Saturday, 14th December 2024

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅಮಿರ್‌ ಪುತ್ರಿ

ಮುಂಬೈ: ಆಮಿರ್​ ಖಾನ್ ಪುತ್ರಿ ಇರಾ ಖಾನ್​ಗೆ ಚಿತ್ರರಂಗದ ಬಗ್ಗೆ ಆಸಕ್ತಿ ಇಲ್ಲ. ಅವರು ಫಿಟ್ನೆಸ್​ ಟ್ರೇನರ್​ ನೂಪರ್​ ಶಿಖಾರೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಅಮಿರ್‌ ಪುತ್ರಿಯ ಮದುವೆ ಬುಧವಾರ ಅದ್ದೂರಿಯಾಗಿ ನಡೆಯಲಿದೆ. ಮದುವೆ ಸಂಭ್ರಮದಲ್ಲಿ, ಅಮಿರ್‌ ಮಾಜಿ ಪತ್ನಿ ಕಿರಣ್​ ರಾವ್​ ಕೂಡ ಭಾಗಿಯಾಗಿದ್ದಾರೆ.

1986ರಲ್ಲಿ ಆಮಿರ್​ ಖಾನ್​ ಮತ್ತು ರೀನಾ ದತ್ತ ಮದುವೆಯಾಗಿದ್ದರು. 2002ರಲ್ಲಿ ವಿಚ್ಛೇದನ ಪಡೆದರು. ಈ ದಂಪತಿಯ ಮಗಳೇ ಇರಾ ಖಾನ್​. ದೂರ ವಾದರೂ ಸಹ ಅಮಿರ್‌ ಖಾನ್‌ ತಮ್ಮ ಮಕ್ಕಳ ಮತ್ತು ಮಾಜಿ ಪತ್ನಿಯ ಜೊತೆ ಒಡನಾಟ ಉಳಿಸಿಕೊಂಡಿದ್ದರು. ಇದೀಗ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ.

ನೂಪರ್‌ ಶಿಖಾರೆ, ನಟ ಆಮಿರ್ ಖಾನ್​ಗೆ ಫಿಟ್ನೆಸ್​ ಟ್ರೇನರ್‌. ಇರಾ ನೂಪರ್‌ ನಡುವೆ ಲವ್​ ಆಗಿತ್ತು. ಒಂದಷ್ಟು ದಿನ ಡೇಟಿಂಗ್​ ಕೂಡ ನಡೆಸಿದ್ದರು. ಇದೀಗ ಈ ಜೋಡಿ ಹಸೆಮಣೆ ಏರುತ್ತಿದೆ. ಖಾನ್‌ ಪುತ್ರಿಯ ಮದುವೆ ಸಂಭ್ರಮದಲ್ಲಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.