Sunday, 24th September 2023

ಇಡಿ ವಿಚಾರಣೆಗೆ ನಟಿ ಜಾಕ್ವೆಲಿನ್ ಹಾಜರು

ನವದೆಹಲಿ: ವಂಚನೆ ಆರೋಪಿ ಸುರೇಶ್ ಚಂದ್ರಶೇಖರ್ ಒಳಗೊಂಡಿರುವ ಅಕ್ರಮ ಹಣಕಾಸು ವ್ಯವಹಾರ ಪ್ರಕರಣದಲ್ಲಿ ಪ್ರಶ್ನಾವಳಿಗಳಿಗೆ ಉತ್ತರಿಸಲು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾದರು.

ಜಾರಿ ನಿರ್ದೇಶನಾಲಯವು ಅಕ್ರಮ ಹಣಕಾಸು ವ್ಯವಹಾರ ತಡೆ ಕಾಯ್ದೆ ಅಡಿ 36 ವರ್ಷ ವಯಸ್ಸಿನ ನಟಿಯ ಹೇಳಿಕೆ ದಾಖಲಿಸಿ ಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಕ್ವೆಲಿನ್ ಅವರನ್ನು ಈ ಮುನ್ನ ಇಡಿಯಲ್ಲಿ ಚಂದ್ರಶೇಖರ್ ಜೊತೆಗೆ ಈ ಪ್ರಕರಣದ ಸಂಬಂಧ ಎರಡು ಬಾರಿ ಗ್ರಿಲ್ ಮಾಡಲಾ ಗಿತ್ತು. ಗಣ್ಯ ವ್ಯಕ್ತಿಗಳಿಂದ ಸುಲಿಗೆ ಮಾಡಿದ ಹಣಕ್ಕೆ ಜಾಕ್ವೆಲಿನ್ ಫಲಾನುಭವಿಯಾಗಿದ್ದಾರೆ. ಇದು ಒಂದು ಅಪರಾಧವಾಗಿದೆ ಎಂದು ಇಡಿ ಶಂಕಿಸುತ್ತದೆ. 

error: Content is protected !!