Saturday, 12th October 2024

ಜು.28 ರಂದು ಕೌಸಲ್ಯ ಸುಪ್ರಜಾ ರಾಮ ಸಿನಿಮಾ ರಿಲೀಸ್

ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಶಶಾಂಕ್ ನಿರ್ದೇಶನದ ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ರಿಲೀಸ್ ದಿನಾಂಕ ಬಹಿರಂಗವಾಗಿದೆ.
ಮೋಷನ್ ಪೋಸ್ಟರ್ ಮೂಲಕ ಸಿಂಪಲ್ ಆಗಿ ಚಿತ್ರದ ರಿಲೀಸ್ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಜುಲೈ 28 ರಂದು
ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.
ಯಾವುದೇ ಪ್ರಚಾರ ಇಲ್ಲದೇ ರಿಲೀಸ್ ದಿನಾಂಕ ಘೋಷಿಸುವುದಾಗಿ ಶಶಾಂಕ್ ವಿಡಿಯೋ ಮೂಲಕ ತಿಳಿಸಿದ್ದರು. ಕಳೆದ ವರ್ಷ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಅದಾದ ಬಳಿಕ ಬರುತ್ತಿರುವ ಶಶಾಂಕ್ ನಿರ್ದೇಶನದ ಮತ್ತೊಂದು ಸಿನಿಮಾ ಇದಾಗಿದೆ.