ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Konda Surekha: ನಾಗಾರ್ಜುನ ಕುಟುಂಬದ ವಿರುದ್ಧ ಹೇಳಿಕೆ ಹಿಂತೆಗೆದುಕೊಂಡ ಕೊಂಡ ಸುರೇಖಾ

ಟಾಲಿವುಡ್ ನ ಅತ್ಯಂತ ಸುಂದರ ಸೆಲೆಬ್ರಿಟಿ ಜೋಡಿ ಎಂದೇ ಖ್ಯಾತಿ ಪಡೆದಿದ್ದ ನಾಗ ಚೈತನ್ಯ ಮತ್ತು ಸಮಂತಾ ಋತು ಪ್ರಭು ಅವರ ವಿಚ್ಛೇದನಕ್ಕೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಕಲ್ವಕುಂಟ್ಲ ತಾರಕ ರಾಮರಾವ್ (ಕೆಟಿಆರ್) ಕಾರಣ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದ ಸಚಿವೆ ಕೊಂಡ ಸುರೇಖಾ ಅವರು ವಿರುದ್ಧ ಕೇಸು ದಾಖಲಾದ ಬಳಿಕ ಇದೀಗ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ.

ಕೊಂಡ ಸುರೇಖಾಗೆ ಕ್ಷಮೆ ಕೇಳಿ ಎಂದ ಸಮಂತಾ ಅಭಿಮಾನಿಗಳು

-

ಹೈದರಾಬಾದ್: ನಟ ನಾಗಾರ್ಜುನ ಕುಟುಂಬದ (Nagarjun family) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಸಚಿವೆ ಕೊಂಡ ಸುರೇಖಾ (Telangana Minister Konda Surekha) ಅವರು ಇದೀಗ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದು, ಅವರು ನಟಿ ಸಮಂತಾ ಋತು ಪ್ರಭು ( Samantha Ruth Prabhu) ಬಳಿ ಕ್ಷಮೆ ಕೇಳಬೇಕು ಎಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಒಂದು ಕಾಲದಲ್ಲಿ ಟಾಲಿವುಡ್ ನ ಅತ್ಯಂತ ಸುಂದರ ಸೆಲೆಬ್ರಿಟಿ ಜೋಡಿ ಎಂದೇ ಖ್ಯಾತಿ ಪಡೆದಿದ್ದ ನಾಗ ಚೈತನ್ಯ (Naga chaitanya) ಮತ್ತು ಸಮಂತಾ ಋತು ಪ್ರಭು ಅವರ ವಿಚ್ಛೇದನಕ್ಕೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಕಲ್ವಕುಂಟ್ಲ ತಾರಕ ರಾಮರಾವ್ (KTR) ಕಾರಣ ಎಂದು ಸಚಿವೆ ಕೊಂಡ ಸುರೇಖಾ ಹೇಳಿದ್ದು ವಿವಾದ ಉಂಟು ಮಾಡಿತ್ತು.

ನಟರಾದ ನಾಗ ಚೈತನ್ಯ ಮತ್ತು ಸಮಂತಾ ಋತು ಪ್ರಭು ಅವರ ವಿಚ್ಛೇದನಕ್ಕೆ ಕೆಟಿಆರ್ ಕಾರಣ ಎಂದು ಸಚಿವೆ ಕೊಂಡ ಸುರೇಖಾ ಹೇಳಿದ್ದು,ಅವರ ವಿರುದ್ಧ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾಗಾರ್ಜುನ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸುರೇಖಾ ಅವರ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. ಬಳಿಕ ಅವರು ನಾಗಾರ್ಜುನ ಅವರ ಕುಟುಂಬದ ವಿರುದ್ಧ ಮಾಡಿದ ಆರೋಪಗಳನ್ನು ಹಿಂಪಡೆಯುವುದಾಗಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ITC ಸನ್‌ಫೀಸ್ಟ್ ಫ್ಯಾಂಟಾಸ್ಟಿಕ್ ವತಿಯಿಂದ “ಚೊಕೊ ಮೆಲ್ಟ್ಜ್” ಬಿಡುಗಡೆ

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದಿರುವ ಸುರೇಖಾ, ನಾಗಾರ್ಜುನ ಅಥವಾ ಅವರ ಕುಟುಂಬ ಸದಸ್ಯರಿಗೆ ಎಂದಿಗೂ ನೋವುಂಟು ಮಾಡುವುದು ಉದ್ದೇಶವಲ್ಲ ತನ್ನದಲ್ಲ. ಅವರ ಮಾನಹಾನಿ ಮಾಡುವ ಉದ್ದೇಶ ನನಗಿರಲಿಲ್ಲ. ಅವರ ಸಂಬಂಧದ ಕುರಿತು ನನ್ನ ಹೇಳಿಕೆಗಳಲ್ಲಿ ನೀಡಲಾದ ಯಾವುದೇ ಅನಿರೀಕ್ಷಿತ ಅನಿಸಿಕೆಗೆ ನಾನು ವಿಷಾದಿಸುತ್ತೇನೆ ಮತ್ತು ಅದನ್ನು ಹಿಂಪಡೆಯುತ್ತೇನೆ ಎಂದು ತಿಳಿಸಿದ್ದಾರೆ.

ಸುರೇಖಾ ಅವರು ತಮ್ಮ ಹೇಳಿಕೆಯಲ್ಲಿ ನಾಗಾರ್ಜುನ ಮತ್ತು ಚೈತನ್ಯ ಬಗ್ಗೆ ಮಾತ್ರವಲ್ಲದೆ ಸಮಂತಾ ಮತ್ತು ಕೆಟಿಆರ್ ಬಗ್ಗೆಯೂ ಮಾತನಾಡಿದ್ದಾರೆ. ಹೀಗಾಗಿ ಅವರು ಕೇವಲ ನಾಗಾರ್ಜುನ ಮತ್ತು ನಾಗ ಚೈತನ್ಯ ಬಳಿ ಕ್ಷಮೆ ಕೇಳಿದರೆ ಸಾಲದು. ಸಮಂತಾ ಮತ್ತು ಕೆಟಿಆರ್ ಬಳಿಯೂ ಕ್ಷಮೆಯಾಚನೆ ಮಾಡಬೇಕು. ಅವರಿಬ್ಬರ ಕ್ಷಮೆ ಅವರು ಯಾಕೆ ಕೇಳಿಲ್ಲ. ಸುರೇಖಾ ಅವರು ಕೇವಲ ತಾಂತ್ರಿಕವಾಗಿ ತಮ್ಮ ಹೇಳಿಕೆ ಹಿಂಪಡೆದಿದ್ದಾರೆ ಅವರು ಕ್ಷಮೆಯಾಚನೆ ಮಾಡಿಲ್ಲ ಎಂದು ಅನೇಕರು ತಿಳಿಸಿದ್ದಾರೆ.



ಸಮಂತಾ ಅವರ ಒಬ್ಬ ಅಭಿಮಾನಿ ಪೋಸ್ಟ್ ಮಾಡಿ, ಮೇಡಂ ನೀವು ಗೌರವಾನ್ವಿತ ಮಹಿಳೆ, ನಮ್ಮ ರಾಜ್ಯದ ಅತ್ಯುನ್ನತ ಅಧಿಕಾರ ಸ್ಥಾನಗಳಲ್ಲಿ ಒಬ್ಬರಾಗಿದ್ದೀರಿ. ದಯವಿಟ್ಟು ಇತರ ಮಹಿಳೆಯರ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುವ ಮೊದಲು ಯೋಚಿಸಿ ಎಂದಿದ್ದಾರೆ. ಇನ್ನೊಬ್ಬರು, .ಉದ್ದೇಶಪೂರ್ವಕವಲ್ಲವೇ? ನಿಮಗೆ ಕನಿಷ್ಠ ವಿಷಾದ ಮತ್ತು ಗೌರವವಿದ್ದರೆ ಮೊದಲು ನೀವು ಕೆಸರು ಎಸೆದ ನಟಿಯ ಬಳಿ ಕ್ಷಮೆಯಾಚಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Menstrual Leave Policy: ಮಹಿಳಾ ನೌಕರರಿಗೆ ಗುಡ್‌ ನ್ಯೂಸ್‌; ಮಾಸಿಕ ಒಂದು ಋತುಚಕ್ರ ರಜೆ ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ

ಇನ್ನೊಬ್ಬರು, ಇದನ್ನು ಕ್ಷಮೆಯಾಚನೆ ಎಂದು ಕರೆಯಲಾಗುವುದಿಲ್ಲ. ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವ ದಿನದ ಮೊದಲು ಕೇವಲ ತಾಂತ್ರಿಕವಾಗಿ ಕ್ಷಮೆಯಾಚಿಸಿದ್ದಿರಿ. ಹೆಚ್ಚಿನ ವಿವರಣೆ ಇಲ್ಲ, ಸಕ್ಕರೆ ಲೇಪನ ಅಗತ್ಯವಿಲ್ಲ. ಕ್ಷಮೆಯಾಚಿಸಲು ಈಗಾಗಲೇ ಒಂದು ವರ್ಷವನ್ನು ತೆಗೆದುಕೊಂಡಿದ್ದೀರಿ ಎಂದು ತಿಳಿಸಿದ್ದಾರೆ.