Tuesday, 10th December 2024

BBK 11: ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಗೆದ್ದ ಹನುಮಂತ: ಹಳ್ಳಿ ಪ್ರತಿಭೆಯ ಕಿಲಾಡಿ ಆಟಕ್ಕೆ ಎಲ್ಲರೂ ಶಾಕ್

Hanumantha Captain

ಬಿಗ್ ಬಾಸ್ ಕನ್ನಡ (Bigg Boss Kannada 11) ಸೀಸನ್ 11ರ ಐದನೇ ವಾರದ ಕ್ಯಾಪ್ಟನ್ ಆಗಿ ಸಿಂಗರ್ ಹನುಮಂತ ಅವರು ಆಯ್ಕೆ ಆಗಿದ್ದಾರೆ. ತನ್ನ ಚುರುಕುತನ ಹಾಗೂ ಗೇಮ್ ಪ್ಲಾನ್ ಮೂಲಕ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಗೆದ್ದು ಇವರು ಮನೆಯ ಹೊಸ ನಾಯಕರಾಗಿದ್ದಾರೆ. ಹನುಮಂತ ಕ್ಯಾಪ್ಟನ್ ಆಗಿದ್ದನ್ನು ಕಂಡು ಇಡೀ ಮನೆ ಖುಷಿ ಜೊತೆಗೆ ಶಾಕ್ ಆಗಿದೆ. ಅದರಲ್ಲೂ ಧನರಾಜ್ ಆಚಾರ್ ಇವರನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಯೊಳಗೆ ರೌಂಡ್ ಹಾಕಿದ್ದಾರೆ.

ಬಿಗ್ ಬಾಸ್ ಕ್ಯಾಪ್ಟನ್ಸಿ ಆಟ ಕಠಿಣ ಟಾಸ್ಕ್ ನೀಡಿದ್ದರು. ಗಾರ್ಡನ್ ಏರಿಯಾದಲ್ಲಿ ಹಾಕಿರುವ ಬಲೆಯಲ್ಲಿ ನುಗ್ಗಿ ಹೋಗಿ, ತಮ್ಮ ಫೋಟೋ ಇರುವ ಬಾಕ್ಸ್ ಬಿಟ್ಟು ಬೇರೆಯವರ ಭಾವಚಿತ್ರ ಇರುವ ಬಾಕ್ಸ್ ತೆಗೆದುಕೊಂಡು ಹೊರಬಂದು ಪೆಡಸ್ಟ್ರಲ್ ಮೇಲೆ ಇಡಬೇಕು. ಈ ಟಾಸ್ಕ್​ನ ಕೊನೆಯಯಲ್ಲಿ ಧರ್ಮ ಕೀರ್ತಿರಾಜ್, ಚೈತ್ರಾ ಕುಂದಾಪುರ ಹಾಗೂ ಹನುಮಂತ ಇದ್ದರು. ಆಗ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಟ್ಟರು. ಈಗ ಅವರ ಫೋಟೋವನ್ನು ಅವರೇ ತರಬೇಕು. ಈ ಮೂವರಲ್ಲಿ ಮೊದಲು ಬಲೆಯಿಂದ ಅವರ ಫೋಟೋ ಹೊರತಂದ ಸದಸ್ಯ ಮನೆಯ ಕ್ಯಾಪ್ಟನ್ ಆಗುತ್ತಾರೆ.

ಹನುಮಂತ ಅವರು ಬಲೆಯ ಒಳಗೆ ನುಗ್ಗಿ ಮೊದಲು ತಮ್ಮ ಫೋಟೋವನ್ನು ಹೊರತಂದಿದ್ದಾರೆ. ಈ ಮೂಲಕ ಮನೆಯ ಅಧಿಕೃತವಾಗಿ ಮನೆಯ ಹೊಸ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಮನೆಯ ಕೆಲ ಸ್ಪರ್ಧಿಗಳು ಈ ಕ್ಯಾಪ್ಟನ್ಸಿ ಆಟವನ್ನು ಗೆಲ್ಲಲು ಹಲವಾರು ಪ್ರಯತ್ನಗಳನ್ನು ಮಾಡಿದ್ದರು. ಆದರೆ ಅವರ ಎಲ್ಲ ಪ್ಲಾನ್​​ಗಳು ವರ್ಕ್​ ಆಗಲಿಲ್ಲ. ಕೊನೆಗೆ ತನ್ನ ಆಟದ ಮೇಲೆ ಹಾಗೂ ತಮ್ಮ ಫೋಟೋ ಮೇಲೆ ಗಮನವಿಟ್ಟು ಬಿಗ್​ಬಾಸ್​ ಕ್ಯಾಪ್ಟನ್ ಆಗಿ ಗೆದ್ದು ಹನುಮಂತ ಗೆದ್ದು ಬೀಗಿದ್ದಾರೆ.

ಮೊದಲ ಸುತ್ತಿನಲ್ಲಿ ಶಿಶಿರ್ ಅವರು ಹೊರಬಿದ್ದರು. ಸುರೇಶ್ ಹಾಗೂ ಮಂಜು ರೂಲ್ಸ್ ಬ್ರೇಕ್ ಮಾಡಿದ ಕಾರಣದಿಂದ ಇಬ್ಬರನ್ನು ಉಸ್ತುವಾರಿಗಳಾದ ಭವ್ಯ ಮತ್ತು ತ್ರಿವಿಕ್ರಮ್ ಇಬ್ಬರನ್ನು ಹೊರಗಿಟ್ಟರು. ಈ ವೇಳೆ ರೂಲ್ ಬ್ರೇಕ್ ವಿಚಾರದಲ್ಲಿ ಮಂಜು-ತಿವಿಕ್ರಮ್ ನಡುವೆ ವಾಗ್ವಾದ ಕೂಡ ನಡೆಯಿತು. ಸದ್ಯ ಕ್ಯಾಪ್ಟನ್ ಆಗಿರುವ ಹನುಮಂತ ಈ ವಾರ ಬಿಗ್​ಬಾಸ್​ ಮನೆಯನ್ನು ಹಾಗೂ ಸ್ಪರ್ಧಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ರೋಚಕತೆ ಸೃಷ್ಟಿಸಿದೆ.

BBK 11: ನಾನು ಕೆಲವೊಂದು ಚಟಗಳಿಗೆ ಬಿದ್ದಿದ್ದೆ: ಬಿಗ್ ಬಾಸ್ ಮುಂದೆ ಎಲ್ಲವನ್ನೂ ಹೇಳಿದ ಉಗ್ರಂ ಮಂಜು