Tuesday, 15th October 2024

ಬಹುಭಾಷಾ ನಟಿ, ಅಭಿನಯ ಶಾರದೆ ಜಯಂತಿ ನಿಧನ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ಸೋಮವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

1968 ರಲ್ಲಿ ತೆರೆ ಕಂಡ ವೈ,ಅರ್.ಸ್ವಾಮಿ ನಿರ್ದೇಶನದ ‘ಜೇನು ಗೂಡು ‘ ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು’ಕಮಲ ಕುಮಾರಿ. ‘ಜಗದೇಕ ವೀರನ ಕಥೆ ‘ಚಿತ್ರದಲ್ಲಿ ಸಣ್ಣ ಪಾತ್ರ ವೊಂದರಲ್ಲಿ ಅಭಿನಯಿಸಿದ್ದಾರೆ. ಒಟ್ಟು ಆರು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ 190 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಜಯಂತಿ ಅವರು ಒಟ್ಟು ಆರು ಭಾಷೆಗಳಲ್ಲಿ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವರನಟ ಡಾ. ರಾಜ್ ಕುಮಾರ್ ಜೊತೆಗೆ ಸುಮಾರು 45 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ನಿರ್ಮಾಪಕಿಯೂ, ನಿರ್ದೇಶಕಿಯೂ ಆಗಿರುವ ಇವರು 1965 ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ‘ಎರಡು ಮುಖ'(1969), ಮನಸ್ಸಿನಂತೆ ಮಾಂಗಲ್ಯ'(1976),’ಧರ್ಮ ದಾರಿ ತಪ್ಪಿತು'(1981), ಮಸಣದ ಹೂವು (1985),’ಆನಂದ್ ‘(1989) ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ.

ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ಕಾಮತೃಷೆಯಿಂದ ಬಳಲುವ ಹೆಣ್ಣಾಗಿ ಮೊದಲ ಭಾರಿಗೆ ವಿಶಿಷ್ಟ ಅಭಿನಯ ನೀಡಿದ್ದಾರೆ.