Saturday, 14th December 2024

ನಟ, ರಾಜಕಾರಣಿ ಕಮಲ್ ಹಾಸನ್ ಕಾರಿನ ಮೇಲೆ ದಾಳಿ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರ ಮುಗಿಸಿ ಹೋಟೆಲ್ ಗೆ ತೆರಳುತ್ತಿದ್ದ ನಟ, ರಾಜಕಾರಣಿ ಕಮಲ್ ಹಾಸನ್ ಮೇಲೆ ದಾಳಿ ನಡೆಸಿದ ಪ್ರಕರಣ ಭಾನುವಾರ ತಡರಾತ್ರಿ ಸಂಭವಿಸಿದೆ.

ತಮಿಳುನಾಡಿನ ಕಾಂಚಿಪುರಂನಲ್ಲಿ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಮೇಲೆ ದಾಳಿ ನಡೆಲಾಗಿದೆ. ಹೋಟೆಲ್ ಕಡೆ ತೆರಳುತ್ತಿದ್ದ ವೇಳೆ ಯುವಕನೋರ್ವ ಕಮಲ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ಕಾರಿನ ವಿಂಡ್ ಸ್ಕ್ರೀನ್ ಗೆ ಹಾನಿಯಾಗಿದ್ದು, ಕಮಲ್ ಹಾಸನ್ ಗೆ ಅಪಾಯವಿಲ್ಲದೆ ಪಾರಾಗಿದ್ದಾರೆ.

ಯುವಕ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ. ಎಂಎನ್ ಎಂ ಪಕ್ಷದ ಕಾರ್ಯಕರ್ತರು ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ದ್ದಾರೆ. ಪಕ್ಷದ ಕಾರ್ಯದರ್ಶಿ ಎ.ಜಿ.ಮೌರ್ಯ, ಕುತಂತ್ರ ರಾಜಕಾರಣಕ್ಕೆ ಪಕ್ಷ ಹೆದರುವುದಿಲ್ಲ ಎಂದಿದ್ದಾರೆ. ಸೋಮವಾರ ಕಮಲ್ ಹಾಸನ್ ಕೊಯಮತ್ತೂರಿನಲ್ಲಿ ಪ್ರಚಾರ ಮಾಡಲಿದ್ದಾರೆ ಎಂದಿದ್ದಾರೆ.