Friday, 13th December 2024

ಕೇಸರಿ ಬಿಕಿನಿ ಭಾರೀ ವಿವಾದ: ಅರ್ಜಿ ವಜಾ

ವದೆಹಲಿ: ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ತೊಟ್ಟಿದ್ದ ಕೇಸರಿ ಬಿಕಿನಿ ಭಾರೀ ವಿವಾದಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ಮುಂಬೈನ ಶ್ರೀರಾಂಪುರ್ ಸಿವಿಲ್ ಕೋರ್ಟ್ ಅರ್ಜಿ ವಜಾಗೊಳಿಸಿದೆ.

ಈ ಹಾಡನ್ನು ಯೂಟ್ಯೂಬ್ ನಿಂದ ತೆಗೆದು ಹಾಕುವಂತೆ ಮುಂಬೈನ ಸುರೇಶ್ ಪಾಟೀಲ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು.

ಸಿನಿಮಾದ ಟೀಸರ್ ಮತ್ತು ಅದರ ‘ಬೇಶರಾಮ್ ರಂಗ್’ ಹಾಡಿನ ಟೀಸರ್ ಗಳನ್ನು ಯು /ಎ ಸೆನ್ಸಾರ್ ಪ್ರಮಾಣ ಪತ್ರವನ್ನು ತೋರಿಸದೆ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡುವುದನ್ನು ತಡೆಯಲು ತಾತ್ಕಾಲಿಕ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ನ್ಯಾಯಾಲಯ ತಿರಸ್ಕರಿಸಿದೆ.

ಅಹ್ಮದ್ ನಗರದ ಶ್ರೀರಾಂಪುರ ನ್ಯಾಯಾಲಯದ ಜಂಟಿ ಸಿವಿಲ್ ನ್ಯಾಯಾಧೀಶ ಪಿ.ಎ.ಪಟೇಲ್ ಅವರು ಫೆಬ್ರವರಿ 8 ರಂದು ಅರ್ಜಿಯನ್ನು ತಿರಸ್ಕರಿಸಿದ್ದು, ಅರ್ಜಿದಾರರು ತಮ್ಮ ಹಕ್ಕುಗಳಿಗೆ ಅಡಿಪಾಯವನ್ನು ತೋರಿಸಲು ಏನನ್ನಾ ದರೂ ಹಾಜರುಪಡಿಸಬೇಕು ಎಂದು ಹೇಳಿದ್ದಾರೆ.