Sunday, 6th October 2024

ನಟ ಕಮಲ್ ಹಾಸನ್ ಡಿಸ್ಚಾರ್ಜ್

kamal hasan

ಚೆನ್ನೈ: ಕೋವಿಡ್ ಚಿಕಿತ್ಸೆಯ ಎರಡು ವಾರಗಳ ನಂತರ,  ನಟ ಕಮಲ್ ಹಾಸನ್ ಅವರು ಚೆನ್ನೈನ ರಾಮಚಂದ್ರ ವೈದ್ಯಕೀಯ ಕೇಂದ್ರದಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬಹುಭಾಷಾ ನಟ ಕಮಲ್ ಹಾಸನ್ ಪೋಟೋ ಶೇರ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸೋಂಕಿಗೆ ಚಿಕಿತ್ಸೆಯ ಬಳಿಕ ಗುಣಮುಖರಾಗಿ, ಶ್ರೀ ರಾಮಚಂದ್ರ ವೈದ್ಯಕೀಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದೇನೆ. ನನಗೆ ಚಿಕಿತ್ಸೆ ನೀಡಿದ ವೈದ್ಯರಿಗೆ, ಗುಣಮುಖರಾಗಲೆಂದು ಹಾರೈಸಿ, ಅರಸಿದಂತ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳಿಗೆ ಧನ್ಯವಾದ ಗಳನ್ನು ತಿಳಿಸಿದ್ದಾರೆ.

ಕಮಲ್ ಹಾಸನ್ ಅವರು ಯುಎಸ್ ನ ಚಿಕಾಗೋ ತೆರಳಿ, ವಾಪಾಸ್ ದೇಶಕ್ಕೆ ಮರಳಿದ ಬಳಿಕ ಕೆಮ್ಮು ಕಾಣಿಸಿಕೊಂಡಿತ್ತು. ಹೀಗಾಗಿ ನ.22ರಂದು ಪರೀಕ್ಷೆಗೆ ಒಳಪಟ್ಟಾಗ, ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇದರಿಂದಾಗಿ ಚೈನ್ನೈನ ಶ್ರೀರಾಮ ಚಂದ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.