Saturday, 14th December 2024

38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಜ್ಯೂನಿಯರ್ ಎನ್ ಟಿ ಆರ್

ಹೈದರಾಬಾದ್‌: ನಟ ಜ್ಯೂನಿಯರ್ ಎನ್ ಟಿ ಆರ್ ಗುರುವಾರ ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.‌

1996ರಂದು ಗುಣಶೇಖರ್ ನಿರ್ದೇಶನದ ‘ರಾಮಾಯಣಂ’ ಚಿತ್ರದ ಮೂಲಕ ಬಾಲ ಕಲಾವಿದನಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. 2002 ರಂದು ‘ನಿನ್ನು ಚೂಡಲಾನಿ’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಜ್ಯೂ. ಎನ್ ಟಿ ಆರ್ ಅವರ ತಾಯಿ ಶಾಲಿನಿ ಭಾಸ್ಕರ್ ರಾವ್ ಕುಂದಾಪುರ ಮೂಲದವರಾಗಿರುವುದರಿಂದ ಜ್ಯೂ. ಎನ್ ಟಿ ಆರ್ ಕನ್ನಡವನ್ನು ಸೊಗಸಾಗಿ ಮಾತನಾಡುತ್ತಾರೆ.

ಜ್ಯೂ. ಎನ್ ಟಿ ಆರ್ ಗೆ ಅವರ ಅಭಿಮಾನಿಗಳಿಂದ ಹಾಗೂ ಸಿನಿತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ‘ಆರ್ ಆರ್ ಆರ್’ ಚಿತ್ರತಂಡ ಜ್ಯೂನಿಯರ್ ಎನ್ ಟಿ ಆರ್ ಅವರ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಲಿದೆ.