Wednesday, 11th December 2024

Kichcha Sudeep Remuneration: ಬಿಗ್ ಬಾಸ್ ಕನ್ನಡ ಮೊದಲ ಸೀಸನ್​ನಲ್ಲಿ ಸುದೀಪ್ ಪಡೆದ ಸಂಭಾವನೆ ಎಷ್ಟು ಗೊತ್ತೇ?

Sudeep Bigg Boss remuneration

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss kannada 11) ಶುರುವಾಗಿ ಎರಡು ವಾರಗಳಾಗಿವೆಷ್ಟೆ. ಬಹುನಿರೀಕ್ಷಿತ ಶೋ ರೋಚಕತೆ ಪಡೆಯುತ್ತಿದೆ ಎನ್ನುವಾಗ ಇದೀಗ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಆಘಾತಕಾರಿ ಸುದ್ದಿ ನೀಡಿದ್ದಾರೆ. ಇದು ನನ್ನ ಕೊನೆಯ ಬಿಗ್ ಬಾಸ್ ಕಾರ್ಯಕ್ರಮ, ಮುಂದಿನ ಸೀಸನ್​ನಿಂದ ನಾನು ಇರುವುದಿಲ್ಲ ಎಂದು ಹೇಳಿ ಅಭಿಮಾನಿಗಳಿಗೆ ಮತ್ತು ಬಿಗ್ ಬಾಸ್ ವೀಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ.

ಕಳೆದ 10 ಸೀಸನ್​ನಲ್ಲಿ ಬಂದ ಎಲ್ಲ ಸ್ಪರ್ಧಿಗಳ ಜೊತೆ ಪ್ರತಿ ವೀಕೆಂಡ್ ಬಂದು ಸುದೀಪ್ ಅವರು ಒಂದುಚೂರು ನೋವಾಗದಂತೆ, ತಮ್ಮ ಮನೆ ಸದಸ್ಯರಂತೆ ನೋಡಿಕೊಂಡಿದ್ದಾರೆ. ಶೋಗೆ ಕೂಡ ಯಾವುದೇ ಧಕ್ಕೆಯಾಗದಂತೆ ನಡೆಸಿಕೊಟ್ಟಿದ್ದಾರೆ. ಆದರೆ, ಇದೀಗ ಸುದೀಪ್ ಅವರು ಬಿಗ್‌ ಬಾಸ್‌ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಾನು ನಿರೂಪಕನಾಗಿರುವ ಕೊನೆಯ ಬಿಗ್‌ಬಾಸ್ ಸೀಸನ್ ಇದಾಗಿದ್ದು, ಮುಂದಿನ ವರ್ಷದಿಂದ ತಾನು ಇದರಿಂದ ಹೊರಬರುತ್ತೇನೆ ಎಂದು ಹೇಳಿದ್ದಾರೆ.

ಸುದೀಪ್ ಅವರು ಬಿಗ್ ಬಾಸ್ ಶೋ ಅನ್ನು ಒಂದು ಸೀಸನ್​ಗೆಂದು ಒಪ್ಪಿಕೊಳ್ಳುವುದಿಲ್ಲ. ಆಯೋಜಕರು ಮತ್ತು ಸುದೀಪ್ ನಡುವೆ ನಾಲ್ಕು ಅಥವಾ 5 ವರ್ಷಕ್ಕೆಂದು ಡೀಲ್ ಆಗಿರುತ್ತದೆ. ಸೀಸನ್ 11 ಆರಂಭಕ್ಕೂ ಮುನ್ನ ಸುದೀಪ್ ಕೇವಲ 10 ಸೀಸನ್ ಮಾತ್ರ ಹೋಸ್ಟ್ ಮಾಡುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಅಗ್ರಿಮೆಂಟ್ ಅಲ್ಲಿವರೆಗೆ ಮಾತ್ರ ಆಗಿತ್ತು ಎನ್ನಲಾಗಿತ್ತು.

ಬಿಗ್ ಬಾಸ್ ಸೀಸನ್‌ 11ಕ್ಕೆ ಸುದೀಪ್ ಅವರು ಒತ್ತಾಯದ ಮೇರೆಗೆ ಬಂದಿದ್ದಾರೆ ಎಂಬ ಮಾತು ಕೂಡ ಇದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಆದರೆ, ಸುದೀಪ್ 11 ನೇ ಸೀಸನ್‌ಗೆ ಯಾವುದೇ ಅಗ್ರಿಮೆಂಟ್ ಮಾಡಿಕೊಂಡಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ ಇವರು ಈ ಸೀಸನ್​ಗೆ 8 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿ ಆಗಿದೆ.

2015 ರಲ್ಲಿ ಸುದೀಪ್‌ ಅವರು ಕಲರ್ಸ್‌ ಕನ್ನಡದ ಜತೆ ಬಿಗ್‌ ಬಾಸ್‌ ನಿರೂಪಣೆಯ ಒಪ್ಪಂದಕ್ಕೆ ಸಹಿ ಹಾಕಿದ್ದರು. ಮೊದಲು ಇದು ಐದು ವರ್ಷದ ಅಗ್ರಿಮೆಂಟ್‌ ಆಗಿತ್ತು. ವರದಿಗಳ ಪ್ರಕಾರ, ಆ ಸಮಯದಲ್ಲಿ 20 ಕೋಟಿ ರೂಪಾಯಿಯ ಒಪ್ಪಂದಕ್ಕೆ ಸುದೀಪ್‌ ಸಹಿ ಹಾಕಿದ್ದರು. ಅಂದರೆ, ಪ್ರತಿ ಸೀಸನ್​ಗೆ ಅವರು ಐದು ಕೋಟಿ ರೂಪಾಯಿ ಪಡೆದಂತೆ ಆಗುತ್ತದೆ. ಇದಾದ ಬಳಿಕ ಇವರ ಮುಂದಿನ ವರ್ಷಗಳ ಬಿಗ್‌ಬಾಸ್‌ ಕನ್ನಡ ನಿರೂಪಣೆಯ ಸಂಭಾವಣೆ ಗಮನಾರ್ಹವಾಗಿ ಏರಿಕೆ ಕಂಡಿದೆ.

Kichcha Sudeep: ಸುದೀಪ್ ಬಿಗ್ ಬಾಸ್​ನಿಂದ ಹೊರ ಬರಲು ಇದೇ ಕಾರಣ?: ಇಂದು ರಿವೀಲ್ ಆಗಲಿದೆ ಬಿಗ್ ನ್ಯೂಸ್