಿ ಪಡೆದಿದ್ದಾರೆ. ಅಲ್ಲದೆ ಇಷ್ಟರವರೆಗೂ ಯಾರಿಗೂ ಸಿಗದ ಒಂದು ಅತ್ಯುನ್ನತ ಅಧಿಕಾರವನ್ನ ಕ್ಯಾಪ್ಟನ್ ಪಡೆದುಕೊಳ್ಳಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಲ್ಲದೆ ಕ್ಯಾಪ್ಟನ್ ಮನಸ್ಸು ಮಾಡಿದರೆ ಸ್ವರ್ಗ ಅಥವಾ ನರಕ ನಿವಾಸಿಗಳನ್ನು ಅದಲು ಬದಲು ಮಾಡಬಹುದು ಎಂದು ಕೂಡ ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. ಹೀಗಾಗಿ ಮುಂದಿನ ವಾರದ ಎಪಿಸೋಡ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಇಂದು ಕಿಚ್ಚನ ಪಂಚಾಯಿತಿ: ಯಾವ ಯಾವ ವಿಚಾರಕ್ಕೆ ಕ್ಲಾಸ್ ತೆಗೋತಾರೆ ಸುದೀಪ್?