Friday, 13th December 2024

ಜೇಮ್ಸ್​ ಸಿನಿಮಾ ಟೀಸರ್​ ಬಿಡುಗಡೆಗೆ ದಿನಾಂಕ ಫಿಕ್ಸ್​

ಬೆಂಗಳೂರು: ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಟನೆಯ ಕೊನೇ ಸಿನಿಮಾದ ಪ್ರತಿಯೊಂದು ಅಪ್ಡೇಟ್​ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರ ತಂಡ ಈಗ ಸಿನಿಮಾ ಟೀಸರ್​ ಬಿಡುಗಡೆಗೆ ದಿನಾಂಕ ಫಿಕ್ಸ್​ ಮಾಡಿದೆ.

ಫೆ.11 ರಂದು ಜೇಮ್ಸ್​ ಸಿನಿಮಾದ ಟೀಸರ್​ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನೂ ಜೇಮ್ಸ್​ ಸಿನಿಮಾದಲ್ಲಿ ಪ್ರಿಯಾ ಆನಂದ್​ ಹಿರೋಯಿನ್​ ಆಗಿ ನಟಿಸಿದ್ದು, ತೆಲುಗು ನಟ ಶ್ರೀಕಾಂತ್​, ಶರತ್​ ಕುಮಾರ್​ ರಾಘವೇಂದ್ರ ರಾಜ್​ಕುಮಾರ್​, ಮುಂತಾದ ಕಲಾವಿದರು ನಟಿಸಿದ್ದಾರೆ. ಮಾರ್ಚ್​ 25 ಕ್ಕೆ ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿದ್ದು, ಇತ್ತೀಚೆಗೆ ಡಬ್ಬಿಂಗ್​ ಕಾರ್ಯವನ್ನ ಮುಗಿಸಿದ್ದಾರೆ.