ನಟಿಯ ಸಾವಿನ ಕೇಸ್ನಲ್ಲಿ ಬರೋಬ್ಬರಿ 10 ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲ ಯವು ತೀರ್ಪು ಪ್ರಕಟಿಸಿದೆ.
2013ರ ಜೂನ್ 3ರಂದು ಜಿಯಾ ಖಾನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಬಳಿಕ ಸೂರಜ್ ಪಾಂಚೋಲಿ ವಿರುದ್ಧ ಕೇಸ್ ದಾಖಲಾಗಿತ್ತು. ಪೊಲೀಸರಿಗೆ ಜಿಯಾ ಖಾನ್ ಮನೆಯಲ್ಲಿ ಡೆತ್ ನೋಟ್ ಕೂಡ ಪತ್ತೆ ಆಗಿತ್ತು. ಸೂರಜ್ ಪಾಂಚೋಲಿ ಜೊತೆಗಿನ ಸಂಬಂಧದಿಂದ ತಾವು ಅನುಭವಿಸಿದ ಕಷ್ಟಗಳನ್ನು ಅವರು ಡೆತ್ ನೋಟ್ನಲ್ಲಿ ಎಳೆಎಳೆ ಯಾಗಿ ವಿವರಿಸಿದ್ದರು. ಆದರೆ ಅಂತಿಮ ವಿಚಾರಣೆಯಲ್ಲಿ ಸೂರಜ್ ಪಾಂಚೋಲಿ ನಿರಪರಾಧಿ ಎಂದು ತೀರ್ಪು ಬಂದಿದೆ.
ಜಿಯಾ ಖಾನ್ ‘ನಿಶಬ್ದ್’ ಚಿತ್ರದಲ್ಲಿನ ನಟನೆಗೆ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಸಿಕ್ಕಿತ್ತು. ‘ಘಜಿನಿ’, ‘ಹೌಸ್ಫುಲ್’ ಸಿನಿಮಾಗಳಲ್ಲೂ ನಟಿಸಿ ಅವರು ಗಮನ ಸೆಳೆದಿದ್ದರು. ಚಿತ್ರರಂಗದಲ್ಲಿ ಬಾಳಿ ಬದುಕಬೇಕಾಗಿದ್ದ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ ಆಗಿದ್ದು ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ತೀವ್ರ ಆಘಾತ ಉಂಟು ಮಾಡಿತ್ತು.
ಜಿಯಾ ಖಾನ್ ಅವರದ್ದು ಆತ್ಮಹತ್ಯೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂತು. 2015ರ ಜೂನ್ ತಿಂಗಳಲ್ಲಿ ಸೂರಜ್ ಪಾಂಚೋಲಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದರು. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.