Saturday, 12th October 2024

ಮಾರ್ಚ್ 17 ರಂದು ‘ಜೇಮ್ಸ್’ ಬಿಡುಗಡೆ ?

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ದಿನ ಮಾರ್ಚ್ 17 ರಂದು ‘ಜೇಮ್ಸ್’ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪುನೀತ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ‘ಜೇಮ್ಸ್’ ಕೊಡುಗೆಯಾಗಿ ನೀಡಲು ಚಿತ್ರತಂಡ ಚಿಂತನೆ ನಡೆಸಿದೆ. 2022 ರ ಮಾರ್ಚ್ 17 ರಂದು ಪುನೀತ್ ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್’ ಬಿಡುಗಡೆ ಮಾಡಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಚೇತನ್ ಕುಮಾರ್ ನಿರ್ದೇಶನದ ಭಾರಿ ನಿರೀಕ್ಷೆಯ ‘ಜೇಮ್ಸ್’ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ‘ಜೇಮ್ಸ್’ ಚಿತ್ರದ ಡಬ್ಬಿಂಗ್ ವಿಚಾರವಾಗಿ ಶಿವಣ್ಣ ಅವರನ್ನು ಕೇಳಿಕೊಳ್ಳಲಾಗುವುದು. ಅಪ್ಪು ಅವರಿಗೆ ಧ್ವನಿ ನೀಡುವಂತೆ ಮನವಿ ಮಾಡಲಾ ಗುವುದು ಎಂದು ಹೇಳಲಾಗಿದೆ.