Sunday, 6th October 2024

ಹಿರಿಯ ನಟ ಅನಂತನಾಗ್ ಹುಟ್ಟುಹಬ್ಬ ಇಂದು

ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟ ನಟನೆಯ ಮೂಲಕ ಮನೆಮಾತಾಗಿರುವ ಹಿರಿಯ ನಟ ಅನಂತ್‌ನಾಗ್ ಅವರಿಗೆ ಇಂದು 72ನೇ ಹುಟ್ಟುಹಬ್ಬದ ಸಂಭ್ರಮ.

ಇವರ ಮೂಲ ಹೆಸರು ಅನಂತ್ ನಾಗರಕಟ್ಟೆ. ಸೆಪ್ಟೆಂಬರ್ 4, 1948ರಲ್ಲಿ ಸದಾನಂದ ನಾಗರಕಟ್ಟೆ ಹಾಗೂ ಆನಂದಿ ದಂಪತಿಗೆ ಜನಿಸಿದ ನಟ ಅನಂತನಾಗ್, ಆರಂಭದಲ್ಲಿ ಹೀರೋ ಪಾತ್ರಗಳಲ್ಲಿ, ನಂತರ ಪೋಷಕ ನಟನಾಗಿ ಛಾಪು ಮೂಡಿಸಿದ್ದಾರೆ.
ಬಹುಭಾಷಾ ನಟನಾಗಿ ಹೆಸರು ಮಾಡಿರುವ ಅನಂತ್ ಅವರು ಕನ್ನಡ ಮಾತ್ರವಲ್ಲದೇ, ಮರಾಠಿ, ತಮಿಳೂ, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ನಟಿಸಿದ್ದಾಾರೆ. ಕನ್ನಡದಲ್ಲೇ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಅನಂತ್‌ನಾಗ್ ಅವರ ಇತ್ತೀಚಿನ ಚಿತ್ರ ಭೀಷ್ಮ. ತೆಲುಗು ಭಾಷೆಯ ಈ ಚಿತ್ರದಲ್ಲಿ ನಿತೀನ್ (ತೆಲುಗಿನ ಶ್ರೀನಿವಾಸ ಕಲ್ಯಾಣಂ ಖ್ಯಾತಿಯ) ಮತ್ತು ರಶ್ಮಿಕಾ ಮಂದಣ್ಣ (ಕಿರಿಕ್ ಪಾರ್ಟಿ ಖ್ಯಾತಿಯ)ನಟಿಸಿದ್ದಾರೆ.