Friday, 13th December 2024

’ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತೆರೆಗೆ

ಬೆಂಗಳೂರು: ಕನ್ನಡದ ಪೈಕಿ ಬಹು ನಿರೀಕ್ಷಿತ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತೆರೆಗೆ ಬಂದಿದೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಸಿನಿಮಾಸ್ ಚಿತ್ರಮಂದಿರ ದಲ್ಲಿ ಶೋ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು, ಈ ಬಿಡುಗಡೆಯನ್ನು ಕನ್ನಡದ ಎಲ್ಲಾ ನಟರ ಅಭಿಮಾನಿಗಳೂ ಸಹ ಸಂಭ್ರಮಿಸುತ್ತಿದ್ದಾರೆ.

ಬಿಡುಗಡೆಯಾಗುವುದೇ ಅನುಮಾನ ಎನ್ನಲಾಗುತ್ತಿದ್ದ ಹಾಸ್ಟೆಲ್ ಹುಡುಗರು ಬೇಕಾಗಿ ದ್ದಾರೆ ಚಿತ್ರ ರಿಲೀಸ್ ಆಗುತ್ತಿರು ವುದು ಕನ್ನಡ ಸಿನಿ ರಸಿಕರ ಪಾಲಿಗೆ ಖುಷಿಯ ವಿಚಾರವೇ ಸರಿ.

ಅತಿಥಿ ಪಾತ್ರದಲ್ಲಿ ನಟಿಸಿದ್ದ ನಟಿ ರಮ್ಯಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸುವ ಮೂಲಕ ಬಿಡುಗಡೆಯ ಸನಿಹದಲ್ಲಿ ಶಾಕ್ ನೀಡಿದ್ದರು. ರಮ್ಯಾ ತನ್ನ ದೃಶ್ಯಗಳ ವಿಡಿಯೊ ಹಾಗೂ ಫೋಟೊಗಳನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ತನ್ನ ಅನುಮತಿ ಇಲ್ಲದೇ ಬಳಸಿ ಕೊಂಡಿದೆ ಎಂದು ಆರೋಪಿಸಿ ಒಂದು ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿ ನೋಟಿಸ್ ಕಳುಹಿಸಿದ್ದರು.

ಹೀಗಾಗಿಯೇ ಚಿತ್ರದ ಸೆಲೆಬ್ರಿಟಿ ಪ್ರೀಮಿಯರ್ ಶೋ ಸಹ ಕ್ಯಾನ್ಸಲ್ ಆಗಿ ಚಿತ್ರ ಬಿಡುಗಡೆಯಾಗುವುದರಲ್ಲಿ ಗೊಂದಲ ಮೂಡಿತ್ತು. ಈ ಗೊಂದಲಕ್ಕೆ ಕೋರ್ಟ್ ಉತ್ತರ ನೀಡಿದ್ದು, ಹಾಸ್ಟೆಲ್ ಹುಡುಗರು ಚಿತ್ರವನ್ನು ರಮ್ಯಾ ದೃಶ್ಯಗಳಿಗೆ ಕತ್ತರಿ ಹಾಕದೇ ಬಿಡುಗಡೆ ಮಾಡಬಹುದು ಎಂದು ತೀರ್ಪನ್ನು ನೀಡಿ ಹಾಸ್ಟೆಲ್ ಹುಡುಗರ ಕೈ ಹಿಡಿದಿದೆ.

ಹೀಗೆ ಕೇಸ್ ಹಾಕಿದ್ದ ರಮ್ಯಾಗೆ ಹಿನ್ನಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ಇನ್ನು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸಹ ತಮ್ಮ ಶಿಷ್ಯರ ಪರ ಬ್ಯಾಟ್ ಬೀಸಿದ್ದು, ನ್ಯಾಯ ಸಿಕ್ಕಿದ್ದರ ಕುರಿತು ವಿಶೇಷ ಪೋಸ್ಟ್ ಹಂಚಿಕೊಂಡು ನಟಿ ರಮ್ಯಾಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.