Wednesday, 11th December 2024

ಸೂಪರ್‌ಸ್ಟಾರ್‌ ರಜನೀಕಾಂತ್‌ ಪಾಲಿಟಿಕ್ಸ್‌ ಎಂಟ್ರಿ ? ನಾಳೆ ಸಭೆ

ಚೆನ್ನೈ: ತಮಿಳುನಾಡು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಕಳೆದ ಒಂದು ವರ್ಷದಿಂದಲೂ ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ.

ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡುತ್ತಲೇ ಬಂದಿದ್ದ ರಜನೀಕಾಂತ್ ನವೆಂಬರ್ 30ರಂದು ಮಹತ್ವದ ಸಭೆ ಕರೆದಿದ್ದಾರೆ. ತಮ್ಮ ಆತ್ಮೀಯ ಬಳಗವನ್ನು ಸಭೆಗೆ ಆಹ್ವಾನಿಸಿದ್ದು, ರಾಜಕೀಯ ಪ್ರವೇಶದ ತೀರ್ಮಾನ ಪ್ರಕಟಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ರಜನೀ ಮಕ್ಕಳ ಮಂಡ್ರಂನ ಪದಾಧಿಕಾರಿಗಳ ಸಭೆ ಕರೆಯಲಾಗಿದ್ದು, ಅಲ್ಲಿ ತೀರ್ಮಾನ ಪ್ರಕಟಿಸಲಿದ್ದಾರೆಂಬ ಮಾಹಿತಿ ಇದೆ. 2017ರಲ್ಲೇ ರಜನೀಕಾಂತ್ ಚುನಾವಣೆ ಕಣಕ್ಕಿಳಿಯುತ್ತಾರೆಂಬ ಚರ್ಚೆಗಳು ನಡೆದಿತ್ತು. ಆದರೆ ಈವರೆಗೂ ತೀರ್ಮಾನ ಮಾಡಿರಲಿಲ್ಲ.