Thursday, 12th December 2024

BBK 11: ಬಂದ ಎರಡೇ ವಾರಕ್ಕೆ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಹನುಮಂತ

Hanumantha Kicchana Chappale

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ಎಲ್ಲರ ಮನೆ ಗೆಲ್ಲುತ್ತಿದ್ದಾರೆ. ತಮ್ಮ ಮಾತುಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳು ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸುತ್ತಿವೆ.

ತನ್ನ ಚುರುಕುತನ ಹಾಗೂ ಗೇಮ್ ಪ್ಲಾನ್ ಮೂಲಕ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಗೆದ್ದು ಇವರು ಮನೆಯ ಹೊಸ ನಾಯಕ ಕೂಡ ಆದರು. ಇದೀಗ ಈ ಎಲ್ಲ ಕಾರಣಕ್ಕೆ ಈ ಸೀಸನ್​ನ ಮೊದಲ ಕಿಚ್ಚನ ಚಪ್ಪಾಳೆ ಹನುಮಂತ ಅವರಿಗೆ ದಕ್ಕಿದೆ. ಈ ಸೀಸನ್ ಆರಂಭವಾದಾಗಿನಿಂದಲೂ ಯಾರಿಗೂ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಹನುಮಂತನಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

ವೀಕೆಂಡ್ ಎಪಿಸೋಡ್​ನಲ್ಲಿ ಮೊದಲಿಗೆ ಹನುಮಂತನಿಗೆ ಸ್ವಾಗತ ಕೋರಿದ ಕಿಚ್ಚ ಸುದೀಪ್, ಆ ನಂತರ ಅವರು ಎರಡು ಬಾರಿ ಕ್ಯಾಪ್ಟನ್ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಟಾಸ್ಕ್​ನಲ್ಲಿ ಗೆದ್ದು ಬೀಗಿದ್ದಕ್ಕೆ ಸುದೀಪ್ ಅವರು ಭೇಷ್ ಕೂಡ ಎಂದರು. ಈ ಸಂದರ್ಭದಲ್ಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಯಾಕೆ ನೀಡುತ್ತಾರೆ ಎಂದು ಹನುಮಂತ ಅವರಿಗೆ ತಿಳಿಸಿದ್ದಾರೆ. ಸುದೀಪ್ ಅವರು, ಇಷ್ಟಪಟ್ಟವರಿಗೆ ಕೈಯಲ್ಲಿ ತಟ್ಟೋದು, ಮಿಕ್ಕಿದವರಿಗೆ ಬಾಯಲ್ಲಿ ತಟ್ಟೋದು. ಇದು ನಿಮಗೆ ಕೈಯಲ್ಲಿ ತಟ್ಟಿದ್ದು, ಬೇಷ್ ಅಂದಿದ್ದು ಎಂದು ಹೇಳಿದ್ದಾರೆ. ಆ ನಂತರ ಫೋಟೋ ಒಂದನ್ನು ಕಳುಹಿಸಿದ್ದಾರೆ.

ಮಾನಸಾ ಎಲಿಮಿನೇಟೆಡ್:

ಬಿಗ್ ಬಾಸ್ ಕನ್ನಡ ಸೀಸನ್ 11ರ ಐದನೇ ವಾರ ತುಕಾಲಿ ಮಾನಸ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಕಳೆದ ವಾರವೇ ಇವರು ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಕಳೆದ ಕೆಲ ವಾರಗಳಿಂದ ಮಾನಸಾ ವಿರುದ್ಧ ಮನೆಮಂದಿ ಸಾಕಷ್ಟು ದೂರುಗಳನ್ನು ನೀಡಿದ್ದರು. ಇದೇ ಇವರ ಎಲಿಮಿನೇಷನ್​ಗೆ ಕಾರಣವಾಯಿತು ಎನ್ನಲಾಗುತ್ತಿದೆ. ತನ್ನದಲ್ಲದ ವಿಷಯಗಳಿಗೆ ಮೂಗು ತೂರಿಸಿಕೊಂಡು ಬಂದು ಜಗಳ ಆಡುವುದು, ಇತರರ ಚರ್ಚೆಗಳಲ್ಲಿ ತಾನಾಗಿಯೇ ಭಾಗವಹಿಸಿ ಆ ಚರ್ಚೆಯ ದಿಕ್ಕನ್ನೇ ತಪ್ಪಿಸುವುದು, ಮಾತಾಡುವಾಗ ತಮಗಿಷ್ಟ ಬಂದಂತೆ ಅಗೌರವವಾಗಿ ಮಾತಾಡೋದು, ನಾಲಿಗೆ ಮೇಲೆ ಹಿಡಿತ ಕಡಿಮೆ ಎಂದು ಮಾನಸಾ ವಿರುದ್ಧ ಸ್ಪರ್ಧಿಗಳು ದೂರಿದ್ದರು.

BBK 11: ಐದನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಮಾನಸಾ