Saturday, 14th December 2024

ಜಗನ್ ಮೋಹನ್ ರೆಡ್ಡಿ ಬಯೋಪಿಕ್‌ ಸಿನಿಮಾ ತೆರೆಗೆ

ಹೈದರಾಬಾದ್: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕುರಿತಾಗಿ ಸಿನಿಮಾ ತೆರೆಗೆ ಬರಲಿದೆ.

ಚಿತ್ರಕ್ಕೆ ‘ಯಾತ್ರಾ 2’ ಎಂದು ಹೆಸರಿಡಲಾಗಿದೆ. ತೆಲುಗು ಭಾಷೆಯಲ್ಲಿ ಚಿತ್ರ ತಯಾರಾಗು ತ್ತಿದ್ದರೂ ಜಗನ್ ಪಾತ್ರ ಮಾಡುವುದು ತಮಿಳಿನ ಖ್ಯಾತ ನಟ ಎಂದು ಹೇಳಲಾಗುತ್ತಿದೆ.

ಜಗನ್ ತಂದೆ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಬಯೋಪಿಕ್ ಕೂಡ ರಿಲೀಸ್ ಆಗಿತ್ತು. ಆ ಚಿತ್ರಕ್ಕೆ ‘ಯಾತ್ರಾ’ ಎಂದು ಹೆಸರಿಡಲಾಗಿತ್ತು. ಇದೀಗ ಜಗನ್ ಮೋಹನ್ ರೆಡ್ಡಿ ಸಿನಿಮಾಗೆ ‘ಯಾತ್ರಾ 2’ ಎಂದು ಹೆಸರಿಟ್ಟಿರುವುದಾಗಿ ನಿರ್ದೇಶಕ ಮಹಿ ವಿ ರಾಘವ್ ತಿಳಿಸಿದ್ದಾರೆ. ಯಾತ್ರ ಸಿನಿಮಾವನ್ನು ನಿರ್ದೇಶಿಸಿದ್ದ ರಾಘವ್ ಅವರೇ ಯಾತ್ರಾ 2 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಜಗನ್ ಮೋಹನ್ ಪಾತ್ರದಲ್ಲಿ ತಮಿಳು ನಟ ಜೀವ ನಟಿಸುತ್ತಿದ್ದಾರೆ ಎಂದು ಹೇಳಲಾ ಗುತ್ತಿದೆ. ಜೀವ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಅಲ್ಲದೇ ಈಗಾಗಲೇ ಜೀವ ಹಾಗೂ ನಿರ್ದೇಶಕರು ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ.