Sunday, 6th October 2024

ನಟ, ರಾಜಕಾರಣಿ ಕಮಲ್ ಹಾಸನ್’ಗೆ ಕರೋನಾ ಪಾಸಿಟಿವ್

ಚೆನ್ನೈ: ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರಿಗೆ ಕರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಐಸೋಲೇಷನ್ ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬಹುಭಾಷಾ ನಟ ಕಮಲ್ ಹಾಸನ್, ಸ್ವಲ್ಪ ಕೆಮ್ಮು ಕಾಣಿಸಿಕೊಂಡ ಕಾರಣ ಕರೋನಾ ಪರೀಕ್ಷೆಗೆ ಒಳಗಾಗಿದ್ದೆ. ಈಗ ಪರೀಕ್ಷೆಯ ವರದಿ ಬಂದಿದ್ದು, ನನಗೂ ಪಾಸಿಟಿವ್ ಎಂದು ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ತನ್ನನ್ನು ತಾನು ಪ್ರತ್ಯೇಕಿಸಿಕೊಂಡಿದ್ದಾನೆ. ‘ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ’ ಎಂದು ತಮ್ಮನ್ನು ತಾವು ನೋಡಿಕೊಳ್ಳುವಂತೆ ಎಲ್ಲರನ್ನೂ ಕೇಳಿಕೊಂಡಿ ದ್ದಾರೆ.

ಕಮಲ್ ಹಾಸನ್ ಅಭಿಮಾನಿಗಳು ಅವರ ಟ್ವಿಟ್ಟರ್ ಪೋಸ್ಟ್’ಗೆ ಬಹುಬೇಗ ಗುಣಮುಖರಾಗಿ ಬರುವಂತೆ ಹಾರೈಸಿದ್ದಾರೆ.