Thursday, 3rd October 2024

Jayam Ravi Divorce: 15ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ತಮಿಳು ನಟ ಜಯಂ ರವಿ

Jayam Ravi divorce

ಚೆನ್ನೈ: ಸನ್‌ ಆಫ್‌ ಮಹಾಲಕ್ಷ್ಮಿ, ಜಯಂ, ಪೊನ್ನಿಯನ್‌ ಸೆಲ್ವಂ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದ ತಮಿಳು ನಟ ಜಯಂ ರವಿ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಜಯಂ ರವಿ(Jayam Ravi Divorce) ಮತ್ತು ಆರತಿ ರವಿಯ ಸುಮಾರು 15ವರ್ಷಗಳ ದಾಂಪತ್ಯ ಮುರಿದು ಬಿದ್ದಿದ್ದು, ಕೆಲವು ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನಾ ಪಡೆಯುತ್ತಿರುವುದಾಗಿ ದಂಪತಿ ಹೇಳಿಕೊಂಡಿದ್ದಾರೆ.

ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಕಳೆದ ಹಲವು ತಿಂಗಳಿಂದ ಇಬ್ಬರು ಅಷ್ಟೊಂದು ಜತೆಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅಲ್ಲದೇ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿ ಕೇಳಿಬರುತ್ತಿತ್ತು. ಇದೀಗ ಈ ಬಗ್ಗೆ ದಂಪತಿ ಅಧಿಕೃತವಾಗಿ ವಿಚ್ಛೇದನ ಪಡೆದಿರುವ ಬಗ್ಗೆ ಘೋಷಿಸಿದ್ದಾರೆ.

ಇನ್ನು ಈ ಬಗ್ಗೆ ಜಯಂ ರವಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ನಿಮ್ಮ ಪ್ರೀತಿ ಮತ್ತು ಅರ್ಥಮಾಡಿಕೊಂಡು ಜೀವನ ಸಾಗಿಸಿದ್ದಕ್ಕೆ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ. ಭಾರವಾದ ಮನಸ್ಸಿನಿಂದ ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆರತಿ ಜತೆಗಿನ 15ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದೇನೆ. ಇದು ತರಾತುರಿಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಅಲ್ಲ. ಕೆಲವೊಂದು ವೈಯಕ್ತಿಕ ಕಾರಣಗಳಿಂದಾಗಿ ಪರಸ್ಪರರ ಹಿತದೃಷ್ಟಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಜನರಿಗೆ ‘ಸಂತೋಷ ಮತ್ತು ಮನರಂಜನೆ’ ನೀಡುವುದು ಯಾವಾಗಲೂ ತನ್ನ ಆದ್ಯತೆಯಾಗಿದೆ ಎಂದು ಹೇಳುವ ಮೂಲಕ ಅವರು ತಮ್ಮ ಪೋಸ್ಟನ್ನು ಕೊನೆಗೊಳಿಸಿದ್ದಾರೆ. ಮತ್ತು ಅವರ ವೃತ್ತಿಜೀವನದುದ್ದಕ್ಕೂ ತಮ್ಮ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಅವರ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

2009 ರಲ್ಲಿ ಜಯಂ ರವಿ ಮತ್ತು ಆರತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ದಂಪತಿ ವಿಚ್ಛೇದನಾ ಪಡೆಯುತ್ತಿದ್ದಾರೆ ಎಂದು ವದಂತಿಗಳು ಆಗಾಗ ಕೇಳಿಬಂದಿತ್ತು. ಆದರೆ ಆರತಿ ಅವರು ತಮ್ಮ ಪತಿಯ ಹಿಟ್ ಚಿತ್ರ ಜಯಂ ಅನ್ನು ನೆನಪಿಸುವ ಚಿತ್ರವನ್ನು ಹಂಚಿಕೊಂಡು ವದಂತಿಗೆ ಅಂತ್ಯ ಹಾಡಿದ್ದರು. ರವಿ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್: II, ಇರೈವನ್ ಮತ್ತು ಸೈರೆನ್ ನಲ್ಲಿ ಕಾಣಿಸಿಕೊಂಡರು. ಅವರು ಶೀಘ್ರದಲ್ಲೇ ಬ್ರದರ್ ಮತ್ತು ಕದಳಿಕಾ ನೆರಮಿಲ್ಲೈ ಚಿತ್ರದಲ್ಲಿ ನಟಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ:Sandalwood News: ಗುರುದತ್ ಗಾಣಿಗ ನಿರ್ದೇಶನದ ‘ಜುಗಾರಿ ಕ್ರಾಸ್’ ಸಿನಿಮಾ ಅನೌನ್ಸ್! ಫಸ್ಟ್ ಲುಕ್ ಹೇಗಿದೆ ನೋಡಿ