Thursday, 12th December 2024

BBK 11: ಬಿಗ್ ಬಾಸ್​ನಲ್ಲಿ ಜೋಡಿ ಟಾಸ್ಕ್: ಹನುಮಂತುಗೆ ಜೋಡಿಯಾಗಿ ಸಿಕ್ಕಿದ್ದು ಗೌತಮಿ

ಏಳನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಟಾಸ್ಕ್​ನ ಕಾವು ಏರುತ್ತಿದೆ. ಈವರೆಗೆ ಗುಂಪಿನಿಂದ ಕೂಡಿದ್ದ ಸ್ಪರ್ಧಿಗಳು ಈಗ ದೂರದೂರ ಆಗುತ್ತಿದ್ದು, ಇಂಡಿವ್ಯೂಜುವಲ್ ಗೇಮ್ ಆಡೋಕೆ ಶುರುಮಾಡಿಕೊಂಡಿದ್ದಾರೆ. ಸದ್ಯ ಬಿಗ್ ಬಾಸ್ ನೀಡುತ್ತಿರುವ ಟಾಸ್ಕ್ ಕೂಡ ಹಾಗೆಯೇ ಇದೆ. ಈ ವಾರದ ಮೊದಲ ದಿನ ದೊಡ್ಮನೆಯಲ್ಲಿ ಜೋಡಿ ಟಾಸ್ಕ್ ನೀಡಿದ್ದಾರೆ. ಇದು ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಜೋಡಿ ಟಾಸ್ಕ್ ಎಂದರೆ ಇಬ್ಬರು ಸ್ಪರ್ಧಿಗಳು ಸದಾ ಅಂಟಿಕೊಂಡೇ ಇರುವ ಟಾಸ್ಕ್ ಇದಾಗಿದೆ. ಜೋಡಿ ಜೋಡಿಯಾಗಿಯೇ ಟಾಸ್ಕ್ ಆಡಬೇಕಿದೆ. ಇದರಲ್ಲಿ ಯಾರು ಗೆಲ್ಲುತ್ತಾರೊ ಎಂಬ ಕುತೂಹಲವಿದೆ. ವಿಶೇಷ ಎಂದರೆ ಕಳೆದ ಎರಡು ವಾರಗಳಿಂದ ಟಾಸ್ಕ್​ನಲ್ಲಿ ಮಿಂಚುತ್ತಿರುವ ಹನುಮಂತ ಅವರಿಗೆ ಗೌತಮಿ ಜಾಧವ್ ಜೋಡಿ ಆಗಿದ್ದಾರೆ. ಇವರ ಆಟ ಮತ್ತು ಮಾತು ಎರಡೂ ನೋಡುಗರಿಗೆ ಸಖತ್ ಮಜಾ ಕೊಡುವಂತೆ ಇವೆ.

ಅತ್ತ ಭವ್ಯಾ ಗೌಡ ಮತ್ತು ಉಗ್ರಂ ಮಂಜು ಒಂದು ಜೋಡಿಯಾದರೆ, ಧರ್ಮ ಮತ್ತು ಐಶ್ವರ್ಯಾ ಮತ್ತೊಂದು ಜೋಡಿಯಾಗಿದ್ದಾರೆ. ಗೋಲ್ಡ್ ಸುರೇಶ್‌ಗೆ ಜೋಡಿಯಾಗಿ ಅನುಷಾ ರೈ, ಚೈತ್ರಾ ಕುಂದಾಪುರ-ಶಿಶಿರ್ ಹಾಗೂ ಧನರಾಜ್-ಮೋಕ್ಷಿತಾ ಜೋಡಿಯಾಗಿದ್ದಾರೆ. ತ್ರಿವಿಕ್ರಮ್ ಈ ವಾರದ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಈ ಜೋಡಿ ಒಬ್ಬರಿಗೊಬ್ಬರು ಬಿಟ್ಟು ಹೋಗದಂತೆ ಹಗ್ಗವನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಈ ವಾರ ಬಿಗ್​ಬಾಸ್​ ನೀಡುವ ಟಾಸ್ಕ್​​ಗಳು ಏನಾಗಿರುತ್ತವೆ? ಎಪಿಸೋಡ್​ಗಳಲ್ಲಿ ಏನೆಲ್ಲ ನೋಡಬಹುದು ಅನ್ನೋ ಚರ್ಚೆಯಲ್ಲಿ ಬಿಗ್​ಬಾಸ್​ ಅಭಿಮಾನಿಗಳು ಮುಳುಗಿದ್ದಾರೆ. ಚಟುವಟಿಕೆಯೊಂದರಲ್ಲಿ, ಮನೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳದ ಸ್ಪರ್ಧಿ ಯಾರು? ಎಂಬ ಪ್ರಶ್ನೆ ಕೇಳಲಾಗಿದ್ದು, ಆಗ ಹನುಮಂತು ಹೆಸರು ಬಂದಿದೆ. ಇದನ್ನು ತಮಾಷೆಯಾಗೇ ಮನೆ ಮಂದಿ ಮಾತುಕತೆ ನಡೆಸಿದ್ದಾರೆ.

ಈ ವಾರ ಡಬಲ್ ಎಲಿಮಿನೇಷನ್?:

ಆರನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದರು. ಇದರಲ್ಲಿ ಧರ್ಮಾ ಕೀರ್ತಿರಾಜ್, ಭವ್ಯಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಆಚಾರ್ ಇದ್ದರು. ಆದರೆ, ಎಲ್ಲರೂ ಸೇಫ್ ಆಗಿದ್ದರು. ಫೇಕ್ ಎಲಿಮಿನೇಷನ್‌ ನಡೆಸಿ ಒಬ್ಬರನ್ನು ಸೀಕ್ರೆಟ್‌ ರೂಮ್‌ನಲ್ಲಿ ಬಿಗ್ ಬಾಸ್ ಇಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅದು ನಡೆಯಲಿಲ್ಲ. ಹೀಗಾಗಿ ಕಳೆದ ವಾರ ಎಲಿಮಿನೇಷನ್ ಆಗಿಲ್ಲದ ಕಾರಣ ಈ ವಾರ ಡಬಲ್ ಎಲಿಮಿನೇಷನ್ ನಡೆಸಲಾಗುತ್ತದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.

BBK 11: ಸೂಪರ್ ಸಂಡೇ ಎಪಿಸೋಡ್​ನಲ್ಲಿ ಡ್ಯಾನ್ಸ್, ಡೈಲಾಗ್ ಮೂಲಕ ಅಬ್ಬರಿಸಿದ ಚೈತ್ರಾ ಕುಂದಾಪುರ