Friday, 13th December 2024

BBK 11: ರಾಜಕುಟುಂಬದ ಕತೆಯ ಸಾರಾಂಶ ಹೇಳಲು ಬಂದ ಸುದೀಪ್: ಯಾರಿಗೆ ತೆಗೋತಾರೆ ಕ್ಲಾಸ್?

Kichcha Sudeep

ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ಒಂಬತ್ತನೇ ವಾರದ ಪಂಚಾಯಿತಿ ಇಂದು ನಡೆಯಲಿದೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಮೇಲೆ ಎಲ್ಲರ ಕಣ್ಣಿದೆ. ಯಾಕೆಂದರೆ ಈ ವಾರ ಮನೆಯಲ್ಲಿ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿತ್ತು. ಮೊದಲ ಎರಡು ದಿನ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದರು. ಆದರೆ, ಬುಧವಾರ ಬಿಗ್ ಬಾಸ್ ಇದರಲ್ಲೊಂದು ಟ್ವಿಸ್ಟ್ ಕೊಟ್ಟರು. ಮನೆಗೆ ಯುವರಾಣಿಯಾಗಿ ಮೋಕ್ಷಿತಾ ಪೈ ಬಂದು ಮನೆ ಎರಡು ಬಣವಾಯಿತು.

ಯುವರಾಣಿಯ ಆಗಮನದಿಂದ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಜೊತೆಗೆ ಅನೇಕ ಜಗಳಗಳು ಕೂಡ ನಡೆದಿವೆ. ರಜತ್ ಹಾಗೂ ಮಂಜು ಬಾಯಿಂದ ಕೆಲ ಪದಕ ಬಳಕೆ ಕೂಡ ಆಗಿವೆ. ಇದೀಗ ವಾರಾಂತ್ಯ ಬಂದಿದ್ದು ಸುದೀಪ್ ಬಂದಿದ್ದಾರೆ. ಈ ವಾರದ ಪಂಚಾಯಿತಿಯಲ್ಲಿ, ರಾಜ, ರಾಣಿಯರ ಆಡಳಿತದ ವಿಶ್ಲೇಷಣೆ ಮಾಡಲಿದ್ದಾರೆ.

ಬಿಗ್ ​ಬಾಸ್​ ಬರೆದಂತ ಸಾಮ್ರಾಜ್ಯದಲ್ಲಿ ವೈಯಕ್ತಿಕವಾಗಿ ನೋವು ಮಾಡಿದ್ದವರು ಯಾರು? ನೋವು ತೆಗೆದುಕೊಂಡಿದ್ದು ಯಾರು? ಬಕ್ರಾ ಆಗಿದ್ಯಾರು? ಅಂತ ಹೇಳುತ್ತಾ ವಾರದ ಕತೆ ಕಿಚ್ಚನ ಜೊತೆ ಪಂಚಾಯಿತಿಗೆ ಎಂಟ್ರಿ ಕೊಟ್ಟಿದ್ದಾರೆ. ಪಂಚಾಯಿತಿಯಲ್ಲಿ ಉಗ್ರಂ ಮಂಜು, ಗೌತಮಿ ಜಾಧವ್ ಹಾಗೂ ಮೋಕ್ಷಿತಾ ಪೈಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ಸದಾ ಪಾಸಿಟಿವಿಟಿ ಎನ್ನುತ್ತಿದ್ದ ಗೌತಮಿಗೆ ಬಿಸಿ ಮುಟ್ಟಿಸಿದ್ದಾರೆ.

ಯಾರು ಎಲಿಮಿನೇಟ್?: ಈ ವಾರ ಮನೆಯಿಂದ ಹೊರ ಹೋಗಲು ಏಳು ಮಂದಿ ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ, ಶೋಭಾ ಶೆಟ್ಟಿ, ಶಿಶಿರ್ ಶಾಸ್ತ್ರೀ, ಐಶ್ವರ್ಯಾ ಸಿಂಧೋಗಿ, ಭವ್ಯಾ ಗೌಡ, ತ್ರಿವಿಕ್ರಮ್, ಗೋಲ್ಡ್ ಸುರೇಶ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಮನೆಯಿಂದ ನಿರ್ಗಮಿಸಬಹುದು ಎಂಬುದು ಕುತೂಹಲ ಕೆರಳಿಸಿದೆ. ಕಳೆದ ವಾರ ಮನೆಯಿಂದ ಧರ್ಮಾ ಕೀರ್ತಿರಾಜ್ ಎಲಿಮಿನೇಟ್ ಆಗಿ ಹೊರಬಂದರು.

BBK 11: ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಔಟ್?