Wednesday, 11th December 2024

ಲೆಜೆಂಡ್ ನಟ ಬಿಗ್ ಬಿ ಜನ್ಮದಿನ ಇಂದು

ಮುಂಬೈ: ಬಾಲಿವುಡ್ ರಂಗದ ಲೆಜೆಂಡ್ ಎಂದು ಕರೆಯಲ್ಪಡುವ ಅಮಿತಾಬ್ ಬಚ್ಚನ್ ಅವರು ಇಂದು 78ನೇ ಹುಟ್ಟುಹಬ್ಬ ಆಚರಿಸಿದರು.

ಎಲ್ಲರ ಫೇವರೇಟ್ ಸ್ಟಾರ್, 1969ರಲ್ಲಿ ಸಾತ್ ಹಿಂದೂಸ್ತಾನಿ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಹಾಲಿವುಡ್‍ನಲ್ಲೂ ತಮ್ಮ ನಟನಾ ಕೌಶಲ್ಯವನ್ನು ವಿಸ್ತರಿಸಿದ ಬಚ್ಚನ್‍, ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದರು. ಆಮೀರ್ ಖಾನ್ ಜತೆ 2018ರಲ್ಲಿ ಥಗ್‍ ಆಫ್ ಹಿಂದೂಸ್ಥಾನ್, ಸಹ ನಟಿಯರಾಗಿ ಕತ್ರಿನಾ ಕೈಫ್ ಹಾಗೂ ಫಾತಿಮಾ ಸಾಹ ನಟಿಸಿದ್ದಾರೆ.

ಪೀಕು ಚಿತ್ರದಲ್ಲಿ (2015) ದೀಪಿಕಾ ಪಡುಕೋಣೆ ಹಾಗೂ ದಿವಂಗತ ನಟ ಇರ್ಫಾನ್ ಖಾನ್‍ ಜತೆ ನಟಿಸಿದ್ದಾರೆ. ಈ ಚಿತ್ರ 78.38 ಕೋಟಿ ಬಾಚಿದೆ. ಪಿಂಕ್ ಚಿತ್ರದಲ್ಲಿ ತಾಪ್ಸಿ ಪನ್ನು, ಕೀರ್ತಿ ಕುಲ್ಹರಿ ಮತ್ತು ಆಂಡ್ರಿಯಾ ತರಿಯಂಗ್ ನಟಿಸಿದ್ದು, ನ್ಯಾಷನಲ್‍ ಅವಾರ್ಡ್ ಗೆದ್ದಿತು. ಕಲೆಕ್ಷನ್ ಸುಮಾರು 65.52 ಕೋಟಿ. ಕಭಿ ಖುಶಿ ಕಭಿ ಗಮ್‍‍ನಲ್ಲಿ ಬಿಗ್‍ಬಿ ಜತೆ ನಿಜ ಜೀವನದ ಪತ್ನಿ ಜಯಾ ಬಚ್ಚನ್, ಶಾರೂಖ್ ಖಾನ್, ಕಾಜೋಲ್,  ಹೃತಿಕ್ ರೋಶನ್ ಮತ್ತು ಕರೀನಾ ಕಪೂರ್ ನಟಿಸಿದ್ದಾರೆ.

2001ರಲ್ಲಿ ಈ ಚಿತ್ರ ರೂಪಾಯಿ 55.65 ಕೋಟಿ ರೂಪಾಯಿ ಬಾಚಿದೆ. ಪ್ರಕಾಶ್ ಝಾ ರವರ ಸತ್ಯಾಗ್ರಹ ಚಿತ್ರದಲ್ಲಿ ಅರ್ಜುನ್ ರಾಂಪಾನ್, ಅಜಯ್‍ ದೇವಗನ್, ಕರೀನಾ ಕಪೂರ್, ಮನೋಜ್ ಬಾಜಪೇಯಿ ಹಾಗೂ ಅಮೃತಾ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 55.08 ಕೋಟಿ ರುಪಾಯಿ ಬಾಚಿದೆ.