Wednesday, 9th October 2024

‘ಕಾಳಿ’ ಡಾಕ್ಯೂಮೆಂಟರಿ ಪೋಸ್ಟರ್‌ಗೆ ಜನಾಕ್ರೋಶ

ಬೆಂಗಳೂರು: ‘ಕಾಳಿ’ ಡಾಕ್ಯೂಮೆಂಟರಿ ಬಿಡುಗಡೆಗೆ ಸಿದ್ಧತೆ ನಡೆಸಿರುವ ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ಕಾರಣ, ಕಾಳಿ ಮಾತೆ ಸಿಗರೇಟ್ ಸೇದುವ ರೀತಿಯಲ್ಲಿ ಬಿಂಬಿಸಲಾದ ಫೋಟೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಡಾಕ್ಯೂ ಮೆಂಟರಿ ರಿಲೀಸ್ ಗೆ ಸಿದ್ಧತೆ ನಡೆಸಿರುವುದಾಗಿ ನಿರ್ದೇಶಕಿ ಲೀನಾ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೋಸ್ಟರ್ ಬಿಡಿಗಡೆಯಾಗುತ್ತಿದ್ದಂತೆ ಲೀನಾ ಮಣಿ ಮೇಕಳೈ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಪೋಸ್ಟರ್ ನಲ್ಲಿ ಕಾಳಿ ಮಾತೆ ಸಿಗರೇಟ್ ಸೇದುತ್ತಿರುವಂತೆ ತೋರಿಸಲಾಗಿದೆ. ಈ ಮೂಲಕ ಹಿಂದೂ ದೇವತೆಗಳಿಗೆ ಅವಮಾನ ಮಾಡುತ್ತಿರುವುದೂ ಅಲ್ಲದೇ, ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಲಾಗುತ್ತಿದೆ ಎಂದು ಜನರು ಕಿಡಿಕಾರಿದ್ದಾರೆ.

ಜನಪ್ರಿಯತೆಗಾಗಿ ಈ ರೀತಿ ವಿವಾದಾತ್ಮಕ ಪೋಸ್ಟರ್ ಗಳನ್ನು, ಭಾವನಾತ್ಮಕ ವಿಚಾರಗಳನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಒಟ್ಟಾರೆ ಕಾಳಿ ಡಾಕ್ಯೂಮೆಂಟರಿ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.