ಹೈದರಾಬಾದ್: ಜನಪ್ರಿಯ ನಟಿ ಸುರೇಖಾ ವಾಣಿ ಅನಿರೀಕ್ಷಿತ ಮಟ್ಟದ ಕ್ರೇಜ್ ಮತ್ತು ಜನಪ್ರಿಯತೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಮೂಲಕ ಸುದ್ದಿಯಲ್ಲಿದ್ದಾರೆ.
ಆಧುನಿಕ ಉಡುಗೆಗಳಲ್ಲಿ ಸುರೇಖಾ ವಾಣಿ ಹಂಚಿಕೊಂಡಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗುತ್ತಿವೆ. ‘ಸದ್ಯಕ್ಕೆ ಎರಡನೇ ಮದುವೆ ಬಗ್ಗೆ ಆಸಕ್ತಿಯಿಲ್ಲ. ಆದ್ರೆ, ಮಗಳು ಸುಪ್ರಿತಾ ನಾನು ಎರಡನೇ ಬಾರಿಗೆ ಮದುವೆಯಾಗ ಬೇಕೆಂದು ಸೂಚಿಸುತ್ತಿದ್ದಾಳೆ’ ಎಂದಿದ್ದಾರೆ.
ಈಗ ಎರಡನೇ ಬಾರಿಗೆ ಮದುವೆಯಾಗುವ ಯಾವುದೇ ಯೋಜನೆ ಹೊಂದಿಲ್ಲ ಎಂದು ವಾಣಿ ಹೇಳಿದ್ದಾರೆ.
ಸಧ್ಯಕ್ಕೆ ನನ್ನನ್ನ ಚೆನ್ನಾಗಿ ಅರ್ಥಮಾಡಿಕೊಳ್ಳುವ ಒಬ್ಬ ವ್ಯಕ್ತಿ ನನ್ನ ಗೆಳೆಯನಾಗಬೇಕು. ನಾನು ಕೂಡ ಅರ್ಥಮಾಡಿಕೊಳ್ಳಲು ಬಯಸುತ್ತೇನೆ. ಅಂಥ ವ್ಯಕ್ತಿ ಸಿಕ್ಕರೇ ನಾನು ಅವರನ್ನ ಇಷ್ಟಪಟ್ಟರೆ, ಮದುವೆಯಾಗುತ್ತೇನೆ’ ಎಂದಿದ್ದಾರೆ.
ನಟಿಮಣಿಯ ಈ ಹೇಳಿಕೆಯನ್ನ ಕೆಲವು ನೆಟ್ಟಿಗರು ಶ್ಲಾಘಿಸುತ್ತಿದ್ದರೆ, ಕೆಲವು ನೆಟ್ಟಿಗರು ಅವರನ್ನ ಟ್ರೋಲ್ ಮಾಡುತ್ತಿದ್ದಾರೆ.