Thursday, 12th December 2024

BBK 11: ಇನೋಸೆಂಟ್ ಅಲ್ಲ ಎಂದ ಮನೆಮಂದಿಗೆ ಕಿಚ್ಚನ ಎದುರೇ ಸ್ಲಿಪ್ಪರ್ ಶಾಟ್ ಹೊಡೆದ ಹನುಮಂತ

Mokshitha Sudeep and Hanumantha

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ಈ ವಾರ ಮನೆಮಂದಿ ಮಾಡಿದ ತಪ್ಪು-ಸರಿಗಳನ್ನು ಮಾತನಾಡಲು ಸುದೀಪ್ ಹಾಜರಾಗಿದ್ದಾರೆ. ಬಿಳಿ ಬಣ್ಣದ ಪೈಜಾಮಾದಂತಿರುವ ಕಾಸ್ಟ್ಯೂಮ್‌ ಹಾಕಿಕೊಂಡು ವೇದಿಕೆಗೆ ಬಂದ ಸುದೀಪ್ ನಗು ನಗುತ್ತಲೇ ಇಂದುಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ವಾರ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ವಿಶೇಷ ಪವರ್ ಗೆಲ್ಲುವ ಟಾಸ್ಕ್‌ ನೀಡಿದ್ದರು. ಈ ಬಗ್ಗೆ ವೇದಿಕೆಗೆ ಬಂದ ಕೂಡಲೆ ಮಾತನಾಡಿರುವ ಕಿಚ್ಚ, ‘ವಿಶೇಷ ಅಧಿಕಾರವನ್ನ ಗೆಲ್ಲುವ ಉದ್ದೇಶವನ್ನ ಇಟ್ಟುಕೊಂಡಿದ್ದ ಇಡೀ ಮನೆ, ಈ ಯುದ್ಧದಲ್ಲಿ ಗೆದ್ದವರು ಯಾರು? ಬಿದ್ದವರು ಯಾರು? ತನ್ನ ತನವನ್ನ ಕಳ್ಕೊಂಡವರು ಯಾರು? ಎಂದು ಪ್ರಶ್ನೆ ಹಾಕಿದ್ದಾರೆ. ಈ ಮೂಲಕ ಉಗ್ರಂ ಮಂಜು ಅವರಿಗೆ ದೊಡ್ಡ ಸಂಕಷ್ಟ ಎದುರಾಗುವ ಸೂಚನೆ ನೀಡಿದ್ದಾರೆ.

ಇದರ ಜೊತೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಮನೆಗೆ ಬಂದು ಮೊದಲ ಕಿಚ್ಚನ ಚಪ್ಪಾಳೆ ಗುಟ್ಟಿಸಿಕೊಂಡ ಹನುಮಂತ ಬಗ್ಗೆ ಮನೆಮಂದಿಗೆ ಇನ್ನೂ ಸಂಪೂರ್ಣ ಕ್ಲಾರಿಟಿ ಸಿಕ್ಕಿಲ್ಲ. ಅವರು ಇನೋಸೆಂಟ್ ಅಥವಾ ಪಾಪದವನ ರೀತಿ ನಟಿಸುತ್ತಿದ್ದಾನಾ? ಎಂಬ ಅನುಮಾನ ಸ್ಪರ್ಧಿಗಳಲ್ಲಿ ಇನ್ನೂ ಇದೆ. ಇದೀಗ ವೀಕೆಂಡ್​​ನಲ್ಲಿ ಈ ಪ್ರಶ್ನೆಯನ್ನು ಸುದೀಪ್ ಎತ್ತಿದ್ದಾರೆ. ಆದರೆ, ಇದಕ್ಕೆ ಹನುಮಂತ ಕೊಟ್ಟ ಉತ್ತರ ನೋಡಿ ಸ್ವತಃ ಸುದೀಪ್ ಅವರೇ ದಂಗಾಗಿದ್ದಾರೆ.

ಮೋಕ್ಷಿತಾ ಪೈ ಅವರು, ‘ಹನುಮಂತ ಇನೋಸೆಂಟ್ ಆಗಿ ಕಾಣಿಸ್ತಾ ಇರೋರು ಆದರೆ ಅವರು ಇನೋಸೆಂಟ್ ಅಲ್ಲ. ಅವನಿಗೆ ಗೊತ್ತಿಗೆ ಚೆನ್ನಾಗಿ ಮೈಂಡ್ ಗೇಮ್ ಹೇಗೆ ಆಡೋದು’ ಅಂತ ಎಂದಿದ್ದಾರೆ. ತ್ರಿವಿಕ್ರಮ್ ಅವರು, ‘ಅವರ ಫೇಸ್ ಅವನು ಇರೋದು ಇನೋಸೆಂಟ್ ಅನ್ಸುತ್ತೆ ಆದರೆ ಅವನು ತುಂಬಾ ಕ್ಲೆವರ್’ ಎಂದರೆ, ಚೈತ್ರಾ ಕುಂದಾಪುರ ಅವರು ‘ಹನುಮಂತ ಹೊರಗಡೆ ಕಾಣಿಸಿಕೊಳ್ಳುತ್ತಿರುವಷ್ಟು ಇನೋಸೆಂಟ್ ಅಲ್ಲವೇ ಅಲ್ಲ’ ಎಂದಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ಹನುಮಂತ, ‘ಇಲ್ಲಿ ಬಂದಿರೋರು ಎಲ್ಲ ಇನೋಸೆಂಟ್, ಯಾರೂ ಗೊತ್ತಿಲ್ಲದಂತೆ ನಾಟಕ ಮಾಡುತ್ತಾ ಇದ್ದಾರೆ, ನನ್ನ ಹಿಂಡ್ಕೊಂಡ್ರು ನಾನೂ ಅವನೇ’ ಎಂದು ಹೇಳಿದ್ದಾರೆ.

ಈ ವಾರ ನೋ ಎಲಿಮಿನೇಷನ್:

ಈ ವಾರ ದೊಡ್ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದಾರೆ. ಎಲ್ಲರೂ ಬಲಿಷ್ಠ ಸ್ಪರ್ಧಿಗಳೇ ಆಗಿದ್ದಾರೆ. ಇದರಲ್ಲಿ ಧರ್ಮಾ ಕೀರ್ತಿರಾಜ್, ಭವ್ಯಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಇದ್ದಾರೆ. ಆದರೆ, ಈ ವಾರ ಯಾವ ಸ್ಪರ್ಧಿಯೂ ಮನೆಯಿಂದ ಹೊರಹೋಗುವುದಿಲ್ಲ. ಅಂದರೆ, ಈ ವಾರ ನೋ ಎಲಿಮಿನೇಷನ್. ಈ ವಾರ ಗುರುವಾರದ ಸಂಚಿಕೆವರೆಗೂ ಟಾಸ್ಕ್‌ಗಳು ನಡೆದವು. ಟಾಸ್ಕ್‌ಗಳು ನಾಮಿನೇಷನ್‌ ಮೇಲೂ ಪರಿಣಾಮ ಬೀರಿದ್ದವು. ಆದರೆ, ಈ ವಾರ ವೋಟಿಂಗ್ ಲೈನ್ಸ್ ತೆರೆದಿರುವುದಿಲ್ಲ ಎಂಬ ಸೂಚನೆಯನ್ನ ವೀಕ್ಷಕರಿಗೆ ಬಿಗ್ ಬಾಸ್ ನೀಡಿದ್ದಾರೆ.

BBK 11: ಎಲಿಮಿನೇಷನ್ ವಿಚಾರದಲ್ಲಿ ಬಿಗ್ ಟ್ವಿಸ್ಟ್ ನೀಡಿದ ಬಿಗ್ ಬಾಸ್: ಈ ವೀಕೆಂಡ್ ಏನಾಗುತ್ತೆ?